ಪ್ರಧಾನಿ ಮೋದಿ ಬೆಂಬಲಿಸಿ ಹೇಳಿಕೆ ನೀಡಿದ ರಾಜಸ್ತಾನ್ ರಾಜ್ಯಪಾಲ; ವರದಿ ಕೇಳಿದ ಚುನಾವಣಾ ಆಯೋಗ

ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಮರು ಆಯ್ಕೆಯಾಗಬೇಕೆಂದು ರಾಜಸ್ಥಾನ ಗವರ್ನರ್ ಕಲ್ಯಾಣ್ ಸಿಂಗ್ ಹೇಳಿಕೆ ನೀಡಿದ್ದಕ್ಕೆ ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ವರದಿಯನ್ನು ಕೇಳಿದ್ದಾರೆ.

Last Updated : Mar 30, 2019, 11:01 AM IST
ಪ್ರಧಾನಿ ಮೋದಿ ಬೆಂಬಲಿಸಿ ಹೇಳಿಕೆ ನೀಡಿದ ರಾಜಸ್ತಾನ್ ರಾಜ್ಯಪಾಲ; ವರದಿ ಕೇಳಿದ ಚುನಾವಣಾ ಆಯೋಗ  title=

ನವದೆಹಲಿ: ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಮರು ಆಯ್ಕೆಯಾಗಬೇಕೆಂದು ರಾಜಸ್ಥಾನ ಗವರ್ನರ್ ಕಲ್ಯಾಣ್ ಸಿಂಗ್ ಹೇಳಿಕೆ ನೀಡಿದ್ದಕ್ಕೆ ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ವರದಿಯನ್ನು ಕೇಳಿದ್ದಾರೆ. ಮಾರ್ಚ್ 23 ರಂದು ಅಲಿಗಢ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಲ್ಯಾಣ್ ಸಿಂಗ್, ಎಲ್ಲರೂ ಮೋದಿ ಗೆಲ್ಲಲು ಬಯಸುತ್ತಾರೆ ಮತ್ತು ಅವರ ಗೆಲುವು ದೇಶಕ್ಕೆ ಅವಶ್ಯಕತೆಯಿದೆ ಎಂದು ಹೇಳಿ ಈಗ ವಿವಾದಕ್ಕೆ ಕಾರಣವಾಗಿದ್ದಾರೆ.

"ನಾವೆಲ್ಲಾ ಎಲ್ಲಾ ಬಿಜೆಪಿ ಕಾರ್ಯಕರ್ತರು, ಆದ್ದರಿಂದ ನಾವು ಬಿಜೆಪಿ ಪಕ್ಷ ಗೆಲ್ಲಲು ಬಯಸುತ್ತೇವೆ.ಎಲ್ಲರೂ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಬಯಸುತ್ತಾರೆ.ರಾಷ್ಟ್ರ ಮತ್ತು ಸಮಾಜಕ್ಕೆ ಮೋದಿಯಂತಹ ಪ್ರಧಾನಿ ಅಗತ್ಯ "ಎಂದು ಅವರು ಹೇಳಿದರು.ಈಗ ಈ ಅವರ ಹೇಳಿಕೆಗೆ ಖಂಡಿಸಿರುವ ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇದು ದುರಾದೃಷ್ಟಕರ ಹೇಳಿಕೆ, ರಾಜ್ಯಪಾಲರಾಗಿ ಅವರು ಪಕ್ಷಪಾತ ಮಾಡಬಾರದು ಅದು ಅವರ ಘನತೆಗೆ ತಕ್ಕುದ್ದಲ್ಲವೆಂದು ಅವರು ತಿಳಿಸಿದರು.

2010 ರಲ್ಲಿ ಕೆ.ಜಿ ಬಾಲಕೃಷ್ಣನ್ ನೇತೃತ್ವದ ಸಂವಿಧಾನದ ಪೀಠವು ಕೆಲವು ರಾಜ್ಯಪಾಲರು ರಾಜಕೀಯ ಹಿನ್ನೆಲೆಯಿಂದ ಬಂದಿದ್ದರೂ ಕೂಡ ಅವರ ನಿಷ್ಠೆಯೂ ಸಂವಿಧಾನಕ್ಕೆ ಬದ್ದವಾಗಿರಬೇಕೆ ಹೊರತು ಯಾವುದೇ ರಾಜಕೀಯ ಪಕ್ಷಕ್ಕೆ ಅಲ್ಲ ಎಂದು ಆದೇಶ ನೀಡಿತ್ತು.

Trending News