Rajasthan Election 2023: ಸತತ 31 ಸೋಲು, 78ನೇ ವಯಸ್ಸಿನಲ್ಲಿ 32ನೇ ಬಾರಿ ಚುನಾವಣೆಗೆ ಸ್ಪರ್ಧಿಸಿದ ವೃದ್ಧ!

Rajasthan Election 2023: ಬಿಜೆಪಿಯ ಸುರೇಂದ್ರ ಪಾಲ್ ಸಿಂಗ್ ಮತ್ತು ಕಾಂಗ್ರೆಸ್‌ನ ಗುರ್ಮೀತ್ ಸಿಂಗ್ ಕುನೇರ್ ವಿರುದ್ಧ ರಾಜಸ್ಥಾನದ ಕರಣಪುರ ವಿಧಾನಸಭಾ ಕ್ಷೇತ್ರದಿಂದ ತಿತಾರ್ ಸಿಂಗ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.  

Written by - Puttaraj K Alur | Last Updated : Nov 8, 2023, 03:16 PM IST
  • ಸತತ 31 ಬಾರಿ ಚುನಾವಣೆಗೆ ಸ್ಪರ್ಧಿಸಿ ಸೋತರೂ ಧೈರ್ಯಗೆಡದ ವೃದ್ಧ
  • 78ನೇ ವಯಸ್ಸಿನಲ್ಲಿ 32ನೇ ಬಾರಿ ಚುನಾವಣೆಗೆ ಸ್ಪರ್ಧಿಸಿದ ತಿತಾರ್ ಸಿಂಗ್
  • ಅತಿಹೆಚ್ಚು ಚುನಾವಣೆಗಳಲ್ಲಿ ಸ್ಪರ್ಧಿಸಿ ಗಿನ್ನಿಸ್ ದಾಖಲೆ ಮಾಡುವ ಕನಸು
Rajasthan Election 2023: ಸತತ 31 ಸೋಲು, 78ನೇ ವಯಸ್ಸಿನಲ್ಲಿ 32ನೇ ಬಾರಿ ಚುನಾವಣೆಗೆ ಸ್ಪರ್ಧಿಸಿದ ವೃದ್ಧ! title=
32ನೇ ಬಾರಿ ಚುನಾವಣೆಗೆ ಸ್ಪರ್ಧೆ!

ನವದೆಹಲಿ: ಪಂಚರಾಜ್ಯ ಚುನಾವಣೆ ಆರಂಭವಾಗಿದ್ದು, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಈ ಪಂಚಾರಾಜ್ಯ ಚುನಾವಣೆಯಲ್ಲಿ ಮತದಾರ ಪ್ರಭು ಯಾರಿಗೆ ವಿಜಯಮಾಲೆ ಹಾಕುತ್ತಾನೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಚುನಾವಣೆ ವೇಳೆ ಕೆಲವು ಸ್ಪರ್ಧಿಗಳು ನಾಮಿನೇಷನ್ ಮಾಡಿ ಗಮನ ಸೆಳೆಯುತ್ತಾರೆ.

ಸತತ 31 ಬಾರಿ ಚುನಾವಣೆಗೆ ಸ್ಪರ್ಧಿಸಿ ಸೋತರೂ ಧೈರ್ಯಗೆಡದ ವೃದ್ಧರೊಬ್ಬರು ತಮ್ಮ 78ನೇ ವಯಸ್ಸಿನಲ್ಲಿ 32ನೇ ಬಾರಿ ಚುನಾವಣೆಗೆ ಸ್ಪರ್ಧಿಸಿ ಗಮನ ಸೆಳೆದಿದ್ದಾರೆ. ಹೌದು, ರಾಜಸ್ಥಾನದ 78 ವರ್ಷದ ತಿತಾರ್ ಸಿಂಗ್ ಈ ಬಾರಿಯೂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕಳೆದ 50 ವರ್ಷಗಳಿಂದ ರಾಜಸ್ಥಾನದಲ್ಲಿ ನಡೆದ ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅವರು ಯಾವುದೇ ಚುನಾವಣೆಯಲ್ಲೂ ಗೆಲುವು ಸಾಧಿಸಿಲ್ಲ.

ಇದನ್ನೂ ಓದಿ: 1 ಕೋಟಿ ಫ್ಯಾನ್ 20 ಲಕ್ಷ ಇಂಡಕ್ಷನ್ ಒಲೆಗಳ ವಿತರಣೆ

 1970ರ ದಶಕದಿಂದ ಚುನಾವಣೆಗಳಲ್ಲಿ ಸ್ಪರ್ಧೆ

ತಿತಾರ್ ಸಿಂಗ್ ಇದುವರೆಗೆ ಸುಮಾರು 30ಕ್ಕೂ ಹೆಚ್ಚು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ವಿಶೇಷವೆಂದರೆ ಅವರು ಈ ಎಲ್ಲಾ ಚುನಾವಣೆಗಳಲ್ಲಿಯೂ ಸೋಲು ಕಂಡಿದ್ದಾರೆ. ಆದರೂ ಸಹ ದಲಿತ ಸಮುದಾಯಕ್ಕೆ ಸೇರಿರುವ ತೀತಾರ್ ಸಿಂಗ್ ತಮ್ಮ ಹೋರಾಟದ ಮನೋಭಾವ ಬಿಡುತ್ತಿಲ್ಲ. 1970ರ ದಶಕದಿಂದ ಗ್ರಾಮ ಪಂಚಾಯ್ತಿ ಸೇರಿದಂತೆ ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿರುವ ಅವರು ಈ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸುತ್ತಿದ್ದಾರೆ. ಪ್ರತಿಬಾರಿ ಸೋಲು ಕಂಡರೂ ತಿತಾರ್ ಸಿಂಗ್ ಮನೋಬಲ ಹೆಚ್ಚಿದ್ದು, ಅವರ ಉತ್ಸಾಹದಲ್ಲಿ ಯಾವುದೇ ಇಳಿಕೆಯಾಗಿಲ್ಲ.

31 ಬಾರಿ ಸೋತರೂ ಧೈರ್ಯ ಕಳೆದುಕೊಂಡಿಲ್ಲ

70 ವರ್ಷ ವಯಸ್ಸಿನ ತಿತಾರ್ ಸಿಂಗ್ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (MNREGA) ಯೋಜನೆಯಡಿ ನೋಂದಾಯಿತ ಕಾರ್ಮಿಕರಾಗಿದ್ದಾರೆ. ಇದುವರೆಗೆ 30ಕ್ಕೂ ಹೆಚ್ಚು ಚುನಾವಣೆಗಳಲ್ಲಿ ಸೋತಿರುವ ಅವರು ಇಂದಿಗೂ ಸಹ ತಮ್ಮ ಅದೃಷ್ಟ ಪರೀಕ್ಷೆಗೆ ಉತ್ಸಾಹ ತೋರುತ್ತಿದ್ದಾರೆ.

ಗ್ರಾಮ ಪಂಚಾಯ್ತಿ, ವಿಧಾನಸಭೆ ಮತ್ತು ಲೋಕಸಭೆ ಹೀಗೆ ರಾಜಸ್ಥಾನದ ವಿವಿಧ ಚುನಾವಣೆಗಳಲ್ಲಿ ಅವರು ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಕೆಲವು ಬಾರಿ ಠೇವಣಿಯನ್ನು ಕಳೆದುಕೊಂಡಿದ್ದಾರೆ. ಆದರೂ ಸಹ ಚುನಾವಣೆಗೆ ಸ್ಪರ್ಧಿಸುವ ಅವರ ಉತ್ಸಾಹ ಕಳೆಗುಂದಿಲ್ಲ. ಈ ಬಾರಿ ಅವರು ರಾಜಸ್ಥಾನದ ಕರಣಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ನ ನಾಯಕರನ್ನು ಎದುರಿಸಲು ಸಜ್ಜಾಗಿದ್ದಾರೆ. ಅಂದಹಾಗೆ ತಿತಾರ್ ಸಿಂಗ್ ಯಾವುದೇ ಆಸ್ತಿ ಹೊಂದಿಲ್ಲ. ಇದುವರೆಗೆ ಯಾವ ಪಕ್ಷವೂ ಅವರಿಗೆ ಟಿಕೆಟ್ ನೀಡಿಲ್ಲ. ಹೀಗಾಗಿ ಅವರು ಪ್ರತಿ ಚುನಾವಣೆಯಲ್ಲಿಯೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ: Daily GK Quiz: ಸಾವಿನ ನಂತರ ಮಾನವ ಮೂಳೆಗಳನ್ನು ಎಷ್ಟು ಕಾಲ ಸಂರಕ್ಷಿಸಬಹುದು?

‘ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರವು ನನ್ನ ಕುಟುಂಬದ ಬಗ್ಗೆ ಕಾಳಜಿ ವಹಿಸದ ಕಾರಣ ನಾನು ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದೆ. ನಮಗೆ ಬೇಸಾಯಕ್ಕೆ ಭೂಮಿ ಕೊಟ್ಟಿಲ್ಲ, ಹೀಗಾಗಿ ನಾನು ಕೂಲಿ ಕೆಲಸ ಮಾಡಿಕೊಂಡು ಬದುಕಿದ್ದೇನೆ. ಸ್ಥಳೀಯ ಜನರಿಂದ ದೇಣಿಗೆ ಪಡೆದು ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ’ ಅಂತಾ ತಿತಾರ್ ಸಿಂಗ್ ಹೇಳಿದ್ದಾರೆ.  

ಇನ್ನೂ ತಿತಾರ್ ಸಿಂಗ್ ಅತಿಹೆಚ್ಚು ಚುನಾವಣೆಗಳಲ್ಲಿ ಸ್ಪರ್ಧಿಸಿದ ದಾಖಲೆ ಮಾಡುವ ಮೂಲಕ ಗಿನ್ನಿಸ್ ಪುಸ್ತಕದಲ್ಲಿ ರಾರಾಜಿಸುವ ಕನಸು ಕಾಣುತ್ತಿದ್ದಾರಂತೆ. ಬಿಜೆಪಿಯ ಸುರೇಂದ್ರ ಪಾಲ್ ಸಿಂಗ್ ಮತ್ತು ಕಾಂಗ್ರೆಸ್‌ನ ಗುರ್ಮೀತ್ ಸಿಂಗ್ ಕುನೇರ್ ವಿರುದ್ಧ ತಿತಾರ್ ಸಿಂಗ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News