Lok Sabha Election 2024: ಖುಷಿಯಿಂದ ಮನೆಯಿಂದಲೇ ಮತ ಚಲಾಯಿಸಿದ ಹಿರಿಯ ನಾಗರಿಕರು, ವಿಕಲಚೇತನರು..!

Lok Sabha Election 2024: ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ಭಾದಿತ ಯಾವದೇ ಮತದಾರ ಇಲ್ಲ. ಚುನಾವಣಾ ಆಯೋಗದಿಂದ ಅಧಿಸೂಚಿತಗೊಂಡ ಅಗತ್ಯ ಸೇವೆಯಡಿ ಬರುವ 16 ಇಲಾಖೆಗಳ ನೌಕರರಿಗೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

Written by - Manjunath N | Last Updated : Apr 25, 2024, 06:16 PM IST
  • ಧಾರವಾಡ ಕಮಲಾಪುರ ಕೋಟಿ ಓಣಿ ನಿವಾಸಿಯಾಗಿರುವ 101 ವರ್ಷದ ಶತಾಯುಷಿ ಶಂಕ್ರವ್ವ ಕಲಘಟಗಿ ಅವರಿಗೆ ಕಣ್ಣು ಕಾಣಿಸುವದಿಲ್ಲ.
  • ಅವರ ಹಿರಿಯ ಮಗ ಪರಪ್ಪ ಕಲಘಟಗಿ ಸಹಾಯದಿಂದ ಮತ ಚಲಾಯಿಸಿದರು.
  • ಹಾಸಿಗೆ ಹಿಡಿದಿರುವ ನಮ್ಮಂತ ಮುದುಕರಿಗೆ ಮತ ಹಾಕಲು ಅವಕಾಶ ಕೊಟ್ಟ ನಿಮಗೆ ಪುಣ್ಯ ಹತ್ತಲಿ ಎಂದರು.
Lok Sabha Election 2024: ಖುಷಿಯಿಂದ ಮನೆಯಿಂದಲೇ ಮತ ಚಲಾಯಿಸಿದ ಹಿರಿಯ ನಾಗರಿಕರು, ವಿಕಲಚೇತನರು..! title=

ಧಾರವಾಡ: ಭಾರತ ಚುನಾವಣಾ ಆಯೋಗದ ಎಲ್ಲರೂ ಒಳಗೊಳ್ಳುವಿಕೆ ಆಶಯದಂತೆ ಮತ್ತಿ ಮತದಾನ ಹಕ್ಕು ಪಡೆದಿರುವ ಅರ್ಹ ಯಾರು ಮತದಾನದಿಂದ ಹೊರಗುಳಿಯದಂತೆ ಜಾಗೃತಿವಹಿಸಲು ಪ್ರಜಾಪ್ರಭುತ್ವದಲ್ಲಿ ಮತದಾನದ ವಿನೂತನ ಕ್ರಮವಾದ ಮನೆಯಿಂದಲೇ ಮತದಾನ ಪ್ರಕ್ರಿಯೆ ಇಂದು ಬೆಳಿಗ್ಗೆ 7 ಗಂಟೆಯಿಂದ ಜಿಲ್ಲೆಯಲ್ಲಿ ಆರಂಭವಾಗಿದ್ದು, ನೋಂದಾಯಿತ ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಖುಷಿಯಿಂದ ತಮ್ಮ ಮನೆಯಿಂದಲೇ ತಮ್ಮ ಮತದಾನದ ಹಕ್ಕು ಚಲಾಯಿಸಿ, ಜಿಲ್ಲಾಡಳಿತಕ್ಕೆ, ಚುನಾವಣಾ ಆಯೋಗಕ್ಕೆ ಧನ್ಯತೆ ಅರ್ಪಿಸಿದರು.

ಮನೆಯಿಂದಲೇ ಮತದಾನ ಪ್ರಕ್ರಿಯೆ ಅತೀ ಮಹತ್ವದ್ದು ಮತ್ತು ದೈಹಿಕವಾಗಿ ಒಂದಲ್ಲ ಒಂದು ರೀತಿಯಲ್ಲಿ ಅಶಕ್ತರಾಗಿರುವವರಿಗೆ ಇದು ಅತ್ಯಂತ ಉಪಯುಕ್ತವಾಗಿದೆ. ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿಕೊಂಡಿರುವ ಧಾರವಾಡ ನಗರದ ಕಮಲಾಪುರ, ಮಾಳಾಪುರ, ಸಾಧನಕೇರಿ, ದೊಡ್ಡನಾಯಕನಕೋಪ್ಪ, ಸಾರಸ್ವತಪುರ ಪ್ರದೇಶಗಳಿಗೆ ಇಂದು ಬೆಳಿಗ್ಗೆಯಿಂದ ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತೆರಳಿ, ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಮನೆಗಳಿಗೆ ಖುದ್ದು ಭೇಟಿ ನೀಡಿ, ಮತದಾನ ಪ್ರಕ್ರಿಯೆ ಪರಿಶೀಲಿಸಿದರು. ಮತ್ತು ಮತ ಚಲಾಯಿಸಿದ ಮತದಾರರನ್ನು ಮಾತನಾಡಿಸಿದರು.

ಇದನ್ನೂ ಓದಿ: ಬರ್ತ್ ಟ್ಯಾಕ್ಸ್ಯೂ ಇಲ್ಲ, ಡೆತ್ ಟ್ಯಾಕ್ಸ್ಯೂ ಇಲ್ಲ, ಪಿತ್ರೊಡಾ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ 

ನಂತರ ಅವರು ಮಧ್ಯಾಹ್ನ ಧಾರವಾಡ ಕಮಲಾಪುರ ಶಾಲೆ ನಂಬರ 4 ರಲ್ಲಿ ಸ್ಥಾಪಿಸಿರುವ ವಿವಿಧ ಮತಗಟ್ಟೆಗಳ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.May be an image of 3 people and text

ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿಕೊಂಡಿರುವ 1853 ಮತದಾರರಿಂದ ಮತದಾನ ಪಡೆಯಲು ಸೆಕ್ಟರ್ ಆಫೀಸರ್ ನೇತೃತ್ವದಲ್ಲಿ 102 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ ಪಿ.ಆರ್.ಓ, ಪೆÇಲೀಸ್ ಸೇರಿ 5 ಜನ ಸಿಬ್ಬಂದಿಗಳಿದ್ದಾರೆ. ಇಂದು ಮತ್ತು ನಾಳೆ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನೋಂದಾಯಿತ 85 ವರ್ಷ ಮೇಲ್ಪಟ್ಟ ಹಾಗೂ ಶೇ.40 ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವ ವಿಕಲಚೇತನರ ಮನೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ನಡೆಸುತ್ತಿದ್ದಾರೆ. ಇಂದು ಮಧ್ಯಾಹ್ನದವರೆಗೆ ಜಿಲ್ಲೆಯಲ್ಲಿ ಸುಮಾರು 300 ಜನ ಮತದಾರರು ಮನೆಯಿಂದಲೇ ಮತದಾನ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ಭಾದಿತ ಯಾವದೇ ಮತದಾರ ಇಲ್ಲ. ಚುನಾವಣಾ ಆಯೋಗದಿಂದ ಅಧಿಸೂಚಿತಗೊಂಡ ಅಗತ್ಯ ಸೇವೆಯಡಿ ಬರುವ 16 ಇಲಾಖೆಗಳ ನೌಕರರಿಗೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 1221 ನಮೂನೆ 12ಡಿಗಳನ್ನು ವಿತರಿಸಲಾಗಿದ್ದು, ಅಂಚೆ ಮೂಲಕ ಮತದಾನ ಮಾಡಲು 1191 ಮತದಾರರು 12 ಡಿ ಪಡೆದಿದ್ದು, 1167 ಜನರು ನಮೂನೆ 12ಡಿ ಗಳನ್ನು ಸಲ್ಲಿಸಿದ್ದು, 1167 12ಡಿ ಗಳನ್ನು ಅನುಮೋದಿಸಲಾಗಿದೆ ಎಂದು ಅವರು ತಿಳಿಸಿದರು.

ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ಭಾದಿತ ಯಾವದೇ ಮತದಾರ ಇಲ್ಲ. ಚುನಾವಣಾ ಆಯೋಗದಿಂದ ಅಧಿಸೂಚಿತಗೊಂಡ ಅಗತ್ಯ ಸೇವೆಯಡಿ ಬರುವ 16 ಇಲಾಖೆಗಳ ನೌಕರರಿಗೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಧಾರವಾಡ ತಹಸಿಲ್ದಾರ ಕಚೇರಿಯಲ್ಲಿ ಅಂಚೆ ಮತದಾನ ಕೇಂದ್ರ ಸ್ಥಾಪನೆ: ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿನ ಅಂಚೆ ಮತದಾನ ಮಾಡುವ ನೌಕರರಿಗೆ ಧಾರವಾಡ ತಹಸಿಲ್ದಾರ ಕಚೇರಿಯಲ್ಲಿ ಮೇ 1 ರಿಂದ ಮೇ 3 ರವರೆಗೆ ಮತದಾನ ಕೇಂದ್ರ ತೆರೆಯಲಾಗುತ್ತದೆ. ನಮೂನೆ 12ಡಿ ಪಡೆದು, ಅನುಮೋದಿತವಾಗಿರುವ ಅಂಚೆ ಮತದಾರರು ಧಾರವಾಡ ತಹಸಿಲ್ದಾರ ಕಚೇರಿಯಲ್ಲಿ ಸ್ಥಾಪಿತವಾಗುವ ಮತಗಟ್ಟೆಯು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ತೆರೆದಿರುತ್ತದೆ. ಈ ಸಮಯದಲ್ಲಿ ಬಂದು ತಮ್ಮ ಮತ ಚಲಾಯಿಸಬಹುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಬೇರೆ ಜಿಲ್ಲೆಯ ಮತದಾರ ಅನುಕೂಲಕ್ಕಾಗಿ ಹೊಸದಾಗಿ ಅಂಚೆ ಮತಪತ್ರ ವಿನಿಮಯ (ಎಕ್ಸಚೈಂಜ್) ಕೇಂದ್ರ ಸ್ಥಾಪನೆ: ನೌಕರ ಕರ್ತವ್ಯ ಸಲ್ಲಿಸುವ ಜಿಲ್ಲೆ ಮತ್ತು ಮತದಾರನಾಗಿರುವ ಜಿಲ್ಲೆ ಬೇರೆ ಬೇರೆ ಆಗಿದ್ದಲ್ಲಿ ಅವರು ಮತದಾಮ ಮಾಡಲು ಅನುಕೂಲವಾಗುವಂತೆ ಅಂಚೆ ಮತಪತ್ರಗಳನ್ನು ವಿತರಿಸಿ, ಸಂಗ್ರಹಿಸಿ, ಅವರು ಮತದಾರರಾಗಿರುವ ಜಿಲ್ಲೆಗಳಿಗೆ ಕಳುಹಿಸಲು ಮತ್ತು ಬೇರೆ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಧಾರವಾಡ ಜಿಲ್ಲೆಯ ನೌಕರರ ಅಂಚೆ ಮತಪತ್ರ ಪಡೆಯಲು ಅನುಕೂಲವಾಗುವಂತೆ ಭಾರತ ಚುನಾವಣಾ ಆಯೋಗವು ಪ್ರಥಮ ಬಾರಿಗೆ ಎಕ್ಸಚೈಂಜ್ ಸೆಂಟರ್ ತೆರೆದಿದ್ದು, ಅದು ಧಾರವಾಡ ನಗರದ ಆರ್.ಎಲ್.ಎಸ್. ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಲಿದೆ.

ಇಡೀ ರಾಜ್ಯದಲ್ಲಿ ಇಂತ ಎರಡು ಎಕ್ಸಚೈಂಜ್ ಕೇಂದ್ರಗಳು ಮಾತ್ರ ಇದ್ದು, ರಾಜ್ಯ ಜಿಲ್ಲೆಗಳಲ್ಲಿ ಏ.26 ರಂದು ಜರುಗುವ ಎರಡನೇ ಹಂತದ ಚುನಾವಣೆಯ ಕರ್ತವ್ಯನಿರತ ಸಿಬ್ಬಂದಿಗಳಿಗೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ಮತ್ತು ಮೇ 7 ರಂದು ಮತದಾನ ಜರುಗುವ ಜಿಲ್ಲೆಗಳಲ್ಲಿ ಕರ್ತವ್ಯನಿರತ ಸಿಬ್ಬಂದಿಗಳಿಗೆ ಅನುಕೂಲವಾಗುವಂತೆ ಚುನಾವಣಾ ಆಯೋಗ ಧಾರವಾಡ ಜಿಲ್ಲೆಯಲ್ಲಿ ಏಕ್ಸಚೈಂಜ್ ಸೆಂಟರ್ ಸ್ಥಾಪಿಸಿದೆ. ಧಾರವಾಡ ಜಿಲ್ಲಾಡಳಿತದಿಂದ ಸಿಬ್ಬಂದಿ ನೇಮಿಸಿ, ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ರೂ.21,47,59,890 ಮಾಲ್ಯದ ವಸ್ತು, ನಗದು ಜಪ್ತಿ: 916 ಪ್ರಕರಣ ದಾಖಲು:* ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಧಾರವಾಡ ಜಿಲ್ಲೆಯಲ್ಲಿ ಮಾರ್ಚ 16 ರಿಂದ ಇವತ್ತಿನವರೆಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಡಿ ನಗದು ರೂ. 20,35,52,970 ಮತ್ತು ಚಿನ್ನ, ನಗದು, ಡ್ರಗ್ಸ್, ಮದ್ಯ, ಉಚಿತ ಕೊಡುಗೆಗಳು ಸೇರಿದಂತೆ ರೂ.1,12,06,920 ಗಳ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆ ನಗದು ಸೇರಿ ರೂ. 21,47,59,890 ಗಳ ಮಾಲ್ಯದ ವಸ್ತುಗಳು ಜಪ್ತಿಯಾಗಿವೆ ಮತ್ತು ಕ್ಯಾಶ್ ರೀ ಅಡ್ರಸಲ್ ಕಮೀಟಿಯಿಂದ ಜಪ್ತಿಗೆ ಸರಿಯಾದ ದಾಖಲೆ ಸಲ್ಲಿಸಿದ ಪ್ರಕರಣಗಳಲ್ಲಿ ಅವುಗಳ ಮಾಲೀಕರಿಗೆ ಇವತ್ತಿನವರೆಗೆ ರೂ.19,16,500 ಗಳ ನಗದು ಮರಳಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಮುಸ್ಲಿಮರಿಗೆ ಒಬಿಸಿ, ದಲಿತರಿಗೆ ಅನ್ಯಾಯ: ಕಾಂಗ್ರೆಸ್ ವಿರುದ್ಧ ಸಚಿವ ಪ್ರಲ್ಹಾದ ಜೋಶಿ ಆರೋಪ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಾಗಿ ಎಫ್.ಎಸ್.ಟಿ ಮತ್ತು ಎಸ್.ಎಸ್.ಟಿ ತಂಡಗಳಿಂದ 12 ಪ್ರಕರಣಗಳಲ್ಲಿ, 76 ಪ್ರಕರಣಗಳಲ್ಲಿ ಪೆÇಲೀಸ್, 826 ಪ್ರಕರಣಗಳಲ್ಲಿ ಅಬಕಾರಿ ಇಲಾಖೆ ಎಫ್.ಐ.ಆರ್ ದಾಖಲಿಸಿದೆ. ಒಟ್ಟಾರೆ 916 ಪ್ರಕರಣಗಳು ಇವತ್ತಿನವರೆಗೆ ದಾಖಲಾಗಿವೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಮತದಾರರ ಅಭಿಪ್ರಾಯ:

ಶಂಕ್ರವ್ವ ಕಲಘಟಗಿ; ಧಾರವಾಡ ಕಮಲಾಪುರ ಕೋಟಿ ಓಣಿ ನಿವಾಸಿಯಾಗಿರುವ 101 ವರ್ಷದ ಶತಾಯುಷಿ ಶಂಕ್ರವ್ವ ಕಲಘಟಗಿ ಅವರಿಗೆ ಕಣ್ಣು ಕಾಣಿಸುವದಿಲ್ಲ. ಅವರ ಹಿರಿಯ ಮಗ ಪರಪ್ಪ ಕಲಘಟಗಿ ಸಹಾಯದಿಂದ ಮತ ಚಲಾಯಿಸಿದರು. ಹಾಸಿಗೆ ಹಿಡಿದಿರುವ ನಮ್ಮಂತ ಮುದುಕರಿಗೆ ಮತ ಹಾಕಲು ಅವಕಾಶ ಕೊಟ್ಟ ನಿಮಗೆ ಪುಣ್ಯ ಹತ್ತಲಿ ಎಂದರು. ಅವರ ಮಗ ಪರಪ್ಪ ಮಾತನಾಡಿ, ಇದು ಬಾಳ ಚಲೋ ಕೆಲಸ. ಮನೆಯಿಂದಲೇ ಮತದಾನದ ಅವಕಾಶ ಇಲ್ಲದಿದ್ರ, ನಮ್ಮವ್ವ ಮತ ಹಾಕ ಆಕ್ಕಿರಲಿಲ್ಲ. ಇಂತ ವಯಸ್ಸಿನಾಗ ಅವರನ್ನ ಮತಗಟ್ಟೆಗೆ ಕರೆದುಕೊಂಡೊಗೊದು ಕಷ್ಟ. ಈ ಸೌಲಭ್ಯ ಇಲ್ಲದಿದ್ರ ನಮ್ಮಂವನ ವೋಟ್ ವೆಸ್ಟ್ ಆಗತಿತ್ತು. ಜಿಲ್ಲಾಧಿಕಾರಿಗಳಿಗೆ ನನ್ನ ಧನ್ಯವಾದ ಅಂದ್ರು.

ಉಳವಪ್ಪ ಸತ್ಯನ್ನನವರ: ಧಾರವಾಡ ಮಾಳಾಪುರ ರಸ್ತೆ, ಹಾಳಭಾವಿ ಸರ್ಕಲ್ ಓಣಿ ನಿವಾಸಿ 85 ವರ್ಷದ ಹಿರಿಯ ನಾಗರಿಕ ಉಳವಪ್ಪ ಯಲ್ಲಪ್ಪ ಸತ್ಯನ್ನವರ ಮಾತನಾಡಿ, ಸ್ವಂತ ಜಿಲ್ಲಾಧಿಕಾರಿ ನಮ್ಮ ಮನಿಗೆ ಬಂದಿದ್ದು, ನಾನು ಮತ ಹಾಕಿದ್ದಕ್ಕೂ ಸಾರ್ಥಕವಾಯಿತು. ನನ್ನ ಒಬ್ಬನ ಸಲುವಾಗಿ ನಮ್ಮ ಮನೀನ ಮತಗಟ್ಟೆ ತರಾ ಮಾಡಿ, ಯಾರಿಗೂ ಕಾಣದಂಗ ನನ್ನ ವೊಟ್ ಪಡದ್ರು. ಆ ಟೈಮದಾಗ, ನಮ್ಮ ಮನಿ ಮತಗಟ್ಟೆ ತರಾ ಅನಸತಿತ್ತು.May be an image of 3 people, henna and text

ನಮ್ಮಂತ ವಯಸ್ಸಾದವರಿಗೆ ಮತಗಟ್ಟೆವರೆಗೆ ಹೋಗೊದು, ಅಲ್ಲಿ ಕ್ಯೂ ಅಂತಾ ಕಾಯುವುದು, ತ್ರಾಸಂತ ವೊಟ್ ಹಾಕಾಕ ಹೊದ್ರ ,ಅಲ್ಲಿ ಸಾಲಿನಲ್ಲಿ ಇದ್ದವರು ಕಿರಿಕಿರಿ ಮಾಡುದು ನೋಡಿದರ ಯಾಕ ಬೇಕಪ ಇದು ಅನಿಸತಿತ್ತು. ಈಗ ಮನೀಗೆ ಬಂದ ಮತ ಪಡೆದಿದ್ದು, ಬಹಳ ಖುಷಿ ಆಗೈತಿ. ನನ್ನ ಒಬ್ಬನ ಸಲುವಾಗಿ ಇಷ್ಟ ಅಚ್ಚುಕಟ್ಟಾಗಿ ಮತದಾನ ನಿರ್ವಹಿಸಿದ ಎಲ್ಲರಿಗೂ, ವಿಶೇಷವಾಗಿ ಜಿಲ್ಲಾಧಿಕಾರಿಗೆ ನನ್ನ ಕೃತಜ್ಞತೆಗಳು ಎಂದರು.

ವಿಕಲಚೇತನ ಮಹಿಳೆ ರೇಖಾ ಮಡಿವಾಳ: ಧಾರವಾಡ ದೊಡ್ಡನಾಯಕನಕೊಪ್ಪದ ಮುಧೋಳಕರ ಕಂಪೌಂಡ ನಿವಾಸಿ, ಪೆÇೀಲಿಯೋದಿಂದ ಒಂದು ಕಾಲು ಮತ್ತು ಒಂದು ಕೈ ಸ್ವಾದೀನ ಕಳೆದುಕೊಂಡು ವಿಕಲಚೇತನಳಾಗಿರುವ ರೇಖಾ ಮಡಿವಾಳರ ಮತದಾನದ ನಂತರ ಮಾತನಾಡಿ, ಇಂದು ಮನೆಯಿಂದ ಮತದಾನ ಮಾಡಿ, ನನಗೆ ತುಂಬಾ ಸಂತೋಷವಾಗಿದೆ. ಸಂವಿಧಾನದಲ್ಲಿರುವ ಸಮಾನತೆಯನ್ನು ನಮ್ಮಂತವರಿಗೂ ಮತದಾನದ ಹಕ್ಕು ನೀಡಿ, ನನ್ನ ಮತ ಪಡೆದ ಚುನಾವಣಾ ಆಯೋಗಕ್ಕೆ, ಜಿಲ್ಲಾಡಳಿತಕ್ಕೆ ನಮಸ್ಕಾರ ಹೇಳುತ್ತೇನೆ. ಮಹಿಳಾ ಜಿಲ್ಲಾಧಿಕಾರಿಯ ಕಾಳಜಿ, ಕಳಕಳಿ ನೋಡಿ, ಹೆಣ್ಣಾಗಿ ನನಗೆ ಹೆಮ್ಮೆ ಮೂಡಿಸಿದೆ. ನನ್ನ ಮತ ನನ್ನ ಜೀವಂತಿಕೆಯ ಸಂಕೇತ ಎಂದರು.

ಈ ಸಂದರ್ಭದಲ್ಲಿ ಅಂಚೆ ಮತಪತ್ರದ ಜಿಲ್ಲಾ ನೋಡಲ್ ಅಧಿಕಾರಿ ಮೋಹನ ಶಿವಣ್ಣವರ, ಧಾರವಾಡ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಶಾಲಂ ಹುಸೇನ್, ತಹಸಿಲ್ದಾರ ಡಾ.ಡಿ.ಎಚ್.ಹೂಗಾರ, ಸಹಾಯಕ ನೋಡಲ್ ಅಧಿಕಾರಿ ನಿಂಗನಗೌಡ ಶಾನಬೋಗ,

ಎಡಿಎಲ್‍ಆರ್ ರಾಜಶೇಖರ ಹಳ್ಳೂರ, ಕಂದಾಯ ನಿರೀಕ್ಷಕ ಗುರು ಸುಣಗಾರ, ಗ್ರಾಮ ಆಡಳಿತಾಧಿಕಾರಿಗಳಾದ ನೀಲಮ್ಮ ದಾಸನಕೋಪ್ಪ, ವಿಠ್ಠಲ ಕಿಲಿ, ಸೆಕ್ಟರ ಅಧಿಕಾರಿ ಶಂಬುಲಿಂಗ ಹುಲ್ಲೂರ, ಬಿಎಲ್‍ಓಗಳಾದ ಕವಿತಾ ತೋಟಗೇರ, ಶೋಭಾ ಮಠಪತಿ, ರಾಜಕೀಯ ಪಕ್ಷದ ಏಜಂಟ್ ಸುರೇಶ ಹುಬ್ಬಳ್ಳಿ ಸೇರಿದಂತೆ ಇತರರು ಇದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News