ರಾಮ ಎಂದರೆ ಪ್ರೀತಿ. ಅವನು ಎಂದಿಗೂ ದ್ವೇಷವನ್ನು ವ್ಯಕ್ತಪಡಿಸುವುದಿಲ್ಲ -ರಾಹುಲ್ ಗಾಂಧಿ

ಅಯೋಧ್ಯೆಯಲ್ಲಿ ಪ್ರಾರಂಭವಾದ ದೇವಾಲಯದ ಭೂಮಿ ಪೂಜೆ ಕಾರ್ಯಕ್ರಮದ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಭಗವಾನ್ ರಾಮ್ ನನ್ನು ಶ್ಲಾಘಿಸುತ್ತಾ ಟ್ವೀಟ್ ಮಾಡಿದ್ದಾರೆ, ಅವರು ಪ್ರೀತಿ, ಸಹಾನುಭೂತಿ ಮತ್ತು ನ್ಯಾಯದ ಸಾಕಾರ ಎಂದು ಹೇಳಿದ್ದಾರೆ.

Last Updated : Aug 5, 2020, 06:26 PM IST
ರಾಮ ಎಂದರೆ ಪ್ರೀತಿ. ಅವನು ಎಂದಿಗೂ ದ್ವೇಷವನ್ನು ವ್ಯಕ್ತಪಡಿಸುವುದಿಲ್ಲ -ರಾಹುಲ್ ಗಾಂಧಿ  title=
file photo

ನವದೆಹಲಿ: ಅಯೋಧ್ಯೆಯಲ್ಲಿ ಪ್ರಾರಂಭವಾದ ದೇವಾಲಯದ ಭೂಮಿ ಪೂಜೆ ಕಾರ್ಯಕ್ರಮದ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಭಗವಾನ್ ರಾಮ್ ನನ್ನು ಶ್ಲಾಘಿಸುತ್ತಾ ಟ್ವೀಟ್ ಮಾಡಿದ್ದಾರೆ, ಅವರು ಪ್ರೀತಿ, ಸಹಾನುಭೂತಿ ಮತ್ತು ನ್ಯಾಯದ ಸಾಕಾರ ಎಂದು ಹೇಳಿದ್ದಾರೆ.

ಮರ್ಯಾದಾ ಪುರುಷೋತ್ತಂ ಭಗವಾನ್ ರಾಮನು ಅತ್ಯುತ್ತಮ ಮಾನವ ಗುಣಗಳ ಅಭಿವ್ಯಕ್ತಿ. ಅವನು ನಮ್ಮ ಮನಸ್ಸಿನ ಆಳದಲ್ಲಿ ಇರುವ ಮಾನವೀಯತೆಯನ್ನು ಪ್ರತಿನಿಧಿಸುತ್ತಾನೆ. ರಾಮ ಎಂದರೆ ಪ್ರೀತಿ. ಅವನು ಎಂದಿಗೂ ದ್ವೇಷವನ್ನು ಪ್ರತಿನಿಧಿಸುವುದಿಲ್ಲ.ರಾಮ ಎಂದರೆ  ಸಹಾನುಭೂತಿ "ಅವನು ಎಂದಿಗೂ ಕ್ರೌರ್ಯದಲ್ಲಿ ಪ್ರಕಟವಾಗುವುದಿಲ್ಲ. ರಾಮ ಎಂದರೆ ನ್ಯಾಯ. ಅವನು ಎಂದಿಗೂ ಅನ್ಯಾಯದ ಮೂಲಕ ಪ್ರಕಟವಾಗುವುದಿಲ್ಲ' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇಂದು ಮುಂಚೆಯೇ ನಡೆದ ಸಮಾರಂಭಕ್ಕೆ ಕಾಂಗ್ರೆಸ್ ಅನ್ನು ಆಹ್ವಾನಿಸಲಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಂಡರು,ದೇವಾಲಯದ ಸಾಂಕೇತಿಕ ಮೊದಲ ಕಲ್ಲಿನಂತೆ 40 ಕೆಜಿ ಬೆಳ್ಳಿ ಇಟ್ಟಿಗೆಯನ್ನು ಹಾಕಿದರು.ಈ ಸಂದರ್ಭದಲ್ಲಿ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರಪ್ರದೇಶ ರಾಜ್ಯಪಾಲರು ಮತ್ತು ಇತರ ವಿಐಪಿಗಳು ಸೇರಿದಂತೆ ಸುಮಾರು 150 ಜನರು ಉಪಸ್ಥಿತರಿದ್ದರು.

 

Trending News