ರಾಜಸ್ಥಾನ: ಚರಂಡಿ ಬಳಿ 300ಕ್ಕೂ ಅಧಿಕ ಎಟಿಎಂ ಕಾರ್ಡ್ ಪತ್ತೆ!

ಎಲ್ಲಾ ಕಾರ್ಡ್ ಗಳೂ ಲಕೋಟೆಗಳಲ್ಲಿದ್ದು, ಬ್ಯಾಂಕ್ ಅವುಗಳನ್ನು ಗ್ರಾಹಕರ ಮನೆಗಳಿಗೆ ರವಾನಿಸಲು ಸಿದ್ಧಪಡಿಸಿತ್ತು ಎನ್ನಲಾಗಿದೆ. 

Last Updated : Jul 3, 2019, 04:32 PM IST
ರಾಜಸ್ಥಾನ: ಚರಂಡಿ ಬಳಿ 300ಕ್ಕೂ ಅಧಿಕ ಎಟಿಎಂ ಕಾರ್ಡ್ ಪತ್ತೆ! title=

ಬರಾನ್: ರಾಜಸ್ಥಾನದ ಬರಾನ್ ಜಿಲ್ಲೆಯ ಚಬ್ಡಾ ಪಟ್ಟಣದ ಚರಂಡಿ ಬಳಿ ಬಿದ್ದಿದ್ದ 300ಕ್ಕೂ ಅಧಿಕ ಡೆಬಿಟ್ ಕಾರ್ಡ್ ಗಳನ್ನು ಬುಧವಾರ ವಶಪಡಿಸಿಕೊಳ್ಳಲಾಗಿದೆ. 

ಎಲ್ಲಾ ಕಾರ್ಡ್ ಗಳೂ ಲಕೋಟೆಗಳಲ್ಲಿದ್ದು, ಬ್ಯಾಂಕ್ ಅವುಗಳನ್ನು ಗ್ರಾಹಕರ ಮನೆಗಳಿಗೆ ರವಾನಿಸಲು ಸಿದ್ಧಪಡಿಸಿತ್ತು ಎನ್ನಲಾಗಿದೆ. 

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಾರನ್ ಜಿಲ್ಲೆಯ ಬ್ಯಾಂಕ್ ಆಫ್ ಬರೋಡಾದ ಹಿರಿಯ ವ್ಯವಸ್ಥಾಪಕ(ಕಾರ್ಯಾಚರಣೆ) ಧಾರ್ ಶರ್ಮಾ, "ನಾವು ಈ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ತನಿಖೆಯ ಬಳಿಕವಷ್ಟೇ ಏನಾಗಿದೆ ಎಂಬುದನ್ನು ನಾನು ಹೇಳಬಲ್ಲೆ" ಎಂದು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. 

Trending News