ಸದನದಲ್ಲಿ ಕೋಲಾಹಲಕ್ಕೆ ಕಾರಣವಾದ ರಾಹುಲ್ ಗಾಂಧಿ 'ರೇಪ್ ಕ್ಯಾಪಿಟಲ್' ಹೇಳಿಕೆ

ಬಿಜೆಪಿ ಸಂಸದರು ಅದರಲ್ಲೂ ವಿಶೇಷವಾಗಿ ಮಹಿಳಾ ಬಿಜೆಪಿ ಸಂಸದರು ರಾಹುಲ್ ಗಾಂಧಿ ಅವರು ತಮ್ಮ ಈ ಹೇಳಿಕೆಗೆ ಕ್ಷಮೆಯಾಚಿಸಬೇಕು ಆಗ್ರಹಿಸಿ, ಸದನದಲ್ಲಿ ಘೋಷಣೆಗಳನ್ನು ಕೂಗಿದ್ದಾರೆ.

Last Updated : Dec 13, 2019, 12:39 PM IST
ಸದನದಲ್ಲಿ ಕೋಲಾಹಲಕ್ಕೆ ಕಾರಣವಾದ ರಾಹುಲ್ ಗಾಂಧಿ 'ರೇಪ್ ಕ್ಯಾಪಿಟಲ್' ಹೇಳಿಕೆ title=

ನವದೆಹಲಿ: "ವಿಶ್ವಾದ್ಯಂತ ಇಂದು ಭಾರತವನ್ನು 'ರೇಪ್ ಕ್ಯಾಪಿಟಲ್' ಎಂದು ಗುರುತಿಸಲಾಗುತ್ತದೆ " ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಹೇಳಿಕೆ ಸದನದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಬಿಜೆಪಿ ಸಂಸದರು ಅದರಲ್ಲೂ ವಿಶೇಷವಾಗಿ ಮಹಿಳಾ ಬಿಜೆಪಿ ಸಂಸದರು ರಾಹುಲ್ ಗಾಂಧಿ ಅವರು ತಮ್ಮ ಈ ಹೇಳಿಕೆಗೆ ಕ್ಷಮೆಯಾಚಿಸಬೇಕು ಆಗ್ರಹಿಸಿ, ಸದನದಲ್ಲಿ ಘೋಷಣೆಗಳನ್ನು ಕೂಗಿದ್ದಾರೆ.

ಈ ಕುರಿತು ಮಾತನಾಡಿರುವ ಬಿಜೆಪಿ ಸಂಸದೆ ಸ್ಮೃತಿ ಇರಾನಿ, ಯಾವುದೇ ಓರ್ವ ಮುಖಂಡ ಸದನದಲ್ಲಿ ಈ ರೀತಿಯ ಹೇಳಿಕೆ ನೀಡುವುದು ಇತಿಹಾಸದಲ್ಲೇ ಇದು ಮೊದಲನೆಯದ್ದಾಗಿದ್ದು, ಇದನ್ನು ನಾವು ರಾಹುಲ್ ಗಾಂಧಿ ದೇಶಕ್ಕೆ ನೀಡುತ್ತಿರುವ ಸಂದೇಶ ಎಂದು ಭಾವಿಸಬಹುದೇ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿರುವ ಸ್ಪೀಕರ್ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಆದರೂ ಸಹ ಸಂಸತ್ತಿನ ಕಾರ್ಯಕಲಾಪವನ್ನು ಮಧ್ಯಾಹ್ನ 12ಗಂಟೆಯವರೆಗೆ ಮುಂದೂಡಲಾಗಿದೆ.

ರಾಜ್ಯಸಭೆಯಲ್ಲಿಯೂ ಕೋಲಾಹಲ
ಅತ್ತ ರಾಜ್ಯಸಭೆಯಲ್ಲಿಯೂ ಕೂಡ ಸಂಸದರು ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿ ರಾಹುಲ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ರಾಜ್ಯಸಭಾ ಅಧ್ಯಕ್ಷರಾದ ಎಂ. ವೆಂಕಯ್ಯ ನಾಯ್ಡು, ಈ ಸದನದ ಸದಸ್ಯರಾಗಿರದ ವ್ಯಕ್ತಿಯ ಹೆಸರನ್ನು ನೀವು ಉಲ್ಲೇಖಿಸುವಂತಿಲ್ಲ ಎಂದು ಸಂಸದರಿಗೆ ಸಮಝಾಯಿಸಿ ನೀಡಿದ್ದಾರೆ. ಅಲ್ಲದೆ ಯಾರಿಗೂ ಸದನದ ಕಾರ್ಯಕಲಾಪದಲ್ಲಿ ಅಡೆತಡೆ ಉಂಟುಮಾಡುವ ಹಕ್ಕು ಇಲ್ಲ ಎಂದಿದ್ದಾರೆ.

ಡಿಸೆಂಬರ್ 7ರಂದು ಮಹಿಳೆಯರ ಸುರಕ್ಷತೆಯ ವಿಷಯದ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿದ್ದ ಸದನದಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಮಾತನಾಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ "ಇಂದು ವಿಶ್ವದಲ್ಲಿ ಭಾರತವನ್ನು ರೇಪ್ ಕ್ಯಾಪಿಟಲ್ ಎಂದು ಗುರುತಿಸಲಾಗುತ್ತದೆ" ಎಂದಿದ್ದರು. "ಭಾರತ ತನ್ನ ಸಹೋದರಿಯರ ಮತ್ತು ಹೆಣ್ಣುಮಕ್ಕಳ ರಕ್ಷಣೆ ಮಾಡುವಲ್ಲಿ ಅಸಮರ್ಥವಾಗಿದೆಯೇ ಎಂದು ಇತರ ದೇಶದ ಜನರು ಪ್ರಶ್ನಿಸುವಂತಾಗಿದೆ" ಎಂದು ರಾಹುಲ್ ಹೇಳಿಕೆ ನೀಡಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿದ್ದ ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ನಡೆದ ಒಂದು ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿಯ ಓರ್ವ ಶಾಸಕ ಶಾಮಿಲಾಗಿದ್ದು, ಈ ಕುರಿತು ಪ್ರಧಾನಿ ಯಾಕೆ ಮೌನವಹಿಸಿದ್ದಾರೆ ಎಂದು ಪ್ರಶ್ನಿಸಿದ್ದರು.

ಝಾರ್ಖಂಡ್ ನ ಚುನಾವಣಾ ಪ್ರಚಾರ ಸಭೆಯೊಂದರಲ್ಲಿಯೂ ಕೂಡ ಮಾತನಾಡಿದ್ದ ರಾಹುಲ್ ಗಾಂಧಿ " ಪ್ರಧಾನಿಗಳು ಮೆಕ್ ಇನ್ ಇಂಡಿಯಾ ಕರೆ ನೀಡಿದ್ದರು. ಆದರೆ, ಇಂದು ಎಲ್ಲಿ ನೋಡಿದರು ಮೆಕ್ ಇನ್ ಇಂಡಿಯಾ ಬದಲು ರೇಪ್ ಇನ್ ಇಂಡಿಯಾ ಕೇಳಿಬರಲಾರಂಭಿಸಿದೆ. ಉತ್ತರ ಪ್ರದೇಶದಲ್ಲಿ ನರೇಂದ್ರ ಮೋದಿ ಅವರ ಓರ್ವ ಶಾಸಕ ರೇಪ್ ಮಾಡುತ್ತಾನೆ. ಆದಾಗ್ಯೂ ಕೂಡ ಪ್ರಧಾನಿ ನರೇಂದ್ರ ಮೋದಿ ಮೌನವಹಿಸುತ್ತಾರೆ" ಎಂದಿದ್ದರು.

Trending News