ಪ್ರಶಾಂತ್ ಕಿಶೋರ್ ಜೆಡಿಯುನಿಂದ ಉಚ್ಚಾಟನೆ

ಪ್ರಶಾಂತ್ ಕಿಶೋರ್ ಅವರು ಮತ್ತು ನಿತೀಶ್ ಕುಮಾರ್ ನಡುವೆ ವಾರಗಟ್ಟಲೆ ನಡೆದ ಘರ್ಷಣೆಯ ನಂತರ ಬಿಹಾರ ಆಡಳಿತದ ಜೆಡಿಯುನಿಂದ ಉಚ್ಚಾಟಿಸಲಾಗಿದೆ.

Last Updated : Jan 29, 2020, 04:35 PM IST
 ಪ್ರಶಾಂತ್ ಕಿಶೋರ್ ಜೆಡಿಯುನಿಂದ ಉಚ್ಚಾಟನೆ  title=

ನವದೆಹಲಿ: ಪ್ರಶಾಂತ್ ಕಿಶೋರ್ ಅವರು ಮತ್ತು ನಿತೀಶ್ ಕುಮಾರ್ ನಡುವೆ ವಾರಗಟ್ಟಲೆ ನಡೆದ ಘರ್ಷಣೆಯ ನಂತರ ಬಿಹಾರ ಆಡಳಿತದ ಜೆಡಿಯುನಿಂದ ಉಚ್ಚಾಟಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ನಡೆದ ಸಂಘರ್ಷದ ಹಿನ್ನಲೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿನ್ನೆ ನಿರ್ಗಮನದ ಸುಳಿವು ನೀಡಿದ್ದರು. 2018 ರಿಂದ ಜನತಾದಳ ಯುನೈಟೆಡ್ ಉಪಾಧ್ಯಕ್ಷರಾಗಿ ಪ್ರಶಾಂತ್ ಕಿಶೋರ್ ನಿತೀಶ್ ಕುಮಾರ್ ಅವರಿಗೆ ನಂಬರ್ ಟು ಆಗಿದ್ದರು.ಈ ಬೆಳಿಗ್ಗೆ, ಜೆಡಿಯು ಪಕ್ಷದ ಮುಖಂಡರು ಶ್ರೀ ಕಿಶೋರ್ ಅವರನ್ನು ಮಾರಣಾಂತಿಕ ಕೊರೊನಾವೈರಸ್ಗೆ ಹೋಲಿಸುವ ಮೂಲಕ ಟೀಕಿಸಿದ್ದರು. ಜೆಡಿಯು ನಾಯಕ ಅಜಯ್ ಅಲೋಕ್ ಅವರು ಪ್ರಶಾಂತ್ ಕಿಶೋರ್ ಅವರು ವಿಶ್ವಾಸಾರ್ಹವಲ್ಲ" ಎಂದು ಹೇಳಿದ್ದರು.

"ಈ ವ್ಯಕ್ತಿ ನಂಬಲರ್ಹನಲ್ಲ. ಅವನಿಗೆ (ಪ್ರಧಾನಿ ನರೇಂದ್ರ ಮೋದಿ ಜಿ ಮತ್ತು ನಿತೀಶ್ ಜಿ ಅವರ ನಂಬಿಕೆಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಅವರು ಎಎಪಿಗಾಗಿ ಕೆಲಸ ಮಾಡುತ್ತಾರೆ, ರಾಹುಲ್ ಗಾಂಧಿಯೊಂದಿಗೆ ಮಾತನಾಡುತ್ತಾರೆ, ಮಮತಾ ದೀದಿ (ಮಮತಾ ಬ್ಯಾನರ್ಜಿ) ಅವರೊಂದಿಗೆ ಕುಳಿತುಕೊಳ್ಳುತ್ತಾರೆ. ಅವರನ್ನು ಯಾರು ನಂಬುತ್ತಾರೆ?  ಈ  ಕೊರೋನವೈರಸ್ ನಮ್ಮನ್ನು ತೊರೆಯುತ್ತಿರುವುದು ಸಂತೋಷವಾಗಿದೆ, ಅವರು ಎಲ್ಲಿ ಬೇಕಾದರೂ ಹೋಗಬಹುದು "ಎಂದು ಪಕ್ಷದ ಮಾಜಿ ವಕ್ತಾರ ಅಜಯ್ ಅಲೋಕ್ ವಾಗ್ದಾಳಿ ನಡೆಸಿದ್ದರು.

ನಿತೀಶ್ ಕುಮಾರ್ ಅವರು ನಿನ್ನೆ ಕಿಶೋರ್ ಅವರು ಬೇಕಾದರೆ ಪಕ್ಷ ತೊರೆಯಬಹುದು ಅಥವಾ ಅವರು ಪಕ್ಷಕ್ಕೆ ಬದ್ದರಾಗಿರಬೇಕಾಗುತ್ತದೆ ಎಂದು ಹೇಳಿದ್ದರು.

 

Trending News