PM Kisan Scheme Update: Good News - ಪಿಎಂ ಕಿಸಾನ್ ನಿಧಿ ಕುರಿತು ಬಿಗ್ ಅಪ್ಡೇಟ್, ಯಾವಾಗ ಖಾತೆ ಸೇರಲಿದೆ ಹಣ?

PM Kisan Samman Nidhi: ಒಂದು ವೇಳೆ ನೀವು ಕೂಡ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 10 ನೇ ಕಂತಿನ (ಪಿಎಂ ಕಿಸಾನ್ 10 ನೇ ಕಂತು) ಗಾಗಿ ನಿರೀಕ್ಷೆಯಲ್ಲಿದ್ದರೆ, ಈ ಬಿಗ್ ಅಪ್ಡೇಟ್ ನಿಮಗಾಗಿ,

Written by - Nitin Tabib | Last Updated : Nov 28, 2021, 11:50 AM IST
  • ಪಿಎಂ ಕಿಸಾನ್ ಸಮ್ಮಾನ್ ನಿಧಿ ಲಾಭಾರ್ಥಿಗಳಿಗೊಂದು ಬಿಗ್ ಅಪ್ಡೇಟ್.
  • ಡಿಸೆಂಬರ್ 15ರಂದು ನಿಮ್ಮ ಖಾತೆಗೆ 10ನೇ ಕಂತು ಬರುವ ನಿರೀಕ್ಷೆ.
  • ರೈತರ ಆದಾಯ ಹೆಚ್ಚಿಸುವುದು ಸರ್ಕಾರದ ಈ ಯೋಜನೆಯ ಹಿಂದಿನ ಉದ್ದೇಶ
PM Kisan Scheme Update: Good News - ಪಿಎಂ ಕಿಸಾನ್ ನಿಧಿ ಕುರಿತು ಬಿಗ್ ಅಪ್ಡೇಟ್, ಯಾವಾಗ ಖಾತೆ ಸೇರಲಿದೆ ಹಣ? title=
PM Kisan Samman Nidhi (File Photo)

PM Kisan Samman Nidhi: ನೀವು ಕೂಡ ಒಂದು ವೇಳೆ  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (PM Kisan Samman Nidhi) 10 ನೇ ಕಂತಿಗಾಗಿ (PM Kisan 10th Installment) ಕಾಯುತ್ತಿದ್ದರೆ, ಇಲ್ಲಿದೆ ನಿಮಗೊಂದು ಬಿಗ್ ಅಪ್ಡೇಟ್. ಡಿಸೆಂಬರ್ ತಿಂಗಳಿನಲ್ಲಿಯೇ ಸರ್ಕಾರವು ನಿಮ್ಮ ಖಾತೆಗೆ ಹಣವನ್ನು ವರ್ಗಾಯಿಸುವ ಸಾಧ್ಯತೆ ಇದೆ. ದೇಶದ ಕೋಟ್ಯಂತರ ರೈತರ ಖಾತೆಗೆ 2000 ರೂಪಾಯಿ ಕಂತು ಶೀಘ್ರದಲ್ಲೇ ಬರಬಹುದು ಎಂದು ವರದಿಯಾಗಿದೆ. ಈ ಯೋಜನೆಯಡಿ (PM Kisan) ಕೇಂದ್ರ ಸರ್ಕಾರದಿಂದ ರೈತರಿಗೆ ವಾರ್ಷಿಕ 6000 ರೂ.ಗಳ ಆರ್ಥಿಕ ನೆರವು ನೀಡಲಾಗುತ್ತದೆ.

ಡಿಸೆಂಬರ್ 15 ರಂದು ಹಣ ಕ್ರೆಡಿಟ್ ಆಗುವ ಸಾಧ್ಯತೆ
ರೈತರ ಖಾತೆಗೆ ಇಲ್ಲಿಯವರೆಗೆ 9 ಕಂತುಗಳ ಹಣವನ್ನು ವರ್ಗಾಯಿಸಲಾಗಿದೆ ಮತ್ತು 10 ನೇ ಕಂತು ಡಿಸೆಂಬರ್ 15 ರೊಳಗೆ (PM Kisan 10 Installment Date) ಅಂದರೆ ಕ್ರಿಸ್ಮಸ್ ಮೊದಲು ಖಾತೆಗೆ ಬರಬಹುದು   ಎನ್ನಲಾಗಿದೆ.  ನೀವು 9 ನೇ ಕಂತಿನ ಹಣವನ್ನು ಸ್ವೀಕರಿಸದಿದ್ದರೆ, 9 ನೇ ಮತ್ತು 10 ನೇ ಕಂತುಗಳು ಸೇರಿ ಒಟ್ಟಾರೆ ನಿಮ್ಮ ಖಾತೆಗೆ ರೂ. 4000 ರೂಪಾಯಿ ಜಮೆಯಾಗಲಿವೆ.

pmkisan.gov.in ವೆಬ್‌ಸೈಟ್‌ಗೆ ಭೇಟಿ ನೀಡಿ
>> ರೈತ ವೆಬ್‌ಸೈಟ್‌ನಲ್ಲಿ 'Farmers Corner' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
>> ಇಲ್ಲಿ ನೀವು ಫಲಾನುಭವಿಯ ಸ್ಟೇಟಸ್ (Beneficiary Status)ಮೇಲೆ ಕ್ಲಿಕ್ ಮಾಡಿ.
>> ಇದರಲ್ಲಿ ನಿಮ್ಮ ಪ್ರದೇಶ, ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮಕ್ಕೆ ಸಂಬಂಧಿಸಿದ ಮಾಹಿತಿಯನ್ನು ಭರ್ತಿ ಮಾಡಿ 
>> ಇದಾದ ನಂತರ 'Get Report' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಸಂಪೂರ್ಣ ಪಟ್ಟಿ ನಿಮ್ಮ ಮುಂದೆ ಬರುತ್ತದೆ.
>> ಈ ಪಟ್ಟಿಯಲ್ಲಿ ನಿಮ್ಮ ಕಂತಿನ ಸ್ಥಿತಿಯನ್ನು ನೀವು ನೋಡಬಹುದು.

ಇದನ್ನೂ ಓದಿ-PM Kisan : ಈಗ ರೈತರಿಗೆ ₹2000 ಕಂತುಗಳೊಂದಿಗೆ ಸಿಗಲಿದೆ ₹3000 ಮಾಸಿಕ ಪಿಂಚಣಿ!

ಆದಾಯ ಹೆಚ್ಚಿಸಲು ಯೋಜನೆ ಆರಂಭಿಸಲಾಗಿದೆ
ರೈತರ ಆದಾಯವನ್ನು ಸರಿಪಡಿಸಲು ಮತ್ತು ಅವರ ಅಗತ್ಯಗಳನ್ನು ಪೂರೈಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು (PM Kisan Nidhi) ಪ್ರಾರಂಭಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಇದರಲ್ಲಿ ಸರ್ಕಾರ 2000-2000 ರೂಪಾಯಿಗಳನ್ನು 3 ಕಂತುಗಳಲ್ಲಿ ನೀಡುತ್ತದೆ.

ಇದನ್ನೂ ಓದಿ-PM Kisan: ದ್ವಿಗುಣಗೊಳ್ಳಲಿದೆಯೇ ಪಿಎಂ ಕಿಸಾನ್ ಹಣ? ನಿಮ್ಮ ಕಂತಿನ ಸ್ಥಿತಿಯನ್ನು ಈ ರೀತಿ ಪರಿಶೀಲಿಸಿ

ಈ ಯೋಜನೆಯ ಲಾಭವನ್ನು ಯಾರು ಪಡೆಯಬಹುದು
ಈ ಯೋಜನೆಯ (PM Kisan Yojana) ಲಾಭ ಪಡೆಯಲು, ನಿಮ್ಮ ವಯಸ್ಸು 18 ರಿಂದ 40 ವರ್ಷಗಳ ನಡುವೆ ಇರಬೇಕು. ಇದಲ್ಲದೇ 2 ಹೆಕ್ಟೇರ್ ಸಾಗುವಳಿ ಭೂಮಿ ಹೊಂದುರುವುದು ಕೂಡ ಕಡ್ಡಾಯವಾಗಿದೆ. ಸಾಗುವಳಿ ಭೂಮಿ ಇಲ್ಲದ ರೈತರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.

ಇದನ್ನೂ  ಓದಿ-PM Kisan: 2000 ರೂ. ಇನ್ನೂ ಕೂಡ ನಿಮ್ಮ ಖಾತೆ ಸೇರಿಲ್ಲವೇ? ಕೂಡಲೇ ಈ ಕೆಲಸ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News