ನವದೆಹಲಿ: Ration Card Latest News: ಪಡಿತರ ಚೀಟಿ ಹೊಂದಿರುವವರಿಗೆ ಮಹತ್ವದ ಸುದ್ದಿಯೊಂದು ಬಂದಿದೆ. ಪಡಿತರ ಚೀಟಿದಾರರಿಗೆ ತಿಂಗಳಿಗೆ 2 ಬಾರಿ ಉಚಿತ ಪಡಿತರ ಸಿಗಲಿದೆ. ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ’(Pradhan Mantri Garib Kalyan Yojana: PMGKY)ಯಡಿ ಉಚಿತ ಪಡಿತರ ವಿತರಣೆ ಅಭಿಯಾನವನ್ನು ಮಾರ್ಚ್ 2022ರವರೆಗೆ ವಿಸ್ತರಿಸಲಾಗಿದೆ. ಇದರ ನಂತರ ಉತ್ತರ ಪ್ರದೇಶದ 15 ಕೋಟಿಗೂ ಹೆಚ್ಚು ಪಡಿತರ ಚೀಟಿದಾರರು ಉಚಿತವಾಗಿ ಡಬಲ್ ಪಡಿತರವನ್ನು ಪಡೆಯಲಿದ್ದಾರೆ.
ಉಚಿತವಾಗಿ ಡಬಲ್ ಪಡಿತರ ಸಿಗಲಿದೆ!
ಕೇಂದ್ರ ಸರ್ಕಾರದ ‘ಗರೀಬ್ ಕಲ್ಯಾಣ್ ಯೋಜನೆ’ಯ ವಿಸ್ತರಣೆಯ ನಂತರ ಈಗ ಉತ್ತರಪ್ರದೇಶದ ಅರ್ಹ ಪಡಿತರ ಚೀಟಿದಾರರು(Ration Card Holders) ಪ್ರತಿ ತಿಂಗಳು 10 ಕೆಜಿ ಪಡಿತರವನ್ನು ಉಚಿತವಾಗಿ(Free Ration)ಪಡೆಯಲು ಸಾಧ್ಯವಾಗುತ್ತದೆ. ವಾಸ್ತವವಾಗಿ ಈಗ ಫಲಾನುಭವಿಗಳು ಗೋಧಿ ಮತ್ತು ಅಕ್ಕಿಯ ಲಾಭವನ್ನು ತಿಂಗಳಿಗೆ 2 ಬಾರಿ ಉಚಿತವಾಗಿ ಪಡೆಯಲು ಸಾಧ್ಯವಾಗಲಿದೆ. ಇದರೊಂದಿಗೆ ಬೇಳೆಕಾಳುಗಳು, ಖಾದ್ಯ ತೈಲ ಮತ್ತು ಉಪ್ಪನ್ನು ಸಹ ಉಚಿತವಾಗಿ ನೀಡಲಾಗುವುದು.
ಇದನ್ನೂ ಓದಿ: Petrol, Diesel Prices Today: ಇಂದಿನ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ ನೋಡಿ
ಬಡವರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ
ಕೊರೊನಾ ಸಾಂಕ್ರಾಮಿಕ ವೈರಸ್(CoronaVirus) ನಂತರ ಸರ್ಕಾರವು ‘ಗರೀಬ್ ಕಲ್ಯಾಣ ಯೋಜನೆ’ಯಡಿ ಆರ್ಥಿಕವಾಗಿ ದುರ್ಬಲವಾಗಿರುವ ಬಡವರು, ಕಾರ್ಮಿಕರನ್ನು ಬೆಂಬಲಿಸುತ್ತಿದೆ. PMGKY ಅವಧಿಯು ನವೆಂಬರ್ನಲ್ಲಿ ಕೊನೆಗೊಳ್ಳಲಿದೆ. ಆದರೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಅದನ್ನು ಹೋಳಿ ಹಬ್ಬದವರೆಗೆ ವಿಸ್ತರಿಸಿ ಉಚಿತ ಪಡಿತರ ವಿತರಣೆಯನ್ನು ಘೋಷಿಸಿದೆ. ಈಗ ಅಂತ್ಯೋದಯ ಪಡಿತರ ಚೀಟಿದಾರರು ಮತ್ತು ಅರ್ಹ ಕುಟುಂಬಗಳಿಗೆ ಡಿಸೆಂಬರ್ನಿಂದ ಡಬಲ್ ಪಡಿತರ ನೀಡಲಾಗುವುದು. ಈ ಅನ್ನ ಯೋಜನೆಯಡಿ ರಾಜ್ಯದಲ್ಲಿ ಸುಮಾರು 13007969 ಘಟಕಗಳು ಮತ್ತು 134177983 ಅರ್ಹ ದೇಶೀಯ ಕಾರ್ಡ್ದಾರರ ಯೂನಿಟ್ಗಳಿವೆ.
ಕಟ್ಟುನಿಟ್ಟು ತೋರಿದ ಕೇಂದ್ರ ಸಚಿವರು!
ಪಡಿತರ ಅಂಗಡಿಗಳ ವ್ಯಾಪ್ತಿಗೆ ಒಳಪಡದ ನಿರ್ಗತಿಕರಿಗೆ ಸರಳ ಮತ್ತು ಪಾರದರ್ಶಕ ಸಮುದಾಯ ಅಡುಗೆ(Community Centers) ಮನೆಗಳನ್ನು ಸ್ಥಾಪಿಸುವ ಯೋಜನೆಯ ರೂಪುರೇಷೆಗಳನ್ನು ಪರಿಶೀಲಿಸಲು ರಾಜ್ಯ ಆಹಾರ ಕಾರ್ಯದರ್ಶಿಗಳ ಗುಂಪನ್ನು ರಚಿಸುವುದಾಗಿ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಘೋಷಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜ್ಯ ಆಹಾರ ಸಚಿವರೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ
ಸುಪ್ರೀಂಕೋರ್ಟ್ ನಿರ್ದೇಶನದ ನಂತರ ಈ ಸಭೆ ಕರೆಯಲಾಗಿದೆ. ರಾಜ್ಯಗಳ ಒಪ್ಪಿಗೆಯ ಆಧಾರದ ಮೇಲೆ ಕೇಂದ್ರವು 3 ವಾರಗಳಲ್ಲಿ ಸಮುದಾಯ ಅಡಿಗೆ ಯೋಜನೆಯ ಮಾದರಿಯನ್ನು ಸಿದ್ಧಪಡಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಯೋಜನೆಯ ವಿಧಾನಗಳ ಕುರಿತು ಉದ್ದೇಶಪೂರ್ವಕವಾಗಿ ರಾಜ್ಯ ಆಹಾರ ಕಾರ್ಯದರ್ಶಿಗಳ ಗುಂಪನ್ನು ಸ್ಥಾಪಿಸುವುದಾಗಿ ಘೋಷಿಸಿದ ಗೋಯಲ್, ‘ಸಮುದಾಯ ಅಡುಗೆ ಯೋಜನೆಯನ್ನು ಸಿದ್ಧಪಡಿಸುವ ಅವಶ್ಯಕತೆಯಿದೆ. ಇದು ಸರಳ, ಪಾರದರ್ಶಕ ಮತ್ತು ಜನರ ಅನುಕೂಲಕ್ಕಾಗಿ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿಸುದ್ದಿ: ಅರ್ಧ ಬೆಲೆಗೆ ರಸಗೊಬ್ಬರ, ಬೀಜಗಳು & ಟ್ರ್ಯಾಕ್ಟರ್ ಖರೀದಿಸಿ, ಹೇಗೆಂದು ತಿಳಿಯಿರಿ
ಗುಣಮಟ್ಟ, ಸ್ವಚ್ಛತೆ, ವಿಶ್ವಾಸಾರ್ಹತೆ ಮತ್ತು ಸೇವಾ ಮನೋಭಾವನೆ ಎಂಬ 4 ಆಧಾರ ಸ್ತಂಭಗಳ ಮೇಲೆ ಸಮುದಾಯ ಅಡುಗೆ ಮನೆ ನಿರ್ಮಿಸುವ ಅಗತ್ಯವಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಯಾರೂ ಹಸಿವಿನಿಂದ ಮಲಗಬಾರದು ಎಂಬ ಗುರಿಯನ್ನು ಸಾಧಿಸಲು ಇದು ನಮಗೆ ಸಹಾಯ ಮಾಡುತ್ತದೆ. ‘ಸಮುದಾಯ ಅಡುಗೆಯನ್ನು ಸಮುದಾಯದಿಂದಲೇ ನಡೆಸಲಾಗುವುದು. ಸಮುದಾಯ ಮತ್ತು ಸಮುದಾಯದ ಕಲ್ಯಾಣಕ್ಕಾಗಿ ಈ ಕ್ರಮವೆಂದು’ ಸಚಿವರು ಸಭೆಯಲ್ಲಿ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.