ನವದೆಹಲಿ: ಗೋಯಿರ್ನ(GoAir) ಅಹಮದಾಬಾದ್ನಿಂದ ಜೈಪುರಕ್ಕೆ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ಪ್ರಯಾಣಿಕರು ಶನಿವಾರ (ಫೆಬ್ರವರಿ 29, 2020) ವಿಮಾನದೊಳಗೆ ಹಾರುತ್ತಿರುವ ಪಾರಿವಾಳವನ್ನು ಕಂಡು ಆಶ್ಚರ್ಯಚಕಿತರಾದರು.
ಟೇಕ್-ಆಫ್ ಮಾಡಲು ತಯಾರಿ ನಡೆಸುತ್ತಿದ್ದಾಗ ವಿಮಾನದೊಳಗೆ ಪಾರಿವಾಳ ಕಾಣಿಸಿಕೊಂಡಿದ್ದರಿಂದ ವಿಮಾನ ಸುಮಾರು 30 ನಿಮಿಷಗಳ ಕಾಲ ವಿಳಂಬವಾಯಿತು.
ಇನ್ನು ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟ್ವಿಟ್ಟರ್ ಬಳಕೆದಾರ ರಾಕೇಶ್ ಭಗತ್ ಈ ಘಟನೆಯ ಬಗ್ಗೆ ವೀಡಿಯೊವನ್ನು ಹಂಚಿಕೊಂಡಿದ್ದು, ''ಇದು ಅಕ್ಷರಶಃ ದೈತ್ಯ ಹಕ್ಕಿಯಲ್ಲಿ "ಹಕ್ಕಿ ಹಾರುವ" ಆಗಿದೆ !!!! ಅಹಮದಾಬಾದ್ನಿಂದ ಜೈಪುರಕ್ಕೆ ವಿಮಾನ ಹಾರಾಟ..30 ನಿಮಿಷ ತಡೆಹಿಡಿಯಲಾಗಿದೆ !! ಎಂದು ಬರೆದಿದ್ದಾರೆ.
This is literally "bird flying" in the giant bird!!!!
Flight from Ahmedabad to Jaipur..held up for 30 mins!!#GoAir "pigeon" on board!!! pic.twitter.com/M0khjmKFSK— Rakesh Bhagat (@RakeshB36568801) February 29, 2020
ಇನ್ನೊಬ್ಬ ಟ್ವಿಟರ್ ಬಳಕೆದಾರ ಪ್ರಶಾಂತ್ ಕೂಡ 30 ಸೆಕೆಂಡುಗಳ ಕ್ಲಿಪ್ ಅನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅವ್ಯವಸ್ಥೆಯಿಂದಾಗಿ ವಿಮಾನವು ಮೂವತ್ತು ನಿಮಿಷ ವಿಳಂಬವಾಗಿದೆ ಎಂದು ಉಲ್ಲೇಖಿಸಿದ್ದಾರೆ. “ಏಕ್ ಕಬೂತಾರ್ ಪ್ಲೇನ್ ಕೆ ಅಂದರ್..ಅಹಮದಾಬಾದ್-ಜೈಪುರ್ ಗೋ ಏರ್ ಫ್ಲೈಟ್ 30 ನಿಮಿಷಗಳ ಕಾಲ ವಿಳಂಬವಾಗಿದ್ದು ಲಗೇಜ್ ಸಂಗ್ರಹದಿಂದ ಪಾರಿವಾಳ ಹಾರಿಹೋಯಿತು” ಎಂದು ಅವರು ಬರೆದಿದ್ದಾರೆ.
ಆನ್ಲೈನ್ನಲ್ಲಿ ಈ ವಿಡಿಯೋ ಹಂಚಿಕೊಂಡ ಒಂದು ಗಂಟೆಯೊಳಗೆ, ವೀಡಿಯೊಗಳು ಸಾವಿರಾರು ವೀಕ್ಷಣೆಗಳನ್ನು ಗಳಿಸಿವೆ.
ವೀಡಿಯೊಗಳಲ್ಲಿ, ಸಿಬ್ಬಂದಿ ಮತ್ತು ಪ್ರಯಾಣಿಕರು ಪಾರಿವಾಳವನ್ನು ಹಿಡಿಯಲು ಪ್ರಯತ್ನಿಸುತ್ತಿದ್ದರೆ ಪಾರಿವಾಳವು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ ವಿಮಾನದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹಾರುತ್ತಿರುವುದನ್ನು ಕಾಣಬಹುದು.
ಕೆಲವರು, ಪಕ್ಷಿಯನ್ನು ಹಿಡಿಯಲು ಪ್ರಯತ್ನಿಸಿದರು ಆದರೆ ಅದನ್ನು ಮಾಡಲು ವಿಫಲರಾದರು.
ರೋಮಾಂಚನಗೊಂಡ ಪ್ರಯಾಣಿಕರು ಈ ಸನ್ನಿವೇಶಕ್ಕೆ ಸಾಕ್ಷಿಯಾಗಲು ತಮ್ಮ ಆಸನಗಳಿಂದ ಎದ್ದು ವಿಮಾನದ ಹಿಂಬಾಗಿಲನ್ನು ತೆರೆಯಲು ಯಾರೋ ಸಿಬ್ಬಂದಿಗೆ ಸೂಚಿಸಿದರು, ಇದರಿಂದ ಪಾರಿವಾಳ ಹೊರಗೆ ಹಾರಿಹೋಗುತ್ತದೆ.