ನವದೆಹಲಿ: ದೇಶದ ಅಭಿವೃದ್ದಿಯನ್ನು ತ್ವರಿತಗೊಳಿಸಲು ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಅಗತ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇಂದು ಕೋಲ್ಕತ್ತಾದಲ್ಲಿ ನಡೆದ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದ ಮೋದಿ, ವೈಜ್ಞಾನಿಕ ಮನೋಭಾವವು ಮೂಢನಂಬಿಕೆಗಳನ್ನು ದೂರ ಮಾಡುತ್ತದೆ ಮತ್ತು ತಾರ್ಕಿಕ ಮನೋಧರ್ಮವನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.
At the India International Science Festival, one of the topics we disused was Scientific Temper.
Here is what I feel on the subject.
Do hear. pic.twitter.com/DA6gqKFbBN
— Narendra Modi (@narendramodi) November 5, 2019
ಇತ್ತೀಚಿನ ಚಂದ್ರಯಾನ ಮಿಷನ್ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಈ ವಿಷಯವು ವಿಜ್ಞಾನದ ಬಗ್ಗೆ ಜನರಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ ಎಂದು ಹೇಳಿದರು. ಸಮಾಜಕ್ಕೆ ವಿಜ್ಞಾನ ಅದೇ ರೀತಿಯಾಗಿ ಜನರಿಗೆ ವಿಜ್ಞಾನವನ್ನು ಹರಡಲು ದೀರ್ಘಕಾಲೀನ ಪರಿಹಾರ ವಿಧಾನವನ್ನು ತೆಗೆದುಕೊಳ್ಳಬೇಕೆಂದು ಅವರು ವೈಜ್ಞಾನಿಕ ಸಮುದಾಯಕ್ಕೆ ಮನವಿ ಮಾಡಿದರು.
PM Modi stresses on inculcating scientific temper for Nation's development.#IISF2019 https://t.co/uzW2yYLww5
— All India Radio News (@airnewsalerts) November 5, 2019
ಈ ಉದ್ದೇಶಕ್ಕಾಗಿ ಸರ್ಕಾರ ನಾವೀನ್ಯತೆ ಮತ್ತು ಆವಿಷ್ಕಾರಗಳನ್ನು ಬೆಂಬಲಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ವಿಜ್ಞಾನ ಮತ್ತು ಸಂಶೋಧನೆ ಕುರಿತು ತರಬೇತಿ ಪಡೆಯಲು ವಿದ್ಯಾರ್ಥಿಗಳನ್ನು ಉತ್ತೇಜಿಸಲು ದೇಶದ ವಿವಿಧ ಭಾಗಗಳಲ್ಲಿ ಐದು ಸಾವಿರ ಅಟಲ್ ಟಿಂಕರಿಂಗ್ ಲ್ಯಾಬ್ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ನಾಲ್ಕು ದಿನಗಳ ಕಾಲ ನಡೆಯುವ ಈ ಅಧಿವೇಶನದಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷ ವರ್ಧನ್ ಮತ್ತು ಇತರ ವಿಶೇಷ ಅತಿಥಿಗಳು ಉಪಸ್ಥಿತರಿದ್ದರು.