ನವದೆಹಲಿ: 'ಚರ್ಮದಿಂದ ಚರ್ಮಕ್ಕೆ ಸಂಪರ್ಕ ಆಗದ ಹೊರತು ಅದನ್ನು ಲೈಂಗಿಕ ಕಿರುಕುಳ ಎಂದು ಪರಿಗಣಿಸಲಾಗುವುದಿಲ್ಲ' ಎಂದು ಬಾಂಬೆ ಹೈ ಕೋರ್ಟ್ ನೀಡಿದ್ದ ತೀರ್ಪಿಗೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ಇದಲ್ಲದೆ ಈ ಪ್ರಕರಣದಲ್ಲಿ ಆರೋಪಿಗಳ ಖುಲಾಸೆಗೊಳಿಸಿರುವ ಆದೇಶಕ್ಕೂ ಕೂಡ ಸುಪ್ರೀಂ (Supreme Court) ತಡೆ ನೀಡಿದೆ. ಈ ಕುರಿತು ತೀರ್ಪು ಪ್ರಕಟಿಸಿದ್ದ ಬಾಂಬೆ ಹೈಕೋರ್ಟ್ ನ ನಾಗಪುರ್ ಪೀಠ, "ಚರ್ಮಕ್ಕೆ ಚರ್ಮ ಸ್ಪರ್ಸಿಸದೆಯೇ (Skin To Skin Contact)" ಅಪ್ರಾಪ್ತೆಯ ಸ್ಥನಗಳನ್ನು ಸ್ಪರ್ಶಿಸುವುದು ಲೈಂಗಿಕ ಕಿರುಕುಳದ ವ್ಯಾಖ್ಯೆಯಲ್ಲಿ ಬರುವುದಿಲ್ಲ ಎಂದು ಹೇಳಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿರುವ ಸುಪ್ರೀಂ (Supreme Court) ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಸುಪ್ರೀಂ ಪೀಠ, ಎರಡು ವಾರದೊಳಗೆ ತಮ್ಮ ಪ್ರತಿಕ್ರಿಯೆ ದಾಖಲಿಸುವಂತೆ ಸೂಚಿಸಿದೆ.
A Bench headed by the Chief Justice of India SA Bobde also issues notice to the accused in the case, seeking his response in two weeks. https://t.co/RACAoDiQDZ
— ANI (@ANI) January 27, 2021
ಬಾಂಬೆ ಹೈ ಕೋರ್ಟ್ ತೀರ್ಪು ಏನಾಗಿತ್ತು?
ಯಾವುದೇ ಓರ್ವ ಅಪ್ರಾಪ್ತೆಯನ್ನು ನಿರ್ವಸ್ತ್ರಗೊಳಿಸದೆ ಆಕೆಯ ಸ್ಥನಗಳನ್ನು ಸ್ಪರ್ಶಿಸಲಾಗಿದ್ದರೆ, ಅದನ್ನು ಲೈಂಗಿಕ ಕಿರುಕುಳ ಎಂದು ಭಾವಿಸಲಾಗುವುದಿಲ್ಲ. ಈ ಕುರಿತು ತನ್ನ ತೀರ್ಪೊಂದನ್ನು ನೀಡಿದ್ದ ಬಾಂಬೆ ಹೈ ಕೋರ್ಟ್, ಈ ರೀತಿಯ ಕೃತ್ಯಗಳನ್ನು ಪೋಕ್ಸೋ ಕಾಯಿದೆಯ ಅಡಿ ಲೈಂಗಿಕ ಕಿರುಕುಳ ರೂಪದಲ್ಲಿ ವ್ಯಾಖ್ಯಾನಿಸಲಾಗುವುದಿಲ್ಲ ಎಂದು ಹೇಳಿತ್ತು. ಜನವರಿ 19ಕ್ಕೆ ಈ ಕುರಿತಾದ ಪ್ರಕರಣ ತೀರ್ಪು ಪ್ರಕಟಿಸಿದ್ದ ಬಾಂಬೆ ಹೈ ಕೋರ್ಟ್ ನ ನಾಗಪುರ ಪೀಠದ (Bombay HC Nagpur Bench) ಮುಖ್ಯ ನ್ಯಾಯಾಧೀಷೆ ಪುಷ್ಪಾ ಗನೆಡಿವಾಲಾ, "ಲೈಂಗಿಕ ದಾಳಿ ಕೃತ್ಯ ಎಂದು ಒಪ್ಪಿಕೊಳ್ಳಲು, ಲೈಂಗಿಕ ಭಾವನೆಯಿಂದ ಚರ್ಮಕ್ಕೆ ಚರ್ಮ ಸ್ಪರ್ಶಿಸುವ ಆವಶ್ಯಕತೆ ಇದೆ' ಎಂದಿದ್ದರು.
ಕೇವಲ ಸ್ಪರ್ಶಿಸುವುದನ್ನು ಲೈಂಗಿಕ ಕಿರುಕುಳ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದರು. 12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 39 ವರ್ಷದ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ ಸೆಷನ್ಸ್ ನ್ಯಾಯಾಲಯದ ತೀರ್ಪಿನಲ್ಲಿ ನ್ಯಾಯಮೂರ್ತಿ ಗಣೀಡಿವಾಲಾ ತಿದ್ದುಪಡಿ ಮಾಡಿದ್ದರು.
ಇದನ್ನು ಓದಿ- Gratuityಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದೆ ಈ ಮಹತ್ವದ ತೀರ್ಪು
ಪ್ರಾಸಿಕ್ಯೂಷನ್ ಹಾಗೂ ಅಪ್ರಾಪ್ತ ಬಾಲಕಿ ನ್ಯಾಯಾಲಯದಲ್ಲಿ ನೀಡಿದ ಸಾಕ್ಷ್ಯದ ಪ್ರಕಾರ, 2016 ರ ಡಿಸೆಂಬರ್‌ನಲ್ಲಿ ಆರೋಪಿ ಸತೀಶ್ ಅವರು ಆಹಾರ ಪದಾರ್ಥಗಳನ್ನು ನೀಡುವ ನೆಪದಲ್ಲಿ ಬಾಲಕಿಯನ್ನು ನಾಗ್ಪುರದ ತನ್ನ ಮನೆಗೆ ಕರೆದೊಯ್ದಿದ್ದ. ತನ್ನ ಮನೆಗೆ ಕರೆದೊಯ್ದ ಸತೀಶ್, ಅವಳ ಎದೆಯನ್ನು ಹಿಡಿದು ಅವಳನ್ನು ನಿರ್ವಸ್ತ್ರಳನ್ನಾಗಿಸಲು ಪ್ರಯತ್ನಿಸಿದ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ದಾಖಲಿಸಿದೆ.
ಇದನ್ನು ಓದಿ- ನಿರ್ಭಯಾ ಪ್ರಕರಣ: ನೀವು ಮಾನಸಿಕವಾಗಿ ಸ್ವಸ್ಥರಾಗಿದ್ದೀರಿ ಎಂದು ಹೇಳಿ ವಿನಯ್ ಅರ್ಜಿ ತಿರಸ್ಕರಿಸಿದ SC
ಬಾಲಕಿಯನ್ನು ನಿರ್ವಸ್ತ್ರಳನ್ನಾಗಿ ಮಾಡದೆಯೇ ಆರೋಪಿ ಆಕೆಯ ಎದೆಗೆ ಸ್ಪರ್ಶಿಸಲು ಪ್ರಯತ್ನಿಸಿದ್ದ. ಆದ್ದರಿಂದ ಅಪರಾಧವನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗುವುದಿಲ್ಲ ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ರ ಅಡಿಯಲ್ಲಿ ಮಹಿಳೆಯ ಶೀಲಕ್ಕೆ ಧಕ್ಕೆ ತಂದ ಅಪರಾಧವಾಗಿದೆ. ಸೆಕ್ಷನ್ 354 ರ ಅಡಿಯಲ್ಲಿ ಕನಿಷ್ಠ ಶಿಕ್ಷೆ ಒಂದು ವರ್ಷ ಜೈಲು ಶಿಕ್ಷೆಯಾಗಿದ್ದರೆ, ಪೋಕ್ಸೊ ಕಾಯ್ದೆಯಡಿ ಲೈಂಗಿಕ ದೌರ್ಜನ್ಯಕ್ಕೆ ಕನಿಷ್ಠ ಶಿಕ್ಷೆ ಮೂರು ವರ್ಷ ಜೈಲು ಶಿಕ್ಷೆ. ಪೋಕ್ಸೊ ಕಾಯ್ದೆ ಮತ್ತು IPC ಸೆಕ್ಷನ್ 354 ರ ಅಡಿಯಲ್ಲಿ ಸೆಷನ್ಸ್ ನ್ಯಾಯಾಲಯವು ಆರೋಪಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಈ ಎರಡೂ ಶಿಕ್ಷೆಗಳು ಏಕಕಾಲಕ್ಕೆ ನಡೆಯಬೇಕಿದೆ.
ಇದನ್ನು ಓದಿ- ಶಾಹೀನ್ ಬಾಗ್ ಪ್ರತಿಭಟನೆಯನ್ನು ಪ್ರಶ್ನಿಸಿದ ಸರ್ವೋಚ್ಛ ನ್ಯಾಯಾಲಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.