ನವದೆಹಲಿ: ಗಣರಾಜ್ಯೋತ್ಸವದ ದಿನವೇ ಟ್ರ್ಯಾಕ್ಟರ್ ಪರೇಡ್ ಹೆಸರಿನಲ್ಲಿ ಕೆಂಪುಕೋಟೆಗೆ ಮುತ್ತಿಗೆ ಹಾಕಿ ಹಿಂಸಾಚಾರ ನಡೆಸಿದ ಬೆನ್ನಲ್ಲೇ ಇದೀಗ ಈ ತಕ್ಷಣದಿಂದಲೇ ರೈತರ ಪ್ರತಿಭಟನೆಯಿಂದ ಹೊರಬರುವುದಾಗಿ ಸಮಿತಿಯೊಂದು ಘೋಷಿಸಿದೆ.
ದೆಹಲಿಯ ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಹಾರಿಸುವ ಧ್ವಜಸ್ಥಂಭದ ಮೇಲೆ ಉದ್ರಿಕ್ತ ರೈತರು(Farmers) ಸಿಖ್ ಧ್ವಜವನ್ನು ಹಾರಿಸಿದ್ದರು. ಇದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ರೈತರ ಪ್ರತಿಭಟನೆ ವಿರುದ್ಧ ಆಕ್ರೋಶದ ಕೂಗು ಜೋರಾಗುತ್ತಿದ್ದು ಇದೀಗ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಪ್ರತಿಭಟನೆಯಿಂದ ಹೊರಬರುವುದಾಗಿ ಘೋಷಿಸಿದೆ.
Tractor Parade ಹಿಂಸಾಚಾರದ ಬಳಿಕ 300 ಟ್ವಿಟರ್ ಅಕೌಂಟ್ ಸಸ್ಪೆಂಡ್, ಟ್ರೆಂಡಿಂಗ್ ನಿಯಮದಲ್ಲೂ ಬದಲಾವಣೆ
ಬೇರೇಯವರ ನಿರ್ದೇಶಕದ ಮೇರೆಗೆ ಪ್ರತಿಭಟನೆ ಮುಂದಕ್ಕೆ ಸಾಗಿಸಲು ಸಾಧ್ಯವಿಲ್ಲ. ಆದ್ದರಿಂದ, ನಾವು ಅವರಿಗೆ ಶುಭ ಹಾರೈಸುತ್ತೇವೆ. ಆದರೆ ಸರ್ದಾರ್ ವಿಎಂ ಸಿಂಗ್ ಮತ್ತು ಅಖಿಲ ಭಾರತ ಕಿಸಾನ್ ಸಂಘರ್ಘ ಸಮನ್ವಯ ಸಮಿತಿಯು ಈ ಪ್ರತಿಭಟನೆಯಿಂದ ಈಗಿನಿಂದಲೇ ಹಿಂದೆ ಸರಿಯುತ್ತಿದೆ ಎಂದರು.
'ಬಟ್ಟೆ ಬಿಚ್ಚದೆ ಎದೆಗೆ ಕೈಹಾಕುವುದು ಲೈಂಗಿಕ ಕಿರುಕುಳ ಅಲ್ಲ' , HC ತೀರ್ಪಿಗೆ ಸುಪ್ರೀಂ ತಡೆ
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಲು ತಮ್ಮ ಪ್ರತಿಭಟನೆಯ ವಿಧಾನವನ್ನು ತೀವ್ರಗೊಳಿಸಲು ರೈತರು ಗಣರಾಜ್ಯೋತ್ಸವ ದಿನ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿದ್ದರು. ಆದರೆ ಅವಧಿಗೆ ಮುನ್ನವೇ ರ್ಯಾಲಿ ಆರಂಭಿಸಿ ಪೊಲೀಸ್ ಬ್ಯಾರಿಕೇಡ್ ಮುಗಿದು ರಾಜಧಾನಿಯೊಳಗೆ ನುಗ್ಗಿದ್ದರಿಂದ ಪೊಲೀಸರು ಜಲಫಿರಂಗಿ, ಲಾಠಿಚಾರ್ಜ್ ನಡೆಸಿ ರಣರಂಗವಾಗಿ ಮಾರ್ಪಟ್ಟಿತು. ಸಾರ್ವಜನಿಕ ಆಸ್ತಿಪಾಸ್ತಿಗಳು ಕೂಡ ಹಾನಿಯಾಗಿವೆ.
Parliament Canteen New Rate List ಬಿಡುಗಡೆ, ಯಾವ ಊಟದ ಪ್ಲೇಟ್ ಬೆಲೆ ಎಷ್ಟು?
ದೆಹಲಿ ಪೊಲೀಸರು ಇದುವರೆಗೆ ಘಟನೆಗೆ ಸಂಬಂಧಪಟ್ಟಂತೆ 22 ಎಫ್‌ಐಆರ್ ಗಳನ್ನು ದಾಖಲಿಸಿದ್ದು 300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.