ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೂ ಕನಿಕರ ತೋರದ ಪವಿತ್ರಗೌಡ..! ಚಪ್ಪಲಿಯಿಂದ ರೇಣುಕಾಸ್ವಾಮಿ ಮೇಲೆ ಹಲ್ಲೆ 

Pavithra Gowda case : ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಎರಡನೇ ಹಂತದ ತನಿಖೆ ಶುರು ಆಗಿದೆ.. ನಿನ್ನೆ ದರ್ಶನ್ ಸೇರಿ 13 ಜನ್ರನ್ನ ಮತ್ತೆ ಕಸ್ಟಡಿಗೆ ಪಡೆದಿದ್ದ ಪೊಲೀಸರು ಸ್ಫೋಟಕ ವಿಷ್ಯಗಳನ್ನ ಉಲ್ಲೇಖಿಸಿದ್ರು.. ಅದಕ್ಕೆ ತಕ್ಕ ಹಾಗೆ ಈಗಾಗಲೇ ಎವಿಡೆನ್ಸ್ ಗಳು ಸಿಕ್ಕಿದ್ದು ಕರೆಂಟ್ ಶಾಕ್ ವಿಚಾರ ಮಾತ್ರ ಶಾಕಿಂಗ್ ಆಗಿತ್ತು.. ಅಷ್ಟಕ್ಕೂ ಇವತ್ತು ಏನೆಲ್ಲಾ ಇನ್ವೆಷ್ಟಿಗೇಷನ್ ಆಯ್ತು.. ಹೇಳ್ತೀವಿ.. ನೋಡಿ..

Written by - Krishna N K | Last Updated : Jun 16, 2024, 07:37 PM IST
    • ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ಮತ್ತೊಂದು ಹಂತದ ತನಿಖೆ
    • ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟು ಚಿತ್ರ ಹಿಂಸೆ, ಕಟೋರ ಕಾಟೇರನ ಗ್ಯಾಂಗ್
    • ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೂ ಕನಿಕರ ತೋರದ ಪವಿತ್ರಗೌಡ
ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೂ ಕನಿಕರ ತೋರದ ಪವಿತ್ರಗೌಡ..! ಚಪ್ಪಲಿಯಿಂದ ರೇಣುಕಾಸ್ವಾಮಿ ಮೇಲೆ ಹಲ್ಲೆ  title=

Renukaswamy murder case : ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಮತ್ತೊಂದು ಸ್ಪೋಟಕ ವಿಚಾರ ಹೊರ ಬಿದ್ದಿದೆ.. ಚಿತ್ರಹಿಂಸೆ ನೀಡಿ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯನ್ನ ಕೊಲೆ ಮಾಡಿದ್ದು ಗೊತ್ತೇ ಇದೆ.. ಆದ್ರೆ ಆ ಸಣ್ಣ ದೇಹಕ್ಕೆ ಎಲೆಕ್ಟ್ರಾನಿಕ್ ಡಿವೈಸ್ ನಿಂದಲೂ ಕರೆಂಟ್ ಶಾಕ್ ನೀಡಿ ಸಿನಿಮಾ ಸ್ಟೈಲ್ ನಲ್ಲಿ ಕಿರುಕುಳ ಕೊಟ್ಟಿತ್ತು ಅನ್ನೋ ಸ್ಫೋಟಕ ವಿಚಾರ ಬಯಲಿಗೆ ಬಿದ್ದಿದೆ.. ನಿನ್ನೆ ಇದು ಸೇರಿದಂತೆ ಹಲವು ಅಂಶಗಳನ್ನ ಉಲ್ಲೇಖಿಸಿ ಪೊಲೀಸರು ಎರಡನೇ ಬಾರಿ ಹದಿಮೂರು ಆರೋಪಿಗಳನ್ನ ಕಸ್ಟಡಿಗೆ ಪಡೆದಿದ್ದು ಕಾಟೇರನ ಟೀಂನ ಕ್ರೌರ್ಯದ ಬಗ್ಗೆ ಮತ್ತಷ್ಟು ಬಾಯ್ಬಿಡಿಸಲಾಗ್ತಿದೆ..

ಕರೆಂಟ್ ಶಾಕ್ ಕೊಟ್ಟಿರೋ ವಿಚಾರ ಸೇರಿ ದರ್ಶನ್ ವಿರುದ್ಧ ಮತ್ತಷ್ಟು ಸಾಕ್ಷ್ಯಗಳು ಪೊಲೀಸರ ತನಿಖೆ ವೇಳೆ ಗೊತ್ತಾಗ್ತಿವೆ.. ಜೊತೆಗೆ ಪವಿತ್ರಗೌಡ ವಿಚಾರದಲ್ಲೂ ಮತ್ತಷ್ಟು ಸಾಕ್ಷ್ಯಗಳು ಪತ್ತೆಯಾಗಿದ್ದು ಆಕೆಯ ಪಿಎ ದೇವರಾಜ್ ಎಂಬಾತನನ್ನೂ ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ.. ಕೊಲೆ ನಡೆದ ದಿನ ಪವಿತ್ರ ಗೌಡ ಜೊತೆ ದೇವರಾಜ್ ಕೂಡ ಶೆಡ್ ಗೆ ಹೋಗಿದ್ನಂತೆ.. 

ಇದನ್ನೂ ಓದಿ:ಸೈಫ್-ಕರೀನಾ ಮದುವೆಯಲ್ಲಿ ಪಾತ್ರೆ ತೊಳೆದವನು ಇಂದು ಸ್ಟಾರ್ ನಟ! ಆತ ಬೇರಾರು ಅಲ್ಲ…

ಪವಿತ್ರಗೌಡಳನ್ನ ನೋಡಿದ್ದ ಕೂಡಲೇ ರೇಣುಕಾಸ್ವಾಮಿ ಆಕೆ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ನಂತೆ.. ಈ ವೇಳೆ ಫಸ್ಟ್ ಪವಿತ್ರಗೌಡಾನೇ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಂತೆ.. ರೇಣುಕಾಸ್ವಾಮಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೂ ಕಾಲಲ್ಲಿ ಇದ್ದ ಚಪ್ಪಲಿ ತಗೊಂಡು ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ಳಂತೆ.. ಅದಾದ್ಮೇಲೆ ದರ್ಶನ್ ಮತ್ತು ಗ್ಯಾಂಗ್ ನಿಂದ ಚಿತ್ರ ಹಿಂಸೆ ನೀಡಿ ಕೊಲೆ ಮಾಡಲಾಗಿದೆ.. 

ಅಲ್ಲಿ ಕೆಲ ಹೊತ್ತು ಇದ್ದ ಪವಿತ್ರಗೌಡ ನೇರವಾಗಿ ತನ್ನ ಮನೆಗೆ ಹೋಗಿದ್ಳು.. ಹೀಗಾಗಿ ಇವತ್ತು ಪೊಲೀಸರು ಪವಿತ್ರಗೌಡಳನ್ನ ಆಕೆ ಮನೆಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ರು.. ಅಲ್ಲದೇ ಆಕೆ ಕೊಲೆ ನಡೆದ ದಿನ ಧರಿಸಿದ್ದ ಬಟ್ಟೆ, ರೇಣುಕಾಸ್ವಾಮಿಗೆ ಹೊಡೆದಿದ್ದ ಚಪ್ಪಲಿ ಸೇರಿ ಹಲವು ಎವಿಡೆನ್ಸ್ ಗಳನ್ನ ವಶಪಡೆದಿದ್ದಾರೆ.. ಈ ಚಪ್ಪಲಿ ಕೇಸ್ ಗೆ ಪ್ರಮುಖ ಸಾಕ್ಷ್ಯ ಆಗಲಿದ್ದು ಎಲ್ಲವನ್ನೂ ಪೊಲೀಸ್ರು ಸೀಜ್ ಮಾಡಿದ್ದಾರೆ..

ಇದನ್ನೂ ಓದಿ: ದರ್ಶನ್, ಪವಿತ್ರಾಗೆ ಅಂಥಾ ಸಂಬಂಧ ಇತ್ತಾ? ವಕೀಲರು ಹೇಳಿದ್ದೇನು?  

ಇನ್ನು ಪವಿತ್ರಗೌಡ ಅಲ್ದೇ ಆರೋಪಿಗಳಾದ ಲಕ್ಷ್ಮಣ್, ವಿನಯ್, ನಿಖಿಲ್ ರನ್ನೂ ಕರೆದೊಯ್ದು ಪೊಲೀಸರು ಸ್ಥಳ ಮಹಜರು ನಡೆಸಿದ್ರು.. ಕೊಲೆಯಾದ ನಂತರ ಆರೋಪಿಗಳೆಲ್ರೂ ಅವರವರ ಮನೆಗೆ ಹೋಗಿದ್ರು.. ಹೀಗಾಗಿ ಆರೋಪಿಗಳ ಮನೆಗೆ ಕರೆದೊಯ್ದು ಸ್ಥಳ ಮಹಜರು ನಡೆಸಿ ಒಂದಷ್ಟು ವಸ್ತುಗಳನ್ನ ಸೀಜ್ ಮಾಡಲಾಗಿದೆ.. ಮತ್ತೊಂದ್ ಕಡೆ ಕರೆಂಟ್ ಶಾಕ್ ಕೊಟ್ಟಿದ್ದ ಡಿವೈಸ್ ಬಗ್ಗೆಯೂ ಹುಡುಕಾಟ ನಡೆದಿದ್ದು ಬಳಕೆ ಮಾಡಿದ್ದ ಮೆಗಾನ್ ಗಾಗಿ ಹುಡುಕಾಟ ನಡೆಸಲಾಗ್ತಿದೆ..

ಒಟ್ಟಾರೆಯಾಗಿ ಎರಡನೇ ಹಂತದ ತನಿಖೆ ಜೋರಾಗಿ ನಡೀತಿದ್ದು ಇವಾಗೇನಿದ್ರೂ ಎವಿಡೆನ್ಸ್ ಗಳನ್ನ ಮುಂದಿಟ್ಟೇ ಟೀಂ ತನಿಖೆ ನಡೆಸ್ತಿದೆ.. ಆರೋಪಿಗಳ ಸಂಖ್ಯೆ ಮತ್ತೆ ಹಚ್ಚಾಗ್ತಿದೆ.. ದರ್ಶನ್ ಆ್ಯಂಡ್ ಟೀಂ ಕೇಸ್ ಸಿನಿಮಾಗಿಂತಲೂ ಟ್ವಿಸ್ಟ್ ಆ್ಯಂಡ್ ಟರ್ನ್ ಗಳನ್ನ ಪಡೀತಿದ್ರೂ ಪವಿತ್ರ ಗೌಡ ಮಾತ್ರ ಲಿಫ್ಟಿಕ್ ಹಾಕೊಂಡು ಕೂಲ್ ಆಗಿ ನಗಾಡಿಕೊಂಡೆ ಪೊಲೀಸರ ತನಿಖೆಗೆ ಸಹಕಾರ ಕೊಡ್ತಿರೋದು ವಿಷೇಶ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News