ನವದೆಹಲಿ: ಆಳ್ವಾರ್ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ "ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಭಾರತ ಮಾತಾ ಕಿ ಜೈ ಬದಲು ಅನಿಲ್ ಅಂಬಾನಿ ಕಿ ಜೈ ಎಂದು ಹೇಳಬೇಕು ಎಂದು ವ್ಯಂಗವಾಡಿದ್ದಾರೆ.
ಪ್ರಧಾನಿ ಮೋದಿ ರ್ಯಾಯಲ್ಲಿನ ಪ್ರತಿ ಭಾಷಣದಲ್ಲಿ "ಅನಿಲ್ ಅಂಬಾನಿ ಕಿ ಜೈ, ಮೆಹುಲ್ ಚೋಸ್ಕಿ ಕಿ ಜೈ, ನೀರವ್ ಮೋದಿ ಕಿ ಜೈ, ಲಲೀತ್ ಮೋದಿ ಕಿ ಎಂದು ಹೇಳಬೇಕು ಎಂದು ತಿಳಿಸಿದರು. ಇದೇ ವೇಳೆ ಆಳ್ವಾರ್ ಆತ್ಮಹತ್ಯೆ ಪ್ರಕರಣವನ್ನು ಪ್ರಸ್ತಾಪಿಸುತ್ತಾ 2014 ರಲ್ಲಿ ಪ್ರಧಾನಿ ಮೋದಿ ನೀಡಿದ ಚುನಾವಣೆಯಲ್ಲಿನ ಘೋಷಣೆಗಳನ್ನು ಈಡೇರಿಸಿದ್ದೆ ಆದಲ್ಲಿ ಮತ್ತೇಕೆ ನಾಲ್ವರು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಎಂದು ತಿಳಿಸಿದರು.
#WATCH: Rahul Gandhi in Alwar Rajasthan: PM Modi says 'Bharat Mata ki Jai' before every speech, he should instead say 'Anil Ambani ki jai, Mehul Choksi ki jai, Nirav Modi ki jai, Lalit Modi ki jai'. If you talk of Bharat Mata then how can you forget our farmers? pic.twitter.com/f1R6Sxz5iR
— ANI (@ANI) December 4, 2018
ರಫೇಲ್ ಒಪ್ಪಂದದ ಬಗ್ಗೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ "ನರೇಂದ್ರ ಮೋದಿ ಅವರು ತಮ್ಮ ಭಾಷಣಗಳಲ್ಲಿ ರಫೇಲ್ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಏಕೆಂದರೆ ಅವರಿಗೆ ಇದರ ಬಗ್ಗೆ ಭಯವಿದೆ.ಏಕೆಂದರೆ ಜನರು ಚೌಕಿದಾರ ಚೋರ್ ಹೈ ಎಂದು ಕೂಗುತ್ತಾರೆ" ಎಂದು ರಾಹುಲ್ ತಿಳಿಸಿದರು.