ಗುಜರಾತ್‌ನಲ್ಲಿ ಇಂದು 3 ಪ್ರಮುಖ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಪಿಎಂ ಮೋದಿ ಗುಜರಾತ್ ರೈತರಿಗಾಗಿ 'ಕಿಸಾನ್ ಸೂರ್ಯೋದಯ ಯೋಜನೆ' ಯನ್ನು ಸಹ ಪ್ರಾರಂಭಿಸಲಿದ್ದಾರೆ. 'ಕಿಸಾನ್ ಸೂರ್ಯೋದಯ ಯೋಜನೆ' ಹಗಲಿನಲ್ಲಿ ನೀರಾವರಿಗಾಗಿ ವಿದ್ಯುತ್ ಪೂರೈಸುವ ಯೋಜನೆಯಾಗಿದೆ. ಈ ಯೋಜನೆಯಡಿ ರೈತರಿಗೆ ಬೆಳಿಗ್ಗೆ 5 ರಿಂದ ರಾತ್ರಿ 9 ರವರೆಗೆ ವಿದ್ಯುತ್ ಸಿಗುತ್ತದೆ.

Last Updated : Oct 24, 2020, 07:55 AM IST
  • ಪಿಎಂ ಮೋದಿ ಗುಜರಾತ್ ರೈತರಿಗಾಗಿ 'ಕಿಸಾನ್ ಸೂರ್ಯೋದಯ ಯೋಜನೆ' ಯನ್ನು ಸಹ ಪ್ರಾರಂಭಿಸಲಿದ್ದಾರೆ.
  • 'ಕಿಸಾನ್ ಸೂರ್ಯೋದಯ ಯೋಜನೆ' ಹಗಲಿನಲ್ಲಿ ನೀರಾವರಿಗಾಗಿ ವಿದ್ಯುತ್ ಪೂರೈಸುವ ಯೋಜನೆಯಾಗಿದೆ.
  • ಈ ಯೋಜನೆಯಡಿ ರೈತರಿಗೆ ಬೆಳಿಗ್ಗೆ 5 ರಿಂದ ರಾತ್ರಿ 9 ರವರೆಗೆ ವಿದ್ಯುತ್ ಸಿಗುತ್ತದೆ.
ಗುಜರಾತ್‌ನಲ್ಲಿ ಇಂದು 3 ಪ್ರಮುಖ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ title=
Image courtesy: DNA

ದೇಶದ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಸಾಗಿಸಲು ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ಆದರೆ ಕೃಷಿಯ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸುವ ರೈತರು (Farmers) ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ. ಅದಕ್ಕಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ರೈತರ ಆದಾಯವನ್ನು ದ್ವಿಗುಣಗೊಳಿಸಲು ಮತ್ತು ರಾಜ್ಯದ ಅಭಿವೃದ್ಧಿಗೆ ಅನೇಕ ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸುತ್ತಿವೆ. ಇದರ ಅಡಿಯಲ್ಲಿ ಅಕ್ಟೋಬರ್ 24ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಗುಜರಾತ್‌ನಲ್ಲಿ ಮೂರು ಮಹತ್ವದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇದರಲ್ಲಿ ರೈತ ಆರೋಗ್ಯ ಮತ್ತು ಪ್ರವಾಸೋದ್ಯಮದ ಬಗ್ಗೆ ಕಾಳಜಿ ವಹಿಸಲಾಗಿದೆ.

ಗುಜರಾತ್‌ನ (Gujrat) ರೈತರಿಗಾಗಿ ಪ್ರಧಾನಿ ನರೇಂದ್ರ ಮೋದಿ 'ಕಿಸಾನ್ ಸೂರ್ಯೋದಯ ಯೋಜನೆ'ಗೆ ಇಂದು ಚಾಲನೆ ನೀಡಲಿದ್ದಾರೆ. 'ಕಿಸಾನ್ ಸೂರ್ಯೋದಯ ಯೋಜನೆ' ಹಗಲಿನಲ್ಲಿ ನೀರಾವರಿಗಾಗಿ ವಿದ್ಯುತ್ ಪೂರೈಸುವ ಯೋಜನೆಯಾಗಿದೆ. ಈ ಯೋಜನೆಯಡಿ ರೈತರಿಗೆ ಬೆಳಿಗ್ಗೆ 5 ರಿಂದ ರಾತ್ರಿ 9 ರವರೆಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ.

ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳಿದ ರತನ್ ಟಾಟಾ

ಇದಲ್ಲದೆ ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಹೊರಹೊಮ್ಮಲಿರುವ ಗಿರ್ನಾರ್‌ನಲ್ಲಿ ರೋಪ್‌ವೇ ಯೋಜನೆಯನ್ನು ಪಿಎಂ ಮೋದಿ ಉದ್ಘಾಟಿಸಲಿದ್ದಾರೆ. ಇದು ಆರಂಭದಲ್ಲಿ ಎಂಟು ಜನರನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ 25-30 ಕ್ಯಾಬಿನ್‌ಗಳನ್ನು ಹೊಂದಿರುತ್ತದೆ. ಈ ರೋಪ್‌ವೇ ಕೇವಲ 7.5 ನಿಮಿಷಗಳಲ್ಲಿ 2.3 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿರುತ್ತದೆ. ಪ್ರವಾಸಿಗರು ಈ ರೋಪ್‌ವೇಯಲ್ಲಿ ಪ್ರಯಾಣಿಸುವಾಗ ಗಿರ್ನಾರ್ ಪರ್ವತದ ಸುತ್ತಲಿನ ನೈಸರ್ಗಿಕ ಸೌಂದರ್ಯವನ್ನು ನೋಡಲು ಸಾಧ್ಯವಾಗುತ್ತದೆ.

ಮೂರನೇ ಯೋಜನೆಯಡಿಯಲ್ಲಿ ಪ್ರಧಾನಿ ಅವರು ಯು.ಎನ್. ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್ಗೆ ಸಂಬಂಧಿಸಿದ ಪೀಡಿಯಾಟ್ರಿಕ್ ಹಾರ್ಟ್ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ ಮತ್ತು ಅಹಮದಾಬಾದ್ನ ಸಿವಿಲ್ ಆಸ್ಪತ್ರೆಯಲ್ಲಿ ಟೆಲಿಕಾರ್ಡಿಯಾಲಜಿಗಾಗಿ ಮೊಬೈಲ್ ಅಪ್ಲಿಕೇಶನ್ ಅನ್ನು ಉದ್ಘಾಟಿಸಲಿದ್ದಾರೆ. ವಿಶ್ವ ದರ್ಜೆಯ ವೈದ್ಯಕೀಯ ಮೂಲಸೌಕರ್ಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಕೆಲವೇ ಆಸ್ಪತ್ರೆಗಳಲ್ಲಿ ಯುಎನ್ ಮೆಹ್ತಾ ಸಂಸ್ಥೆ ಕೂಡ ಒಂದು.

ಇನ್ಮುಂದೆ ರೈತರಿಗೆ ಸುಲಭವಾಗಿ ಸಿಗಲಿದೆ ಅಗ್ಗದ ಸಾಲ, 1.5 ಕೋಟಿ ರೈತರಿಗೆ ಲಾಭ

ಯುಎನ್ ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ 470 ಕೋಟಿ ರೂ. ಯೋಜನೆ ಪೂರ್ಣಗೊಂಡ ನಂತರ, ಇಲ್ಲಿ ಹಾಸಿಗೆಗಳ ಸಂಖ್ಯೆ 450 ರಿಂದ 1251ಕ್ಕೆ ಹೆಚ್ಚಾಗುತ್ತದೆ. ಈ ಸಂಸ್ಥೆ ದೇಶದ ಅತಿದೊಡ್ಡ ಏಕೈಕ ಸೂಪರ್-ಸ್ಪೆಷಾಲಿಟಿ ಕಾರ್ಡಿಯಾಕ್ ಶಿಕ್ಷಣ ಸಂಸ್ಥೆಯಾಗಿದೆ ಮತ್ತು ವಿಶ್ವದ ಅತಿದೊಡ್ಡ ಸಿಂಗಲ್ ಸೂಪರ್-ಸ್ಪೆಷಾಲಿಟಿ ಕಾರ್ಡಿಯಾಲಜಿ ಆಸ್ಪತ್ರೆಗಳಲ್ಲಿ ಒಂದಾಗಿದೆ.

PM Kisan: ನೀವು ನವೆಂಬರ್ ಕಂತನ್ನು ಪಡೆಯುವ ಮೊದಲು ಈ ಕೆಲಸ ಮಾಡಿ, ಇಲ್ಲವೇ...

ಅದೇ ಸಮಯದಲ್ಲಿ ಸಂಸ್ಥೆಯ ಕಟ್ಟಡವನ್ನು ಭೂಕಂಪ-ನಿರೋಧಕವನ್ನಾಗಿ ಮಾಡಲಾಗಿದೆ. ಅಗ್ನಿಶಾಮಕ ವ್ಯವಸ್ಥೆಗಳಂತಹ ಭದ್ರತಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರ ಸಂಶೋಧನಾ ಕೇಂದ್ರವು ದೇಶದ ಮೊದಲ ಸುಧಾರಿತ ಹೃದಯ ಐಸಿಯು ಅನ್ನು ವೆಂಟಿಲೇಟರ್, ಐಎಬಿಪಿ, ಹೆಮೋಡಯಾಲಿಸಿಸ್, ಇಸಿಎಂಒ ಇತ್ಯಾದಿಗಳನ್ನು ಹೊಂದಿರುತ್ತದೆ. ಈ ಸಂಸ್ಥೆಯು 14 ಕಾರ್ಯಾಚರಣೆ ಕೇಂದ್ರಗಳು ಮತ್ತು ಏಳು ಹೃದಯ ಕ್ಯಾತಿಟೆರೈಸೇಶನ್ ಲ್ಯಾಬ್‌ಗಳನ್ನು ಸಹ ಹೊಂದಿರುತ್ತದೆ.

Trending News