ನವದೆಹಲಿ: ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಗುರುವಾರ ಪೌರತ್ವ (ತಿದ್ದುಪಡಿ) ಕಾಯ್ದೆ ಅಥವಾ ಸಿಎಎ ವಿರುದ್ಧ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ವ್ಯಕ್ತಿ, ಘಟನೆಗೆ ಕೆಲವೇ ನಿಮಿಷಗಳ ಮೊದಲು ತನ್ನ ಎಲ್ಲಾ ಚಟುವಟಿಕೆಗಳನ್ನು ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಿದ್ದಾರೆ.
ಗುಂಡಿನ ಘಟನೆಯ ನಂತರ ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸರು ಕರೆದೊಯ್ಯುವಾಗ ದಾಳಿಕೋರನು ತನ್ನನ್ನು ‘ರಾಮ್ ಭಕ್ತ ಗೋಪಾಲ್’ ಎಂದು ಗುರುತಿಸಿಕೊಂಡಿದ್ದಾನೆ. ಫೇಸ್‌ಬುಕ್‌ನಲ್ಲಿ ಗೋಪಾಲ್ ಅವರ ಬಯೋದಲ್ಲಿ ಈಗ 'ರಾಮ್ ಭಕ್ತ' ಸಮಯ ಬಂದಾಗ ಎಲ್ಲವೂ ತಿಳಿಯುತ್ತೆ’. ಎಂದು ಬರೆದುಕೊಂಡಿದ್ದಾನೆ. ಅಂತಿಮವಾಗಿ ಜಾಮಿಯಾ ವಿದ್ಯಾರ್ಥಿಗಳಿಗೆ ಗುಂಡು ಹಾರಿಸುವ ಮೊದಲು ಅವರು ಕೆಲವು ಬಾರಿ ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಿದರು. ಅವರ ಕೆಲವು ವೀಡಿಯೊಗಳು ಪ್ರತಿಭಟನೆಯ ನೋಟವನ್ನು ತೋರಿಸಿದರೆ, ಕೆಲವು ಮೊಬೈಲ್‌ನ ಸೆಲ್ಫಿಯ ದೃಶ್ಯಗಳನ್ನು ತೋರಿಸುತ್ತವೆ.
ದೆಹಲಿಯ ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಪ್ರತೀಕಾರದ ಬಗ್ಗೆ ಮಾತನಾಡುವ ಸರಣಿ ಉಲ್ಲೇಖ ಪೋಸ್ಟ್‌ಗಳೂ ಇವೆ.ಇದರಲ್ಲಿ ಶಾಹೀನ್ ಬಾಗ್ ಗೇಮ್ ಓವರ್ ಎನ್ನುವ ಪೋಸ್ಟ್ ಕೂಡ ಒಂದಾಗಿದೆ.ಇನ್ನೊಂದು ಪೋಸ್ಟ್‌ನಲ್ಲಿ, ತನಗೆ ಕರೆ ಮಾಡದಂತೆ ತನ್ನ ಫೇಸ್‌ಬುಕ್ ಸ್ನೇಹಿತರನ್ನು ಒತ್ತಾಯಿಸಿದ್ದಾನೆ. ಎಲ್ಲಾ ಪೋಸ್ಟ್‌ಗಳನ್ನು ಹಿಂದಿಯಲ್ಲಿ ಬರೆಯಲಾಗಿದೆ.
ರಾಮ್ ಭಕ್ತ ಗೋಪಾಲ್ ಎಂದು ಹೇಳಿಕೊಳ್ಳುವ ಈತ ಗುಂಡು ಹಾರಿಸಿದ್ದರಿಂದಾಗಿ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ.ಪೋಲಿಸ್ ಸಮ್ಮುಖದಲ್ಲಿಯೇ ಈ ಘಟನೆ ನಡೆದಿದೆ.