ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ಕೇಂದ್ರ ಸಚಿವರಾಗಿ ಸಂಸದರಾಗಿ ಹಲವಾರು ದಶಕಗಳ ಕಾಲ ಕಾರ್ಯನಿರ್ವಹಿಸಿದ್ದ ಜಾಫರ್ ಶರೀಫ್ ನಿಧನಕ್ಕೆ ದೇಶಾಧ್ಯಂತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೊವಿಂದ್ ಕನ್ನಡದಲ್ಲಿ ಟ್ವೀಟ್ ಮಾಡಿ "ಕೇಂದ್ರದ ರೈಲ್ವೆ ಮಂತ್ರಿಯಾಗಿ ಹಾಗೂ ವಿವಿಧ ಸಾಮರ್ಥ್ಯಗಳಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿ, ಅನುಭವಿ ರಾಜಕೀಯ ವ್ಯಕ್ತಿತ್ವ ಹೊಂದಿದ್ದ ಶ್ರೀ ಸಿ. ಕೆ. ಜಾಫರ್ ಷರೀಫ್‍ರವರು ದೈವಾಧೀನರಾದರೆಂದು ತಿಳಿದು ವಿಷಾದವಾಗಿದೆ. ಅವರ ಕುಟುಂಬ ವರ್ಗಕ್ಕೆ ಹಾಗೂ ಕರ್ನಾಟಕ ರಾಜ್ಯ ಮತ್ತು ಇತರ ಕಡೆಗಳಲ್ಲಿನ ಅವರ ಸಹೋದ್ಯೋಗಿಗಳಿಗೆ ನನ್ನ ಸಂತಾಪ" ತಿಳಿಸಿದ್ದಾರೆ.
ಕೇಂದ್ರದ ರೈಲ್ವೆ ಮಂತ್ರಿಯಾಗಿ ಹಾಗೂ ವಿವಿಧ ಸಾಮರ್ಥ್ಯಗಳಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿ, ಅನುಭವಿ ರಾಜಕೀಯ ವ್ಯಕ್ತಿತ್ವ ಹೊಂದಿದ್ದ ಶ್ರೀ ಸಿ. ಕೆ. ಜಾಫರ್ ಷರೀಫ್‍ರವರು ದೈವಾಧೀನರಾದರೆಂದು ತಿಳಿದು ವಿಷಾದವಾಗಿದೆ. ಅವರ ಕುಟುಂಬ ವರ್ಗಕ್ಕೆ ಹಾಗೂ ಕರ್ನಾಟಕ ರಾಜ್ಯ ಮತ್ತು ಇತರ ಕಡೆಗಳಲ್ಲಿನ ಅವರ ಸಹೋದ್ಯೋಗಿಗಳಿಗೆ ನನ್ನ ಸಂತಾಪ.
— President of India (@rashtrapatibhvn) November 25, 2018
ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ " ಶ್ರೀ ಸಿ. ಕೆ. ಜಾಫರ್ ಷರೀಫ್ ಜಿ ಅವರ ನಿಧನದಿಂದ ದುಃಖಿತನಾಗುತ್ತಾನೆ. ಹಿರಿಯ ಸಂಸತ್ ಸದಸ್ಯರಾಗಿ, ಅವರು ಸಂಸತ್ತಿನ ಪ್ರಕ್ರಿಯಗಳನ್ನು ಶ್ರೀಮಂತಗೊಳಿಸಿದ್ದರು. ಅವರು ದೆಹಲಿಯಲ್ಲಿ ಕರ್ನಾಟಕದ ಆಕಾಂಕ್ಷೆಗಳಿಗೆ ಪರಿಣಾಮಕಾರಿಯಾದ ಧ್ವನಿಯಾಗಿದ್ದರು. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಸಾಂತ್ವನ ಎಂದು ಕಂಬನಿ ಮಿಡಿದಿದ್ದಾರೆ.
Saddened by the demise of Shri C. K. Jaffer Sharief Ji. As a veteran Parliamentarian, he enriched parliamentary proceedings. He was an effective voice for Karnataka’s aspirations in Delhi. Condolences to his family and supporters: PM @narendramodi
— PMO India (@PMOIndia) November 25, 2018
A long time colleague, Shri #JafferSharief was a firm believer in the idea of an all encompassing India belonging to everyone. In his demise,the country has lost a patriotic leader who remained committed to inclusive principles. My condolences to his family, friends & supporters. pic.twitter.com/GAjeKLpX8C
— Pranab Mukherjee (@CitiznMukherjee) November 25, 2018
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡ ಜಾಫರ್ ಷರೀಫ್ ಅವರ ನಿಧಾನಕ್ಕೆ ಆಘಾತ ವ್ಯಕ್ತಪಡಿಸಿದ್ದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ." ನನ್ನ ಬಹುದಿನಗಳ ಸಹೋದ್ಯೋಗಿಯಾಗಿದ್ದ ಜಾಫರ್ ಷರೀಫ್ ಭಾರತ ಎಲ್ಲರಿಗೂ ಸೇರಿದ್ದು ಎನ್ನುವ ವಿಚಾರದಲ್ಲಿ ನಂಬಿಕೆಯನ್ನು ಹೊಂದಿದ್ದರು.ಈಗ ಅವರ ಅಗಲಿಕೆಯಿಂದ ದೇಶ ಒಬ್ಬ ಒಳಗೊಳ್ಳುವಿಕೆ ತತ್ವಗಳನ್ನು ಪಾಲಿಸುತ್ತಿದ್ದ ನಾಯಕನ್ನು ಕಳೆದುಕೊಂಡಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.