ಬೆಂಗಳೂರು: ಹಿಂದೂಗಳಿಗೆ ಉಳಿದಿರುವ ಏಕೈಕ ಆಯ್ಕೆ ಹಿಂದೂ ಮಡಿಲನ್ನು ಬಿಟ್ಟು ಹೋದವರೆಲ್ಲರನ್ನು ಮರುಮತಾಂತರಗೊಳಿಸುವುದು. ತಮ್ಮ ಮಾತೃ ಧರ್ಮವನ್ನು ತೊರೆದವರನ್ನು ಮರಳಿ ಕರೆತರಬೇಕು. ಪ್ರತಿಯೊಂದು ದೇವಾಲಯ, ಮಠಗಳು ಮಾಡಬೇಕು ಎಂಬುದು ನನ್ನ ವಿನಂತಿ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Karnataka BJP MP Tejasvi Surya) ಡಿಸೆಂಬರ್ 25 ರಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು, ಹಿಂದೂಗಳ ಮತಾಂತರವನ್ನು ನಿಲ್ಲಿಸುವುದು ಸಾಕಾಗುವುದಿಲ್ಲ. ಆದರೆ ಹಿಂದೂ ಧರ್ಮವನ್ನು ತೊರೆದವರನ್ನು ಮರುಮತಾಂತರ ಮಾಡುವುದು ಆದ್ಯತೆಯಾಗಬೇಕು ಎಂದು ಶನಿವಾರ ಹೇಳಿದ್ದಾರೆ.
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆದ ಶ್ರೀ ಅದಮಾರು ಮಠದ ಪರ್ಯಾಯದ ಸಮಾರೋಪ ಕಾರ್ಯಕ್ರಮದ ವಿಶ್ವಾರ್ಪಣದಲ್ಲಿ ಅವರು ಮಾತನಾಡಿದರು. ಹಿಂದೂ ಧರ್ಮದ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪತ್ತನ್ನು ಉಳಿಸಲು ಮರುಮತಾಂತರ ಪ್ರಕ್ರಿಯೆಯನ್ನು ರೂಪಿಸುವುದು ಅಗತ್ಯವಾಗಿದೆ ಎಂದು ಸಂಸದರು ಹೇಳಿದರು.
#WATCH Only option left for Hindus is to reconvert all those people who've gone out of the Hindu fold...those who've left their mother religion must be brought back.. My request is that every temple,mutt should've yearly targets for this:BJP MP Tejasvi Surya at an event on 25 Dec pic.twitter.com/8drw0lfKAh
— ANI (@ANI) December 27, 2021
ಹಿಂದೂ ಧರ್ಮಕ್ಕೆ ಸೇರಿದ ಜನರು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈ ಜನರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರುವುದು ನಮ್ಮ ಕರ್ತವ್ಯ. ಅಲ್ಲದೆ, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವ ಪಾಕಿಸ್ತಾನದಲ್ಲಿರುವ ಹಿಂದೂಗಳನ್ನು ಮರಳಿ ಮಡಿಲಿಗೆ ತರಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವು ರಾಜಕೀಯ ಶಕ್ತಿಯನ್ನು ನಿರ್ಧರಿಸಿದರೆ, ಜನಸಂಖ್ಯಾಶಾಸ್ತ್ರವು ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಿಂದೂ ಧರ್ಮ ತೊರೆದವರನ್ನು ಮರು ಮತಾಂತರಗೊಳಿಸುವುದೊಂದೇ ಹಿಂದೂಗಳಿಗೆ ಉಳಿದಿರುವ ದಾರಿ ಎಂದರು.
ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಾದ್ಯಂತ ಪ್ರತಿ ದೇವಾಲಯ ಮತ್ತು ಮಠಗಳು ಮರು ಪರಿವರ್ತನೆ ಪ್ರಕ್ರಿಯೆಯನ್ನು ಕೈಗೊಳ್ಳಲು ವಾರ್ಷಿಕ ಗುರಿಗಳನ್ನು ನಿಗದಿಪಡಿಸಬೇಕು. ಕರ್ನಾಟಕದ ಇತಿಹಾಸದ ಪ್ರಕಾರ ಉತ್ತರದಿಂದ ದಕ್ಷಿಣದ ಕಡೆಗೆ ಇಸ್ಲಾಂನ ಆಕ್ರಮಣವನ್ನು ವಿಜಯನಗರ ಸಾಮ್ರಾಜ್ಯವು ಮೊದಲು ಯಶಸ್ವಿಯಾಗಿ ಎದುರಿಸಿತು. ಹಿಂದುತ್ವವಿಲ್ಲದೆ ಹಿಂದೂ ಇರಲು ಸಾಧ್ಯವಿಲ್ಲ ಎಂದರು.
ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮಿ, ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿ, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Happy Birthday Salman Khan:ಸಲ್ಮಾನ್ ಖಾನ್ ಗೆ 56ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.