ರಾಮಮಂದಿರ ಎನ್ ಡಿ ಎ ಮೈತ್ರಿಕೂಟದ ಅಜೆಂಡಾ ಆಗಬಾರದು- ಚಿರಾಗ್ ಪಾಸ್ವಾನ್

ವಿವಾದಾತ್ಮಕ ವಿಷಯಗಳಾದ ರಾಮ ಮಂದಿರ ಎನ್ ಡಿ ಎ ಮೈತ್ರಿಕೂಟದ ಅಜೆಂಡಾವಾಗಬಾರದು ಎಂದು ಲೋಕಜನಶಕ್ತಿ ಪಕ್ಷದ ಸಂಸದ ಚಿರಾಗ್ ಪಾಸ್ವಾನ್ ಅಭಿಪ್ರಾಯಪಟ್ಟಿದ್ದಾರೆ.

Last Updated : Jan 6, 2019, 02:47 PM IST
ರಾಮಮಂದಿರ ಎನ್ ಡಿ ಎ ಮೈತ್ರಿಕೂಟದ ಅಜೆಂಡಾ ಆಗಬಾರದು- ಚಿರಾಗ್ ಪಾಸ್ವಾನ್  title=

ನವದೆಹಲಿ: ವಿವಾದಾತ್ಮಕ ವಿಷಯಗಳಾದ ರಾಮ ಮಂದಿರ ಎನ್ ಡಿ ಎ ಮೈತ್ರಿಕೂಟದ ಅಜೆಂಡಾವಾಗಬಾರದು ಎಂದು ಲೋಕಜನಶಕ್ತಿ ಪಕ್ಷದ ಸಂಸದ ಚಿರಾಗ್ ಪಾಸ್ವಾನ್ ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರದಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ ಪಾಸ್ವಾನ್ ಅವರು ಚತ್ತೀಸ್ ಗಡ್ ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಅನುಭವಿಸಿರುವುದು ಇದಕ್ಕೆ ಕಾರಣ ಎಂದರು.

"ವೈಯಕ್ತಿಕವಾಗಿ ರಾಮಮಂದಿರ ನಮ್ಮ ಅಜೆಂಡಾ ಆಗಬಾರದು.ಪ್ರದೇಶದ ಅಭಿವೃದ್ದಿ, ರೈತರು, ಉದ್ಯೋಗಕ್ಕೆ ಮಾತ್ರ ಪ್ರಾಮುಖ್ಯತೆಯನ್ನು ನೀಡಬೇಕು.ಇತ್ತೀಚೆಗಷ್ಟೇ ಮೂರು ರಾಜ್ಯಗಳ ಫಲಿತಾಂಶ ಬಂದಾಗಲು ಕೂಡ ನಾನು ಇದನ್ನೇ ಹೇಳಿದ್ದೆ.ವಿವಾದಾತ್ಮಕ ವಿಷಯಗಳಾದ ರಾಮಮಂದಿರ ಎನ್ ಡಿ ಎ ಮೈತ್ರಿಕೂಟಕ್ಕೆ ಹಾನಿ ಮಾಡುತ್ತವೆ" ಎಂದು  ಚಿರಾಗ್ ಪಾಸ್ವಾನ್ ತಿಳಿಸಿದರು.

ಡಿಸೆಂಬರ್ ನಲ್ಲಿ ಚಿರಾಗ್ ಪಾಸ್ವಾನ್ ಅವರು ರಾಹುಲ್ ಗಾಂಧಿಯವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
 

Trending News