BJP Foundation Day:ಇಂದು ಬಿಜೆಪಿ 42ನೇ ಸಂಸ್ಥಾಪನಾ ದಿನ: ದಿನದ ಪ್ರಾಮುಖ್ಯತೆ ತಿಳಿಸಿದ ಪ್ರಧಾನಿ

ಬಿಜೆಪಿಯ 42ನೇ ಸಂಸ್ಥಾಪನಾ ದಿನದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರು, ಸಚಿವರು, ಸಂಸದರು, ಶಾಸಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. 

Written by - Zee Kannada News Desk | Last Updated : Apr 6, 2022, 12:22 PM IST
  • ಬಿಜೆಪಿ 42ನೇ ಸಂಸ್ಥಾಪನಾ ದಿನ
  • ದಿನದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
  • ದೆಹಲಿಯಲ್ಲಿ ರ್ಯಾಲಿಯಲ್ಲಿ ಭಾಗವಹಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ
BJP Foundation Day:ಇಂದು ಬಿಜೆಪಿ 42ನೇ ಸಂಸ್ಥಾಪನಾ ದಿನ: ದಿನದ ಪ್ರಾಮುಖ್ಯತೆ ತಿಳಿಸಿದ ಪ್ರಧಾನಿ title=
BJP Foundation Day

ನವದೆಹಲಿ:  ಇಂದು ಬಿಜೆಪಿ(BJP)ಯ 42ನೇ ಸಂಸ್ಥಾಪನಾ ದಿನದ ನಿಮಿತ್ತ ದೇಶದೆಲ್ಲೆಡೆ ಬಿಜೆಪಿ ಕಾರ್ಯಕರ್ತರು ಸಂಭ್ರಮದ ವಾತಾವರಣವನ್ನು ಸೃಷ್ಟಿಸಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಈ ದಿನದ ಪ್ರಾಮುಖ್ಯತೆ ಬಗ್ಗೆ ತಿಳಿಸಿದ್ದಾರೆ.

ಇದನ್ನು ಓದಿ:  Whatsapp: ವಾಟ್ಸಾಪ್‌ನಲ್ಲಿ ಇನ್ಮುಂದೆ ಸಂದೇಶಗಳಿಗೆ ಸಂಬಂಧಿಸಿದ ಈ ಕೆಲಸ ಮಾಡಲು ಸಾಧ್ಯವಿಲ್ಲ

ಬಿಜೆಪಿಯ 42ನೇ ಸಂಸ್ಥಾಪನಾ ದಿನ(BJP Foundation Day)ದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರು, ಸಚಿವರು, ಸಂಸದರು, ಶಾಸಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. "ಬಿಜೆಪಿ ಪಾಲಿಗೆ ಈ ಬಾರಿಯ ಸಂಸ್ಥಾಪನಾ ದಿನ ತುಂಬ ಮಹತ್ವದ್ದು. ಅದಕ್ಕೆ ಮೂರು ಕಾರಣಗಳಿವೆ.  ಮೊದಲನೆಯದು ಈ ಬಾರಿ ನಾವೆಲ್ಲರೂ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದೇವೆ. ಇದು ಸ್ಫೂರ್ತಿದಾಯಕ ಸಂದರ್ಭ. ಎರಡನೆ ವಿಚಾರವೆಂದರೆ, ಭಾರತ ಜಾಗತಿಕ ಮಟ್ಟದಲ್ಲಿ ಕ್ಷಿಪ್ರವಾಗಿ ಅಭಿವೃದ್ಧಿಯಾಗುತ್ತಿದೆ. ಹೊಸ ಹೊಸ ಅವಕಾಶಗಳು ಭಾರತಕ್ಕೆ ನಿರಂತರವಾಗಿ ಲಭ್ಯವಾಗುತ್ತಿವೆ. ಇನ್ನು ಮೂರನೆಯ ಕಾರಣವೆಂದರೆ,  ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಏರುವ ಮೂಲಕ ಮತ್ತೆ ಆಡಳಿತಕ್ಕೆ ಬಂದಿದೆ. ಮೂರು ದಶಕಗಳ ನಂತರ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 100 ದಾಟಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.  

ಇದನ್ನು ಓದಿ:  ಎಲ್ಲೆಲ್ಲೂ 'ಕೆಜಿಎಫ್‌-2' ಹವಾ: ಮೊದಲ ಬಾರಿಗೆ ಗ್ರೀಸ್‌ನಲ್ಲಿ ದಕ್ಷಿಣ ಭಾರತದ ಸಿನಿಮಾ ರಿಲೀಸ್‌..!

ಇಂದು ಭಾರತ ಯಾವುದೇ ಒತ್ತಡ, ಬಲವಂತಕ್ಕೆ ಒಳಗಾಗುವ ಅಗತ್ಯವಿವಲ್ಲದೆ ತನ್ನ ಹಿತಾಸಕ್ತಿ, ನಿಲುವನ್ನು ಜಗತ್ತಿನ ಎದುರು ದೃಢವಾಗಿ ತೋರಿಸುವ ದೇಶವಾಗಿ ಮಾರ್ಪಾಡಾಗಿದೆ ಎಂದರು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News