Rajasthan: 19 ಶಾಸಕರ ವಿರುದ್ಧ SCನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದ ವಿಧಾನಸಭೆ ಸ್ಪೀಕರ್

ರಾಜಸ್ಥಾನದ ಒಟ್ಟು 19 ಶಾಸಕರನ್ನು ಅನರ್ಹಗೊಳಿಸುವ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ವಿಧಾನಸಭೆಯ ಸ್ಪೀಕರ್ ಸಿ.ಪಿ ಜೋಷಿ  ಅವರು ತಮ್ಮ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. 

Last Updated : Jul 27, 2020, 12:42 PM IST
Rajasthan: 19 ಶಾಸಕರ ವಿರುದ್ಧ SCನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದ ವಿಧಾನಸಭೆ ಸ್ಪೀಕರ್  title=

ನವದೆಹಲಿ: ರಾಜಸ್ಥಾನದ ಒಟ್ಟು 19 ಶಾಸಕರನ್ನು ಅನರ್ಹಗೊಳಿಸುವ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ವಿಧಾನಸಭೆಯ ಸ್ಪೀಕರ್ ಸಿ.ಪಿ ಜೋಷಿ  ಅವರು ತಮ್ಮ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಇಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಈ ಅರ್ಜಿಯ ವಿಚಾರಣೆ ಆರಂಭವಾಗುತ್ತಿದ್ದಂತೆ ಸ್ಪೀಕರ್ ಪರ ವಕೀಲ ಕಪಿಲ್ ಸಿಬ್ಬಲ್ ಅವರು ಅರ್ಜಿ ವಾಪಸ್ ಪಡೆಯುವ ಕುರಿತು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸರ್ವೋಚ್ಛ ನ್ಯಾಯಾಲಯ ಕೂಡ ತಕ್ಷಣ ಅನುಮೋದನೆ ನೀಡಿದೆ.

ನವದೆಹಲಿ:ರಾಜಸ್ಥಾನದ ಒಟ್ಟು 19 ಶಾಸಕರನ್ನು ಅನರ್ಹಗೊಳಿಸುವ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ವಿಧಾನಸಭೆಯ ಸ್ಪೀಕರ್ ಸಿ.ಪಿ ಜೋಷಿ  ಅವರು ತಮ್ಮ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಇಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಈ ಅರ್ಜಿಯ ವಿಚಾರಣೆ ಆರಂಭವಾಗುತ್ತಿದ್ದಂತೆ ಸ್ಪೀಕರ್ ಪರ ವಕೀಲ ಕಪಿಲ್ ಸಿಬ್ಬಲ್ ಅವರು ಅರ್ಜಿ ವಾಪಸ್ ಪಡೆಯುವ ಕುರಿತು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸರ್ವೋಚ್ಛ ನ್ಯಾಯಾಲಯ ಕೂಡ ತಕ್ಷಣ ಅನುಮೋದನೆ ನೀಡಿದೆ.

ಈ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿರುವ ವಕೀಲ ಕಪಿಲ್ ಸಿಬ್ಬಲ್ ರಾಜಸ್ಥಾನ ಹೈಕೋರ್ಟ್ ನಲ್ಲಿ 10 ಶೆಡ್ಯೂಲ್ ಗಳ ಪ್ರಸ್ತಾವನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಆರಂಭಗೊಂಡಿದೆ. ನಾವು ಈ ಮೊದಲು ಯಾವ ಪ್ರಕರಣವನ್ನು ನ್ಯಾಯಾಲಯಕ್ಕೆ ತಂದಿದ್ದೆವೋ ಇದೀಗ ಪ್ರಕರಣ ಅದಕ್ಕಿಂತ ಮುಂದುವರೆದಿದೆ. ಹೇಗಾಗಿ ನಾವು ಯೋಚಿಸಿ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಮುಂದುವರೆಯಲು ಬಯಸುತ್ತೇವೆ ಎಂದು ನ್ಯಾಯಪೀಠಕ್ಕೆ ಅವರು ಹೇಳಿದ್ದಾರೆ. ಇದಕ್ಕೆ ಸುಪ್ರೀಂ ನ್ಯಾಯಾಧೀಸರು ಅರ್ಜಿ ವಾಪಸ್ ಪಡೆಯಲು ಅನುಮತಿ ನೀಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಸಿಬ್ಬಲ್, " ಈ ವಿಷಯದಲ್ಲಿ ಜುಲೈ 24ರಂದು ಹೈಕೋರ್ಟ್ ಆದೇಶವೊಂದನ್ನು ಜಾರಿಗೊಳಿಸಿದ್ದು, ಇದಕ್ಕಾಗಿ ನಾವು ಕಾನೂನಾತ್ಮಕ ವಿಕಲ್ಪಗಳ ಕುರಿತು ಯೋಜನೆ ನಡೆಸಬೇಕಿದೆ" ಎಂದಿದ್ದಾರೆ.

ಭಾನುವಾರ, ಬಹುಜನ ಸಮಾಜ ಪಕ್ಷ (ಬಿಎಸ್ಪಿ) ವಿಧಾನಸಭೆಯಲ್ಲಿ ನಡೆದ ಶಕ್ತಿ ಪ್ರದರ್ಶನದ ವೇಳೆ  ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ಮತ ಚಲಾಯಿಸಲು ತನ್ನ ಶಾಸಕರಿಗೆ ವ್ಹಿಪ್ ಜಾರಿಗೊಳಿಸಿತ್ತು. ಈ ಕುರಿತು ಹೇಳಿಕೆ ನೀಡಿದ್ದ  ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ, 'ಬಿಎಸ್ಪಿ ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷ ಮತ್ತು ದೇಶದಾದ್ಯಂತ, ಸಂವಿಧಾನದ ಹತ್ತನೇ ವೇಳಾಪಟ್ಟಿಯ ನಾಲ್ಕನೇ ಪ್ಯಾರಾ ಅಡಿಯಲ್ಲಿ ಎಲ್ಲಾ ಆರು ಶಾಸಕರಿಗೆ ಪ್ರತ್ಯೇಕ ನೋಟಿಸ್ ನೋಟಿಸ್ ಜಾರಿಗೊಳಿಸಿ ವ್ಹಿಪ್  ನೀಡಲಾಗಿದೆ. ಪಕ್ಷವನ್ನು (ಬಿಎಸ್ಪಿ) ವಿಲೀನಗೊಳಿಸದೆ ರಾಜ್ಯ ಮಟ್ಟದಲ್ಲಿ ವಿಲೀನಗೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದ್ದರು.

ಅಷ್ಟ ಅಲ್ಲ "ಈ ಆರು ಶಾಸಕರು ಒಂದು ವೇಳೆ ಪಕ್ಷದ ವ್ಹಿಪ್ ಉಲ್ಲಂಘಿಸಿ ಪಕ್ಷದ ವಿರುದ್ಧ ಮತದಾನ ನಡೆಸಿದರೆ, ಅವರನ್ನು ವಿಧಾನಸಭೆ ಸದಸ್ಯತ್ವಕ್ಕೆ ಅನರ್ಹರು ಎಂದು ಘೋಷಿಸಲಾಗುವುದು" ಎಂದು ಸತೀಶ್ ಚಂದ್ರ ಮಿಶ್ರಾ ಹೇಳಿದ್ದರು.

Trending News