ನೂತನ ಸಂಸತ್ ಭವನದ ವಿಡಿಯೋ ಹಂಚಿಕೊಂಡು ಜನರಿಗೆ ವಿಶೇಷ ಮನವಿ ಮಾಡಿದ ಪ್ರಧಾನಿ ಮೋದಿ

ನೂತನ ಸಂಸತ್ ಭವನದ ದೃಶ್ಯಾವಳಿಯನ್ನು ಈಗ ಬಿಡುಗಡೆ ಮಾಡಲಾಗಿದ್ದು, ಆಧುನಿಕ ಸಂವಹನ ತಂತ್ರಜ್ಞಾನದೊಂದಿಗೆ ಅಳವಡಿಸಲಾಗಿರುವ ಐಷಾರಾಮಿ ಲೋಕಸಭೆ ಮತ್ತು ರಾಜ್ಯಸಭಾ ಸಭಾಂಗಣಗಳನ್ನು ವಿಡಿಯೋದಲ್ಲಿ ಬಿತ್ತರಿಸಲಾಗಿದೆ.

Written by - Manjunath N | Last Updated : May 27, 2023, 12:13 AM IST
  • ಒಳಾಂಗಣವು ಕಮಲ, ನವಿಲು ಮತ್ತು ಆಲದ ಮರ ಮೂರು ರಾಷ್ಟ್ರೀಯ ಚಿಹ್ನೆಗಳನ್ನು ತೋರಿಸುತ್ತದೆ.
  • ಹೊಸ ಸಂಸತ್ತಿನ ಕಟ್ಟಡವು ತ್ರಿಕೋನ ಆಕಾರದ ನಾಲ್ಕು ಅಂತಸ್ತಿನ ರಚನೆಯಾಗಿದ್ದು,
  • ಹೊಸ ಸಂಸತ್ತಿನ ಕಟ್ಟಡದ ಮೂರು ಮುಖ್ಯ ದ್ವಾರಗಳನ್ನು ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂದು ಕರೆಯಲಾಗುತ್ತದೆ.
ನೂತನ ಸಂಸತ್ ಭವನದ ವಿಡಿಯೋ ಹಂಚಿಕೊಂಡು ಜನರಿಗೆ ವಿಶೇಷ ಮನವಿ ಮಾಡಿದ ಪ್ರಧಾನಿ ಮೋದಿ title=

ನವದೆಹಲಿ: ನೂತನ ಸಂಸತ್ ಭವನದ ದೃಶ್ಯಾವಳಿಯನ್ನು ಈಗ ಬಿಡುಗಡೆ ಮಾಡಲಾಗಿದ್ದು, ಆಧುನಿಕ ಸಂವಹನ ತಂತ್ರಜ್ಞಾನದೊಂದಿಗೆ ಅಳವಡಿಸಲಾಗಿರುವ ಐಷಾರಾಮಿ ಲೋಕಸಭೆ ಮತ್ತು ರಾಜ್ಯಸಭಾ ಸಭಾಂಗಣಗಳನ್ನು ವಿಡಿಯೋದಲ್ಲಿ ಬಿತ್ತರಿಸಲಾಗಿದೆ.

ಒಳಾಂಗಣವು ಕಮಲ, ನವಿಲು ಮತ್ತು ಆಲದ ಮರ ಮೂರು ರಾಷ್ಟ್ರೀಯ ಚಿಹ್ನೆಗಳನ್ನು ತೋರಿಸುತ್ತದೆ.ಹೊಸ ಸಂಸತ್ತಿನ ಕಟ್ಟಡವು ತ್ರಿಕೋನ ಆಕಾರದ ನಾಲ್ಕು ಅಂತಸ್ತಿನ ರಚನೆಯಾಗಿದ್ದು, 64,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಹೊಸ ಸಂಸತ್ತಿನ ಕಟ್ಟಡದ ಮೂರು ಮುಖ್ಯ ದ್ವಾರಗಳನ್ನು ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ:  HD Kumaraswamy: ರಾಷ್ಟ್ರಪತಿ ದ್ರೌಪದಿ ಮುರ್ಮು ಆದಿವಾಸಿ ಮಹಿಳೆ ಎಂಬ ಕಾರಣಕ್ಕೆ ಅವರ ಬಗ್ಗೆ ʼಕಾಂಗ್ರೆಸ್ʼ ಮೊಸಳೆ ಕಣ್ಣೀರು - ಹೆಚ್.ಡಿ ಕೆ

ಈಗ ಹೊಸ ಸಂಸತ್ತಿನ ಕಟ್ಟಡ ವಿಡಿಯೋ ಶೇರ್ ಮಾಡಿಕೊಂಡಿರುವ  ಪ್ರಧಾನಿ ನರೇಂದ್ರ ಮೋದಿ ಅವರು 'ಮೈ ಪಾರ್ಲಿಮೆಂಟ್ ಮೈ ಪ್ರೈಡ್' ಎಂಬ ಹ್ಯಾಶ್‌ಟ್ಯಾಗ್ ಬಳಸಿ ತಮ್ಮ ವಾಯ್ಸ್‌ಓವರ್‌ನೊಂದಿಗೆ ವೀಡಿಯೊವನ್ನು ಹಂಚಿಕೊಳ್ಳುವಂತೆ ಜನರನ್ನು ಒತ್ತಾಯಿಸಿದರು. "ಹೊಸ ಸಂಸತ್ತಿನ ಕಟ್ಟಡವು ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡುವಂತೆ ಮಾಡುತ್ತದೆ. ಈ ವೀಡಿಯೊ ಈ ಐಕಾನಿಕ್ ಕಟ್ಟಡದ ಒಂದು ನೋಟವನ್ನು ನೀಡುತ್ತದೆ.ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುವುದೆನೆಂದರೆ ನಿಮ್ಮ ಸ್ವಂತ ಧ್ವನಿಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಿ, ಅದು ನಿಮ್ಮ ಆಲೋಚನೆಗಳನ್ನು ತಿಳಿಸುತ್ತದೆ. ನಾನು ಕೆಲವು ಮರು-ಟ್ವೀಟ್ ಮಾಡುತ್ತೇನೆ #MyParliamentMyPride ಎಂದು ಬಳಸಲು ಮರೆಯಬೇಡಿ," ಎಂದು ಪ್ರಧಾನಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Actor Found Dead: ಕೊಳೆತ ಸ್ಥಿತಿಯಲ್ಲಿ ಖ್ಯಾತ ನಟನ ಮೃತದೇಹ ಪತ್ತೆ..!

ಭಾನುವಾರದಂದು ನೂತನ ಸಂಸತ್ ಕಟ್ಟಡವನ್ನು ಉದ್ಘಾಟಿಸುವ ಸಮಾರಂಭವು ಮುಂಜಾನೆ ಹವನ ಮತ್ತು ಸರ್ವಧರ್ಮ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ನಂತರ ಲೋಕಸಭೆಯಲ್ಲಿ ಔಪಚಾರಿಕವಾಗಿ ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡುತ್ತಾರೆ. ಭಾನುವಾರ ನಡೆಯಲಿರುವ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ 25 ಪಕ್ಷಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, 20 ವಿರೋಧ ಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News