ನವದೆಹಲಿ: ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ದೇಶಾದ್ಯಂತ ತೈಲ ಬೆಲೆಗಳನ್ನು ಪರಿಷ್ಕರಿಸಲಾಗಿದ್ದು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಪೆಟ್ರೋಲ್ ಬೆಲೆಯು 4 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ದರ 13 ಪೈಸೆ ಹೆಚ್ಚಳವಾಗಿದೆ. ಈ ಬೆಲೆಗಳು ಮಾರ್ಚ್ 23, 2018ರ ಬೆಳಿಗ್ಗೆ 6:00 ಗಂಟೆಯಿಂದ ಅನ್ವಯಿಸುತ್ತದೆ.
ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ
ನಗರಗಳು | ಪೆಟ್ರೋಲ್(ರೂ / ಲೀಟರ್) | ಡೀಸೆಲ್ (ರೂ / ಲೀಟರ್) |
ನವದೆಹಲಿ | 72.30 | 63.01 |
ಕೋಲ್ಕತ್ತಾ | 75.04 | 65.70 |
ಮುಂಬೈ | 80.17 | 67.10 |
ಚೆನ್ನೈ | 74.98 | 66.44 |
ಬೆಂಗಳೂರು | 73.44 | 64.07 |
ಹೈದರಾಬಾದ್ | 76.56 | 68.46 |
ತಿರುವನಂತಪುರಂ | 76.19 | 68.40 |