ರಾಮಮಂದಿರ ರಾಜಕೀಯ ವಿಷಯವಲ್ಲ, ಅದೊಂದು ನಂಬಿಕೆ ವಿಷಯ-ಆರ್‌ಎಸ್‌ಎಸ್

ರಾಮ್ ಮಂದಿರವು ರಾಜಕೀಯ ವಿಷಯವಲ್ಲ, ಬದಲಿಗೆ ಇದು ಇಡೀ ಹಿಂದೂ ಸಮಾಜದ ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಆರ್‌ಎಸ್‌ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ ಬುಧವಾರ ಹೇಳಿದ್ದಾರೆ.

Last Updated : Oct 16, 2019, 06:20 PM IST
ರಾಮಮಂದಿರ ರಾಜಕೀಯ ವಿಷಯವಲ್ಲ, ಅದೊಂದು ನಂಬಿಕೆ ವಿಷಯ-ಆರ್‌ಎಸ್‌ಎಸ್ title=
Photo courtesy: ANI

ನವದೆಹಲಿ: ರಾಮ್ ಮಂದಿರವು ರಾಜಕೀಯ ವಿಷಯವಲ್ಲ, ಬದಲಿಗೆ ಇದು ಇಡೀ ಹಿಂದೂ ಸಮಾಜದ ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಆರ್‌ಎಸ್‌ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ ಬುಧವಾರ ಹೇಳಿದ್ದಾರೆ.

ಅಖಿಲ್ ಭಾರತೀಯ ಕಾರ್ಯಕರ್ ಮಂಡಲ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ವೈದ್ಯ ಮಾತನಾಡುತ್ತಿದ್ದರು. ಮೂರು ದಿನಗಳ ಸುದೀರ್ಘ ಕಾರ್ಯಕ್ರಮವು ಬುಧವಾರದಿಂದ ಇಲ್ಲಿ ನಡೆಯುತ್ತಿದೆ ಮತ್ತು ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಉಪ ಮುಖ್ಯಸ್ಥ ಸುರೇಶ್ ಭ್ಯಾಜಿ ಜೋಶಿ ಮತ್ತು ಸಂಘಟನೆಯ ಎಲ್ಲಾ ಪ್ರಾದೇಶಿಕ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

'ರಾಮ್ ಮಂದಿರವು ರಾಜಕೀಯ ವಿಷಯವಲ್ಲ, ಇದು ಹಿಂದೂ ಸಮಾಜದ ನಂಬಿಕೆಯ ವಿಷಯವಾಗಿದೆ. ರಾಮ್ ಮಂದಿರ ಸಮಾಜದ ನಂಬಿಕೆಗೆ ಸಂಬಂಧಿಸಿದೆ.ನ್ಯಾಯಾಲಯದ ವಿಚಾರಣೆ ನಡೆಯುತ್ತಿರುವ ರೀತಿ ಶೀಘ್ರದಲ್ಲೇ ನಿರ್ಧಾರ ಬರಲಿದೆ ಎಂಬ ಭರವಸೆ ನಮಗಿದೆ. ನಾವು ಈ ವಿಷಯದ ಬಗ್ಗೆ ವಿಳಂಬವಾಗಿರುವುದನ್ನು ಈಗಾಗಲೇ ನೋಡಿದ್ದೇವೆ, ಆದರೆ ಈಗ ನ್ಯಾಯಾಲಯವು ಅಂತಿಮ ನಿರ್ಣಯಕ್ಕಾಗಿ ಈ ವಿಷಯವನ್ನು ತೆಗೆದುಕೊಂಡಿದೆ "ಎಂದು ಅವರು ಹೇಳಿದರು.

ಇದೇ ವೇಳೆ 370 ನೇ ವಿಧಿಯನ್ನು ರದ್ದುಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಮನಮೋಹನ್ ವೈದ್ಯ, '370 ನೇ ವಿಧಿ ತಾತ್ಕಾಲಿಕವಾಗಿದೆ. 1964 ರಲ್ಲಿ ಖಾಸಗಿ ಮಸೂದೆಯ ಕುರಿತ ಚರ್ಚೆಯ ಸಂದರ್ಭದಲ್ಲಿ, ಅದನ್ನು ಕೊನೆಗೊಳಿಸಲು ನಾಯಕರು ನಿರ್ಧರಿಸಿದರು ಮತ್ತು 1994 ರಲ್ಲಿ ಮಾಜಿ ಪ್ರಧಾನಿ ನರಸಿಂಹ ರಾವ್ ಸರ್ಕಾರದ ಸಂದರ್ಭದಲ್ಲಿ, ಸರ್ವಾನುಮತದ ನಿರ್ಣಯವಿತ್ತು . ಆದರೆ ಯಾವುದೇ ಸರ್ಕಾರವು ಈ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ, ಆದಾಗ್ಯೂ, ಈ ಸರ್ಕಾರವು 370 ನೇ ವಿಧಿಯನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದರು.

Trending News