Ration Card ನಿಯಮಗಳಲ್ಲಿ ಭಾರಿ ಬದಲಾವಣೆ! ನಿಮಗೂ ಗೊತ್ತಿರಲಿ, ಅಡಚಣೆ ತಪ್ಪುತ್ತದೆ

Ration Card Update - ಯಾವುದೇ ಓರ್ವ ಪಡಿತರ ವಿತರಕರ ಬಳಿ ಅವರ ನಿಗದಿತ ಫಲಾನುಭವಿಗಳಿಗಿಂತ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಪಡಿತರ ಪಡೆಯಲು ತಲುಪಿದರೆ, ಅಂತಹ ವಿತರಕರಿಗೆ ಜಿಲ್ಲಾಡಳಿತದ ಆಹಾರ ಸರಬರಾಜು ವಿಭಾಗ ಹೆಚ್ಚಿನ ಪಡಿತರ ನೀಡಲಿದ್ದು, ಇದರಿಂದ ಪ್ರತಿಯೊಬ್ಬರಿಗೂ ಕೂಡ ಸುಲಭವಾಗಿ ಪಡಿತರ ಸಿಗಲಿದೆ.   

Written by - Nitin Tabib | Last Updated : Dec 11, 2021, 02:08 PM IST
  • ಇದೀಗ ಇತರೇ ಡೀಲರ್ಗಳಿಂದಲೂ ಸಹ ನೀವು ಪಡಿತರವನ್ನು ಪಡೆಯಬಹುದು.
  • ಸೆಪ್ಟೆಂಬರ್ ತಿಂಗಳಿನಿಂದಲೇ ರಾಂಚಿ ಜಿಲ್ಲೆಯಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ
  • ಸರ್ಕಾರದ ಹೊಸ ಪ್ಲಾನ್ ಏನು?
Ration Card ನಿಯಮಗಳಲ್ಲಿ ಭಾರಿ ಬದಲಾವಣೆ! ನಿಮಗೂ ಗೊತ್ತಿರಲಿ, ಅಡಚಣೆ ತಪ್ಪುತ್ತದೆ title=
Ration Card Update (File Photo)

Ration Card Latest News: ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. 'ಒಂದು ದೇಶ ಒಂದು ಪಡಿತರ ಚೀಟಿ' ಅಡಿಯಲ್ಲಿ, ಇದೀಗ ಫಲಾನುಭವಿಗಳು  (Ration Beneficiary) ತಮ್ಮ ಆಯ್ಕೆಯ ಪಡಿತರ ವಿತರಕರಿಂದ (Ration Dealer) ಪಡಿತರವನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಅಂದರೆ, ಈಗ ನೀವು ನಿಮ್ಮ ಇಚ್ಛೆಯಂತೆ ಪಡಿತರ ವಿತರಕರನ್ನು ಬದಲಾಯಿಸಬಹುದು.

ಈ ಬಗ್ಗೆ ಸರ್ಕಾರ ಜ್ಞಾಪಕ ಪತ್ರ ನೀಡಿದೆ. ಇದರ ಪ್ರಕಾರ, ಯಾವುದೇ ಓರ್ವ ವ್ಯಕ್ತಿ  ಪಡಿತರ ಚೀಟಿ ಹಿಡಿದುಕೊಂಡು ಯಾವುದೇ ಡೀಲರ್ ಗಳ ಬಳಿ ಹೋದರು ಕೂಡ, ಆತ ಆ ಡೀಲರ್ ಬಳಿ ಲಾಭಾರ್ಥಿ ಆಗಿರಲಿ ಅಥವಾ ಆಗದೆ ಇರಲಿ ಆತ ಖಾಲಿ ಕೈ ಹಿಂದಿರುಗುವುದಿಲ್ಲ. ಯಾವುದೇ ಪರಿಸ್ಥಿತಿಯಲ್ಲೂ ಕೂಡ ಆತನಿಗೆ ರೇಶನ್ ಸಿಗುವ ವ್ಯವಸ್ಥೆ ಇರಲಿದೆ. 

ಫಲಾನುಭವಿಗಳಿಗೆ ಒಳ್ಳೆಯ ಸುದ್ದಿ
ರಾಂಚಿ ಜಿಲ್ಲಾ ಸರಬರಾಜು ಅಧಿಕಾರಿ ಅರವಿಂದ್ ಬಿಲ್ಲುಂಗ್ ಪರವಾಗಿ ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರಿಗೆ ಸೂಚನೆಗಳನ್ನು ನೀಡಲಾಗಿದೆ. ಪಡಿತರವನ್ನು ಪಡೆಯುವ  ಚೀಟಿಧಾರಾಕರ ಒಂದು ಸಮಸ್ಯೆ ಎಂದರೆ,  ಕೆಲವು ಪಡಿತರ ವಿತರಕರು ತುಂಬಾ ನಿರಂಕುಶವಾಗಿ ವರ್ತಿಸುತ್ತಾರೆ. ಆದರೆ ಇದೀಗ ಈ ವ್ಯವಸ್ಥೆಒಂದೊಮ್ಮೆ ಜಾರಿಗೆ ಬಂದ ನಂತರ, ಈಗ ಫಲಾನುಭವಿಗಳು ಅಂತಹ ವಿತರಕರಿಂದ ಪಡಿತರವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ, ಬೇರೆ ವಿತರಕರಿಂದ ಪಡಿತರವನ್ನು ಪಡೆಯುವ ಆಯ್ಕೆ ಹೊಂದಿರಲಿದ್ದಾರೆ.

ಇದನ್ನೂ ಓದಿ-Ration: ಈ ರಾಜ್ಯದವರು 2 ಬಾರಿ ಉಚಿತ ರೇಷನ್ ಪಡೆಯಬಹುದು, ಮಾಹಿತಿ ಇಲ್ಲಿದೆ ನೋಡಿ

ಇಲಾಖೆ ಪಡಿತರ ಪೂರೈಸಲಿದೆ
ಈ ವ್ಯವಸ್ಥೆಯಲ್ಲಿ, ನಿಗದಿತ  ಫಲಾನುಭವಿಗಳಿಗಿಂತ ಹೆಚ್ಚಿನ ಫಲಾನುಭವಿಗಳು ಪಡಿತರ ಪಡೆಯಲು ಯಾವುದೇ ಒಬ್ಬ ಪಡಿತರ ವಿತರಕರನ್ನು ತಲುಪಿದರೆ, ಅಂತಹ ವಿತರಕರಿಗೆ ಜಿಲ್ಲಾಡಳಿತದ ಸರಬರಾಜು ವಿಭಾಗದಿಂದ ಪಡಿತರವನ್ನು ನೀಡಲಿದೆ. ಇದರಿಂದ ಪ್ರತಿಯೊಬ್ಬರೂ ಸುಲಭವಾಗಿ ಪಡಿತರ ಸಿಗಲಿದೆ. ಈ ಆದೇಶ ಹೊರಡಿಸಿದ ನಂತರ ಸಾಕಷ್ಟು ಪಡಿತರ ಹೊಂದಿದವರು ಪಡಿತರ ನೀಡಲು ನಿರಾಕರಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಇದನ್ನೂ ಓದಿ-Ration Card : ಪಡಿತರದಾರರ ಗಮನಕ್ಕೆ : ವಿತರಕರು ಪಡಿತರ ನೀಡಲು ನಿರಾಕರಿಸಿದರೆ, ಈ ಸಂಖ್ಯೆಗೆ ದೂರು ನೀಡಿ

ವಾಸ್ತವದಲ್ಲಿ, ಪಡಿತರ ಅಂಗಡಿಯಲ್ಲಿ ಹಲವು ಬಾರಿ ಹಲವು ರೀತಿಯ ಅವಾಂತರಗಳು ಕಂಡು ಬರುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಫಲಾನುಭವಿಯು ನಿರ್ದಿಷ್ಟ ಪಡಿತರ ಅಂಗಡಿಯಿಂದ ಪಡಿತರವನ್ನು ತೆಗೆದುಕೊಳ್ಳಲು ಬಯಸಿದರೆ, ನಂತರ ಅಧಿಕೃತವಾಗಿ ಅದಕ್ಕೆ ಅನುಮತಿ ನೀಡಲಾಗುವುದು. 

ಇದನ್ನೂ ಓದಿ-Ration Card: ಪಡಿತರ ಚೀಟಿ ಹೊಂದಿದವರಿಗೆ ಉಚಿತ ಸಿಗಲಿದೆ ಪಡಿತರ! ಎಲ್ಲಿ, ಯಾವಾಗ ಮತ್ತು ಹೇಗೆ? ಇಲ್ಲಿದೆ ವಿವರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News