ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ

ಅಹಮದಾಬಾದ್‌ನ ರಾಣಿಪ್ ನ ನಿಶಾದ್ ಶಾಲೆಯಲ್ಲಿ ಮತ ಚಲಾಯಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ.

Last Updated : Apr 23, 2019, 08:49 AM IST
ಅಹಮದಾಬಾದ್‌ನಲ್ಲಿ  ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ title=
Pic Courtesy: ANI

ಅಹಮದಾಬಾದ್‌: ಲೋಕಸಭಾ ಚುನಾವಣೆಗೆ ಇಂದು 3ನೇ ಹಂತದಲ್ಲಿ 13 ರಾಜ್ಯಗಳ 117 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು,  ಪ್ರಧಾನಮಂತ್ರಿ ನರೇಂದ್ರ ಮೋದಿ ಅಹಮದಾಬಾದ್‌ನ ರಾಣಿಪ್ ನ ನಿಶಾದ್ ಶಾಲೆಯಲ್ಲಿ ಮತ ಚಲಾಯಿಸಿದರು.

ಪ್ರಧಾನಿ ಮೋದಿ ಮತ ಚಲಾಯಿಸುವ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಉಪಸ್ಥಿತರಿದ್ದರು.

ಮತದಾನಕ್ಕೂ ಮೊದಲು ಗಾಂಧಿನಗರದಲ್ಲಿ ತಮ್ಮ ನಿವಾಸಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿ ಹಿರಾಬೆನ್ ಅವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಹಿರಾಬೆನ್ ಪ್ರಧಾನಿ ಮೋದಿಗೆ ತೆಂಗಿನಕಾಯಿ ನೀಡಿ ಆಶೀರ್ವದಿಸಿದರು. 

ನಂತರ ತೆರೆದ ವಾಹನದಲ್ಲಿ ಅಹಮದಾಬಾದ್‌ನ ರಾಣಿಪ್ ನ ನಿಶಾದ್ ಶಾಲೆಯಲ್ಲಿನ ಮತಗಟ್ಟೆಗೆ ಆಗಮಿಸಿದ ಮೋದಿ ತಮ್ಮ ಮತ ಚಲಾಯಿಸಿದರು. ಬಳಿಕ ದೇಶದ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದು ನಾಗರೀಕರಿಗೆ ಕರೆ ನೀಡಿದರು.

Trending News