PMJD: ತುರ್ತು ಸಂದರ್ಭಗಳಲ್ಲಿ ಜನ್-ಧನ್ ಖಾತೆಯಿಂದ ನೀವು ಒಂದೂವರೆ ಲಕ್ಷ ಪಡೆದುಕೊಳ್ಳಬಹುದು, ಇಲ್ಲಿದೆ ವಿವರ

Benefits Under PMJDY India - ಈ ಯೋಜನೆಯ ಅಡಿ ಖಾತೆದಾರರು ತಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸುವುದರ ಜೊತೆಗೆ ಪ್ರಸ್ತುತ ಅವರಿಂದ ದೂರ ಇರುವ ಎಲ್ಲ ಅಧಿಕಾರಗಳು ಅವರಿಗೆ ಲಭಿಸುತ್ತವೆ. ಜನ್ ಧನ್ ಖಾತೆ ಜನಸಾಮಾನ್ಯರ ಬ್ಯಾಂಕಿಂಗ್/ ಉಳಿತಾಯ ಅಥವಾ ಹೂಡಿಕೆ, ಲೋನ್, ವಿಮಾ, ಪೆನ್ಶನ್ ವರೆಗೆ ಅವರ ತಲುಪನ್ನು ಸುನಿಶ್ಚಿತಗೊಳಿಸುತ್ತದೆ.

Written by - Nitin Tabib | Last Updated : May 29, 2021, 02:55 PM IST
  • PMJDY ಯೋಜನೆ ಹಲವು ಲಾಭಗಳನ್ನು ಹೊಂದಿದೆ.
  • ಈ ಖಾತೆ ಹೊಂದಿದವರಿಗೆ ವಿಮಾ ರಕ್ಷಣೆ ಕೂಡ ಸಿಗುತ್ತದೆ.
  • ಹಾಗಾದರೆ ಬನ್ನಿ ಜನ್-ಧನ್ ಖಾತೆಯ ಲಾಭಗಳ ಕುರಿತು ತಿಳಿಯೋಣ ಬನ್ನಿ.
PMJD: ತುರ್ತು ಸಂದರ್ಭಗಳಲ್ಲಿ ಜನ್-ಧನ್ ಖಾತೆಯಿಂದ ನೀವು ಒಂದೂವರೆ ಲಕ್ಷ ಪಡೆದುಕೊಳ್ಳಬಹುದು, ಇಲ್ಲಿದೆ ವಿವರ title=
Benefits Under PMJDY India (File Photo)

ನವದೆಹಲಿ: Benefits Under PMJDY India - ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರ (PM Narendra Modi Government) ದೇಶದ ಆರ್ಥಿಕ ರಂಗದಲ್ಲಿ ಅನೇಕ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಿದೆ. ಅಂತಹ ಒಂದು ಪ್ರಮುಖ ಯೋಜನೆ ಎಂದರೆ ಅದುವೇ, ಪಿಎಂ ಜನ್ ಧನ್ ಯೋಜನೆ (PMJDY). ಪ್ರಧಾನಿ ಜನ್ ಧನ್ ಯೋಜನೆ (Pradhan Mantri Jan Dhan Yojana) ಮೋದಿ ಸರ್ಕಾರದ ಮೊದಲ ಅವಧಿಯಿಂದಲೂ ಹೆಡ್ ಲೈನ್ ನಲ್ಲಿದೆ. ಇದರ ಅಡಿಯಲ್ಲಿ ದೇಶದ ಜನಸಾಮಾನ್ಯರಿಗೆ ಬ್ಯಾಂಕಿನಲ್ಲಿ ಜನ್ ಧನ್ ಖಾತೆ (Jan Dhan Account) ತೆರೆಯುವ ಸೌಲಭ್ಯ ನೀಡಲಾಗುತ್ತದೆ.

ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ (Narendra Modi Government) ಕನಸಿನ ಕೂಸು ಎಂದೇ ಕರೆಯಲಾಗುವ ಈ ಯೋಜನೆ ಜನರ ಜೀವನ ಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ಯೋಜನೆ ಹಲವು ಪ್ರಯೋಜನಗಳನ್ನು (PM Jan Dhan Yojana Status) ಹೊಂದಿದೆ. ಆದರೆ, ಇಂದಿಗೂ ಕೂಡ ಹಲವು ಜನರಿಗೆ ಈ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಅಂದರೆ, ಜನ್ ಧನ್ ಯೋಜನೆಯ ಅಡಿ ಯಾರು ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆಯೋ ಅವರಿಗೆ ಹಲವು ಆರ್ಥಿಕ ಲಾಭಗಳು ಸಿಗುತ್ತವೆ. ಹಾಗಾದರೆ ಬನ್ನಿ ಈ ಯೋಜನೆಯ ಕುರಿತು ಕೆಲ ಮಹತ್ವದ ಮಾಹಿತಿ ಗಳನ್ನು ತಿಳಿದುಕೊಳ್ಳೋಣ.

ವಿಮಾ ಅಡಿಯಲ್ಲಿ 1.30 ಲಕ್ಷ ರೂ.ಗಳ ಲಾಭ (Insurance Coverage Under PM Jan Dhan Yojana )
ಪಿಎಂ ಜನ್ ಧನ್ ಯೋಜನೆಯ ಅಡಿ ತೆರೆಯಲಾಗಿರುವ ಪ್ರತಿಯೊಂದು ಖಾತೆಯ ಖಾತಾಧಾರಕರಿಗೆ 1.30ಲಕ್ಷ ರೂ.ಗಳ ಲಾಭ ಸಿಗುತ್ತದೆ. ಇದರಲ್ಲಿ ಅಪಘಾತ ವಿಮೆ ಕೂಡ ಶಾಮೀಲಾಗಿದೆ. ಈ ಖಾತೆ ಹೊಂದಿದವರಿಗೆ 1 ಲಕ್ಷ ರೂ.ಗಳ ವಿಮೆ ಹಾಗೂ ರೂ.30 ಸಾವಿರವರೆಗೆ ಜನರಲ್ ಇನ್ಸೂರೆನ್ಸ್ ನೀಡಲಾಗುತ್ತದೆ. ಅಂದರೆ, ಖಾತೆದಾರರು ಆಕ್ಸಿಡೆಂಟ್ ಗೆ ಒಳಗಾದರೆ. ಅವರಿಗೆ 30 ಸಾವಿರ ರೂ. ನೀಡಲಾಗುತ್ತದೆ. ಒಂದು ವೇಳೆ ಈ ಅಪಘಾತದಲ್ಲಿ ಅವರು ಮೃತಪಟ್ಟರೆ, ಅವರ ಕುಟುಂಬ ಸದಸ್ಯರಿಗೆ ರೂ.1 ಲಕ್ಷ ಪರಿಹಾರ ನೀದಲಾಗುತ್ತದೆ. ಒಟ್ಟಾರೆ ಹೇಳುವುದಾದರೆ, ಈ ಖಾತೆ ತೆರೆಯುವ ಖಾತೆದಾರರಿಗೆ 1.30 ಲಕ್ಷ ರೂ.ಸಿಗುತ್ತದೆ.

ಝೀರೋ ಬ್ಯಾಲೆನ್ಸ್ ನಿಂದ ತೆರೆಯಲಾಗುವ ಈ ಖಾತೆಯ ಹಲವು ಲಾಭಗಳಿವೆ
ಈ ಯೋಜನೆಯ ಅಡಿ ಖಾತೆದಾರರಿಗೆ (PM Jan Dhan Yojana Apply Online) ಅವರ ಭವಿಷ್ಯದ ಸುರಕ್ಷತೆಯನ್ನು ಸುನೀಶ್ಚಿತಗೊಳಿಸುವುದರ ಜೊತೆಗೆ, ಇದುವರೆಗೂ ಅವರು ದೂರವಿದ್ದ ಎಲ್ಲ ಅಧಿಕಾರಗಳು ಪ್ರಾಪ್ತಿಯಾಗುತ್ತವೆ. ಸ್ವತಃ ಪ್ರಧಾನಿ ಮೋದಿ ಅವರೇ ಹಲವು ಬಾರಿ ಈ ಯೋಜನೆಯ ಕುರಿತು ಶ್ಲಾಘನೆ ವ್ಯಕ್ತಪಡಿಸುತ್ತ, ಈ ಯೋಜನೆಯ ಲಾಭಗಳ ಕುರಿತು ವಿವರಣೆ ನೀಡಿದ್ದಾರೆ. ಈ ಯೋಜನೆ ಯಾವುದೇ ಸಾಮಾನ್ಯ ನಾಗರಿಕನ ಬ್ಯಾಂಕಿಂಗ್/ಉಳಿತಾಯ ಹಾಗೂ ಜಮೆ ಖಾತೆ, ಲೋನ್, ವಿಮಾ, ಪೆನ್ಷನ್ ವರೆಗೆ ಅವರ ತಲುಪಿವಿಕೆಯನ್ನು ಸುನೀಶ್ಚಿತಗೊಳಿಸುತ್ತದೆ. ಝೀರೋ ಬ್ಯಾಲೆನ್ಸ್ (PM Jan Dhan Yojana Balance Check) ಮೂಲಕ ಕೂಡ ತೆರೆಯಲಾಗುವ ಈ ವಿಶೇಷ ಖಾತೆಯನ್ನು ನೀವು ನಿಮ್ಮ ಮನೆಯ ಹತ್ತಿರದಲ್ಲಿಯೇ ಇರುವ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ತೆರೆಯಬಹುದು.

ಇದನ್ನೂ ಓದಿ-Big News: ಶೀಘ್ರದಲ್ಲಿಯೇ ರೂ.100ರ ಹೊಸ ನೋಟು ಬಿಡುಗಡೆ, ನೆನೆಯುವುದಿಲ್ಲ-ಹರಿಯುವುದಿಲ್ಲ ಎಂದ RBI

ದುರ್ಘಟನೆಯ ಸಂದರ್ಭದಲ್ಲಿ ವಿಮಾ ಸುರಕ್ಷೆಯ ಕವಚ 
ಈ ಖಾತೆಗಳಲ್ಲಿಯೂ ಕೂಡ ಇತರೆ ಉಳಿತಾಯ ಖಾತೆಗಳಲ್ಲಿ ಸೇವಿಂಗ್ಸ್ ಅಕೌಂಟ್ (Saving Account) ಮೇಲೆ ಸಿಗುವ ಬಡ್ಡಿದರದಷ್ಟೇ ಬಡ್ಡಿ ಸಿಗುತ್ತದೆ. ಇದಲ್ಲದೆ ಗ್ರಾಹಕರಿಗೆ ಮೊಬೈಲ್ ಬ್ಯಾಂಕಿಂಗ್ (Mobile Banking)  ಸೌಕರ್ಯ ಕೂಡ ಉಚಿತವಾಗಿ ಸಿಗುತ್ತದೆ. ಈ ಖಾತೆಗಳಿಗೆ ಸರ್ಕಾರ ರೂ.10,000 ವರಗೆ ಓವರ್ ಡ್ರಾಫ್ಟ್ ಸೌಕರ್ಯ ಕೂಡ ಒದಗಿಸುತ್ತದೆ. ಈ ಖಾತೆಗಳೊಂದಿಗೆ ಸಿಗುವ ರುಪೇ ಕಾರ್ಡ್ ಹಲವು ರೀತಿಯ ಸೌಕರ್ಯಗಳನ್ನು ಹೊಂದಿದೆ. ರುಪೇ ಕಾರ್ಡ್ ಕೂಡ ತನ್ನ ಕಾರ್ಡ್ ಧಾರಕರಿಗೆ 2 ಲಕ್ಷ ರೂ.ಗಳವರೆಗೆ ವಿಮಾ ರಕ್ಷಣೆ (Accident Insurance Cover) ಒದಗಿಸುತ್ತದೆ. 

ಇದನ್ನೂ ಓದಿ- RBI News - ಬ್ಯಾಂಕ್ ಗ್ರಾಹಕರಿಗೊಂದು ನೆಮ್ಮದಿಯ ಸುದ್ದಿ, ಶೀಘ್ರವೇ ನಿಮ್ಮ ಹಣದ ಸುರಕ್ಷತೆಗೆ ಜಾರಿಯಾಗಲಿದೆ ಈ ಸಿಸ್ಟಂ

ಜನ್ ಧನ್ ಖಾತೆ ತೆರೆಯಲು (PM Jan Dhan Account Opening Online) KYC ಪ್ರಕ್ರಿಯೆಯ ಅಡಿ ಕೆಲ ದಾಖಲೆಗಳನ್ನು ಒದಗಿಸುವುದು ಅನಿವಾರ್ಯವಾಗಿದೆ. ಇದನ್ನು ನೀವು ನಿಮ್ಮ ಆಧಾರ್, ಪ್ಯಾನ್, ಡ್ರೈವಿಂಗ್ ಲೈಸನ್ಸ್, ವೋಟರ್ ಐಡಿ ಕಾರ್ಡ್, ಮನರೆಗಾ ಜಾಬ್ ಕಾರ್ಡ್ ಅಥವಾ ಯಾವುದೇ ಸರ್ಕಾರಿ ಪೆನ್ಷನ್ ಸ್ಕೀಮ್ ದಾಖಲೆಗಳ ಆಧಾರದ ಮೇಲೆ ಖಾತೆ ತೆರೆಯಬಹುದು (PM Jan Dhan Yojana Online Registration).

ಇದನ್ನೂ ಓದಿ-GST Council Meeting 2021: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ 6 ಪ್ರಮುಖ ಘೋಷಣೆಗಳು ಇಲ್ಲಿವೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News