ವಾಯುಸಾರಿಗೆ, ಮಾಧ್ಯಮ, ವಿಮೆ ವಲಯದಲ್ಲಿ ಎಫ್‌ಡಿಐ ಮಾನದಂಡ ಸಡಿಲಿಕೆ

ಹೆಚ್ಚಿನ ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶದಿಂದ ಮಾಧ್ಯಮ, ವಾಯುಯಾನ, ವಿಮೆ, ಮತ್ತು ಏಕ ಬ್ರಾಂಡ್ ಚಿಲ್ಲರೆ ವ್ಯಾಪಾರ ಕ್ಷೇತ್ರಗಳಲ್ಲಿ ಎಫ್‌ಡಿಐ ಮಾನದಂಡಗಳನ್ನು ಸಡಿಲಿಸುವ ಪ್ರಸ್ತಾಪವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಪ್ರಸ್ತಾಪಿಸಿದ್ದಾರೆ.  

Last Updated : Jul 5, 2019, 04:20 PM IST
ವಾಯುಸಾರಿಗೆ, ಮಾಧ್ಯಮ, ವಿಮೆ ವಲಯದಲ್ಲಿ ಎಫ್‌ಡಿಐ ಮಾನದಂಡ ಸಡಿಲಿಕೆ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಹೆಚ್ಚಿನ ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶದಿಂದ ಮಾಧ್ಯಮ, ವಾಯುಯಾನ, ವಿಮೆ, ಮತ್ತು ಏಕ ಬ್ರಾಂಡ್ ಚಿಲ್ಲರೆ ವ್ಯಾಪಾರ ಕ್ಷೇತ್ರಗಳಲ್ಲಿ ಎಫ್‌ಡಿಐ ಮಾನದಂಡಗಳನ್ನು ಸಡಿಲಿಸುವ ಪ್ರಸ್ತಾಪವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಪ್ರಸ್ತಾಪಿಸಿದ್ದಾರೆ.  

ಹಣಕಾಸು ಸಚಿವರಾಗಿ ಇದೇ ಮೊದಲ ಬಾರಿಗೆ ಬಜೆಟ್ ಭಾಷಣ ಮಾಡಿದ ನಿರ್ಮಲಾ ಸೀತಾರಾಮನ್, 2018-19ರಲ್ಲಿ ಭಾರತದ ಎಫ್‌ಡಿಐ ಒಳಹರಿವು ಶೇಕಡಾ 6 ರಷ್ಟು ಏರಿಕೆಯಾಗಿ 64.37 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ಹೇಳಿದರು. 'ಭಾರತಕ್ಕೆ ಹೆಚ್ಚಿನ ಎಫ್‌ಡಿಐ ಆಕರ್ಷಿಸುವ ನಿಟ್ಟಿನಲ್ಲಿ ವಾಯುಯಾನ, ಮಾಧ್ಯಮ, ಎವಿಜಿಸಿ (ಆನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್) ಮತ್ತು ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ನ್ನು ಮತ್ತಷ್ಟು ತೆರೆಯುವ ಸಲಹೆಗಳನ್ನು ಸರ್ಕಾರ ಮಧ್ಯವರ್ತಿಗಳೊಂದಿಗೆ ಸಮಾಲೋಚಿಸಿ ಪರಿಶೀಲಿಸುತ್ತದೆ ”ಎಂದು ಹೇಳಿದರು.

ಇದಲ್ಲದೆ ವಿಮಾ ಮಧ್ಯವರ್ತಿಗಳಿಗೆ ಶೇಕಡಾ 100 ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಅನುಮತಿ ನೀಡಲಾಗುವುದು ಮತ್ತು ಏಕ ಬ್ರಾಂಡ್ ಚಿಲ್ಲರೆ ಕ್ಷೇತ್ರದಲ್ಲಿ ಎಫ್‌ಡಿಐಗೆ ಸ್ಥಳೀಯ ಮೂಲದ ಮಾನದಂಡಗಳನ್ನು ಸರಾಗಗೊಳಿಸಲಾಗುವುದು ಎಂದು ಸಚಿವರು ಹೇಳಿದರು. ಮೋದಿ ಸರ್ಕಾರದ ಈ ಬಜೆಟ್ ನವ ಭಾರತಕ್ಕಾಗಿ ಸರ್ಕಾರದ ಕಾರ್ಯಕ್ರಮಗಳನ್ನು ಚುರುಕುಗೊಳಿಸಲು ಸಹಾಯಕವಾಗುತ್ತದೆ ಎಂದು ಸಚಿವರು ತಿಳಿಸಿದರು. 

Trending News