ಡಿಸೆಂಬರ್ ನಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ, ಲಕ್ನೋದಲ್ಲಿ ಮಸೀದಿ ನಿರ್ಮಾಣಕ್ಕೆ ಚಾಲನೆ -ವೇದಾಂತಿ

ಅಯೋಧ್ಯೆ ವಿವಾದ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ  ಮಾಜಿ ಬಿಜೆಪಿ ಸಂಸದ ಮತ್ತು ರಾಮ ಜನ್ಮಭೂಮಿ ನ್ಯಾಸ್ ನ ಅಧ್ಯಕ್ಷ  ರಾಮ್ ವಿಲಾಸ್ ವೇದಾಂತಿ ಶನಿವಾರದಂದು ರಾಮಮಂದಿರ ನಿರ್ಮಾಣ ಕಾರ್ಯದ ಬಗ್ಗೆ ಘೋಷಣೆ ಹೊರಡಿಸಿದ್ದಾರೆ.

Last Updated : Nov 3, 2018, 01:59 PM IST
ಡಿಸೆಂಬರ್ ನಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ, ಲಕ್ನೋದಲ್ಲಿ ಮಸೀದಿ ನಿರ್ಮಾಣಕ್ಕೆ ಚಾಲನೆ -ವೇದಾಂತಿ title=

ನವದೆಹಲಿ: ಅಯೋಧ್ಯೆ ವಿವಾದ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ  ಮಾಜಿ ಬಿಜೆಪಿ ಸಂಸದ ಮತ್ತು ರಾಮ ಜನ್ಮಭೂಮಿ ನ್ಯಾಸ್ ನ ಅಧ್ಯಕ್ಷ  ರಾಮ್ ವಿಲಾಸ್ ವೇದಾಂತಿ ಶನಿವಾರದಂದು ರಾಮಮಂದಿರ ನಿರ್ಮಾಣ ಕಾರ್ಯದ ಬಗ್ಗೆ ಘೋಷಣೆ ಹೊರಡಿಸಿದ್ದಾರೆ.

ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ವೇದಾಂತಿ "ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣವು ಡಿಸೆಂಬರ್ನಲ್ಲಿ ಪ್ರಾರಂಭವಾಗಲಿದೆ ಅದೇ ರೀತಿಯಾಗಿ ಲಖನೌದಲ್ಲಿ ಮಸೀದಿಯ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯಲಿದೆ" ಎಂದು ಅವರು ತಿಳಿಸಿದರು.ದೇವಾಲಯದ ಮತ್ತು ಮಸೀದಿ ಯಾವುದೇ ಶಾಸನವಿಲ್ಲದೆ ಮತ್ತು ಪರಸ್ಪರ ಒಪ್ಪಂದದ ಆಧಾರದ ಮೇಲೆ ನಿರ್ಮಿಸಲಾಗುವುದು ಎಂದು ವೇದಾಂತಿ ತಿಳಿಸಿದ್ದಾರೆ.

"ರಾಮಮಂದಿರ ನಿರ್ಮಾಣ ಡಿಸೆಂಬರ್ನಲ್ಲಿ ಆರಂಭವಾಗಲಿದೆ.ಯಾವುದೇ ಶಾಸನವಿಲ್ಲದೆ ಮತ್ತು ಪರಸ್ಪರ ಒಪ್ಪಂದದ ಆಧಾರದ ಮೇಲೆ, ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲಾಗುವುದು ಮತ್ತು ಲಖನೌದಲ್ಲಿ ಮಸೀದಿ ನಿರ್ಮಿಸಲಾಗುವುದು" ಎಂದು ವೇದಾಂತಿ ಹೇಳಿದರು. ಈ ಹಿಂದೆ ವೇದಾಂತಿ ಲೋಕಸಭಾ ಚುನಾವಣೆಗೂ ಮುನ್ನವೇ ರಾಮಮಂದಿರ ನಿರ್ಮಾಣದ ಕಾರ್ಯಕ್ಕೆ ಚಾಲನೆ ದೊರಯಲಿದೆ ಎಂದು ಹೇಳಿದ್ದರು.

"ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ಬಿಜೆಪಿ ನಿರ್ಧರಿಸಿದೆ, 2019 ರ ಚುನಾವಣೆ ನಡೆಯುವ ಮೊದಲು ರಾಮ ಮಂದಿರ ನಿರ್ಮಾಣ ಆರಂಭವಾಗಲಿದೆ" ಎಂದು ವೇದಾಂತಿ ತಿಳಿಸಿದ್ದಾರೆ.ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜುಲೈನಲ್ಲಿ ಹೈದರಾಬಾದ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಾ, 2019 ಲೋಕಸಭೆ ಚುನಾವಣೆಗೆ ಮೊದಲು ರಾಮ ಮಂದಿರವನ್ನು ನಿರ್ಮಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ತದನಂತರ ಆ ಹೇಳಿಕೆಯನ್ನು ನಿರಾಕರಿಸಲಾಗಿತ್ತು.

Trending News