Loksabha election result 2024: ಕನ್ಯಾಕುಮಾರಿಯಲ್ಲಿ 48 ಗಂಟೆ ಧ್ಯಾನ ಮಾಡಲಿರುವ ಪ್ರಧಾನಿ ಮೋದಿ!

PM Modi To Meditate For 48 Hours: ಮೇ 30 ಮತ್ತು ಮೇ 31ರಂದು ಕನ್ಯಾಕುಮಾರಿಯಲ್ಲಿಯೇ ವಾಸ್ತವ್ಯ ಹೂಡಲಿರುವ ಪ್ರಧಾನಿ ಮೋದಿ ಎರಡು ದಿನಗಳ ಕಾಲ ವಿವೇಕಾನಂದ ರಾಕ್ ಮೆಮೊರಿಯಲ್ ಹಾಲ್‌ನಲ್ಲಿ ಧ್ಯಾನ ಮಾಡಲಿದ್ದಾರೆ. 

Written by - Puttaraj K Alur | Last Updated : May 28, 2024, 07:08 PM IST
  • ಲೋಕಸಭಾ ಚುನಾವಣಾ ಪ್ರಚಾರ ಮುಗಿದ ಬಳಿಕ ಪ್ರಧಾನಿ ಮೋದಿಯವರಿಂದ ಆಧ್ಯಾತ್ಮಿಕ ಪ್ರವಾಸ
  • ಮೇ 30ರಂದು ತಮಿಳುನಾಡಿನ ಕನ್ಯಾಕುಮಾರಿಯ ವಿಶ್ವ ಪ್ರಸಿದ್ಧ ವಿವೇಕಾನಂದ ರಾಕ್ ಮೆಮೋರಿಯಲ್‌ಗೆ ಭೇಟಿ
  • ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಮಾರಕದಲ್ಲಿ 48 ಗಂಟೆ ಧ್ಯಾನ ಮಾಡಲಿರುವ ಪ್ರಧಾನಿ ಮೋದಿ
Loksabha election result 2024: ಕನ್ಯಾಕುಮಾರಿಯಲ್ಲಿ 48 ಗಂಟೆ ಧ್ಯಾನ ಮಾಡಲಿರುವ ಪ್ರಧಾನಿ ಮೋದಿ! title=
ಪ್ರಧಾನಿ ಮೋದಿ 48 ಗಂಟೆ ಧ್ಯಾನ!

Loksabha election result 2024: ಜೂನ್‌ 4 ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಬಾರಿ ದೇಶದ ಮತದಾರ ಯಾರಿಗೆ ವಿಜಯಮಾಲೆ ಹಾಕುತ್ತಾನೆ ಅನ್ನೋದು ತೀವ್ರ ಕುತೂಹಲ ಮೂಡಿದೆ. ಬಿಜೆಪಿ ನೇತೃತ್ವದ NDA ಮೈತ್ರಿಕೂಟಕ್ಕೆ ಬಹುಮತ ಸಿಕ್ಕರೆ ಪ್ರಧಾನಿ ಮೋದಿ ಹ್ಯಾಟ್ರಿಕ್‌ ಭಾರಿಸಲಿದ್ದು, 3ನೇ ಅವಧಿಯಾಗಿ ಪ್ರಧಾನಿಯಾಗಲಿದ್ದಾರೆ. ಒಂದು ವೇಳೆ ಮತದಾರ NDAಯನ್ನು ತಿರಸ್ಕರಿಸಿದರೆ ಏನಾಗಬಹುದು ಅನ್ನೋ ಯಕ್ಷಪ್ರಶ್ನೆ ಕೂಡ ದೇಶದ ಜನಸಾಮಾನ್ಯರಲ್ಲಿ ಮೂಡಿದೆ. 

ಈ ಬಾರಿ NDA ಮೈತ್ರಿಕೂಟ ಎಷ್ಟು ಸ್ಥಾನ ಗಳಿಸಲಿದೆ ಅನ್ನೋದೇ ತೀವ್ರ ಕುತೂಹಲ ಮೂಡಿಸಿದೆ. ಇಂಡಿಯಾ ಮೈತ್ರಿಕೂಟಕ್ಕೆ ಮತದಾರ ಜೈ ಅಂದರೆ ರಾಹುಲ್‌ ಗಾಂಧಿ ಆಸೆ ಈಡೇರುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಈ ಬಾರಿಯೂ ಫಲಿತಾಂಶ ನಮ್ಮ ಪರವಾಗಿಯೇ ಬರಲಿದೆ ಅಂತಾ ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರ ಮುಗಿದ ಬಳಿಕ ಪ್ರಧಾನಿ ಮೋದಿಯವರು ಮೇ 30ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ವಿಶ್ವ ಪ್ರಸಿದ್ಧ ವಿವೇಕಾನಂದ ರಾಕ್ ಮೆಮೋರಿಯಲ್‌ಗೆ ಆಧ್ಯಾತ್ಮಿಕ ಪ್ರವಾಸ ಕೈಗೊಳ್ಳಲಿದ್ದಾರೆ.  

ಇದನ್ನೂ ಓದಿ: Rapido Free Ride : ಜೂನ್ 1 ರಂದು Rapido ಮೂಲಕ ಉಚಿತ ರೈಡ್ ಪಡೆಯಬೇಕೇ ? ಈ ಕೋಡ್ ಬಳಸಿ!

73 ವರ್ಷದ ಪ್ರಧಾನಿ ಮೋದಿಯವರು ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳವಾದ ಈ ಸ್ಮಾರಕದಲ್ಲಿ 48 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ ಎಂದು ವರದಿಯಾಗಿದೆ. ಮೇ 30 ಮತ್ತು ಮೇ 31ರಂದು ಕನ್ಯಾಕುಮಾರಿಯಲ್ಲಿಯೇ ವಾಸ್ತವ್ಯ ಹೂಡಲಿರುವ ಪ್ರಧಾನಿ ಮೋದಿ ಎರಡು ದಿನಗಳ ಕಾಲ ವಿವೇಕಾನಂದ ರಾಕ್ ಮೆಮೊರಿಯಲ್ ಹಾಲ್‌ನಲ್ಲಿ ಧ್ಯಾನ ಮಾಡಲಿದ್ದಾರೆ. ಜೂನ್ 1ರಂದು ಕನ್ಯಾಕುಮಾರಿಯಿಂದ ಅವರು ವಾಪಸ್‌ ಆಗಲಿದ್ದಾರೆಂದು ತಿಳಿದುಬಂದಿದೆ.    

ಕನ್ಯಾಕುಮಾರಿಯ ಧ್ಯಾನ ಮಂಟಪದಲ್ಲಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ ಪ್ರಧಾನಿ ಮೋದಿಯವರು ಹಗಲು ರಾತ್ರಿ ಧ್ಯಾನ ಮಾಡಲಿದ್ದಾರೆ. ಸ್ವಾಮಿ ವಿವೇಕಾನಂದ ರಾಕ್ ಮೆಮೋರಿಯಲ್ ಭಾರತದ ದಕ್ಷಿಣ ತುದಿಯಾದ ಕನ್ಯಾಕುಮಾರಿಯ ಸಮುದ್ರದ ಮಧ್ಯದಲ್ಲಿದ್ದು, ಇದು ತಮಿಳು ಸಂತ ತಿರುವಳ್ಳುವರ್ ಏಕಶಿಲಾ ಪ್ರತಿಮೆಗೆ ಹತ್ತಿರದಲ್ಲಿದೆ. ಅಂದಹಾಗೆ 2019ರ ಲೋಕಸಭಾ ಚುನಾವಣಾ ಫಲಿತಾಂಶದ ಕೆಲದಿನ ಮುಂಚಿತವಾಗಿ ಕೇದರಾನಾಥ ದೇಗುಲ ವ್ಯಾಪ್ತಿಯ ಹಿಮಾಲಯದ 11,700 ಅಡಿ ಎತ್ತರದ ರುದ್ರ ಗುಹೆಯೊಂದರಲ್ಲಿ ಪ್ರಧಾನಿ ಮೋದಿಯವರು ಎರಡು ದಿನಗಳ ಕಾಲ ಧ್ಯಾನ ಮಾಡಿದ್ದರು.  

ಇದನ್ನೂ ಓದಿCyclone Remal effects : ಅಸ್ಸಾಂನಲ್ಲಿ ಒಂದು ಸಾವು, 17 ಮಂದಿ ಗಾಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News