REPUBLIC DAY 2020: ಸ್ತಬ್ಧಚಿತ್ರಗಳ ಮೂಲಕ ಅನಾವರಣಗೊಂಡ ದೇಶದ ಸಂಸ್ಕೃತಿ

ಇಂದು ದೇಶಾದ್ಯಂತ 71ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ರಾಷ್ಟ್ರರಾಜಧಾನಿ ದೆಹಲಿಯ ರಾಜ್ ಪಥ್ ಮೇಲೆ ಗಣರಾಜ್ಯೋತ್ಸವ ಸಮಾರಂಭ ಆರಂಭಗೊಂಡಿದೆ. 

Last Updated : Jan 26, 2020, 12:04 PM IST
REPUBLIC DAY 2020: ಸ್ತಬ್ಧಚಿತ್ರಗಳ ಮೂಲಕ ಅನಾವರಣಗೊಂಡ ದೇಶದ ಸಂಸ್ಕೃತಿ title=

ನವದೆಹಲಿ: ಇಂದು ದೇಶಾದ್ಯಂತ 71ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ರಾಷ್ಟ್ರರಾಜಧಾನಿ ದೆಹಲಿಯ ರಾಜ್ ಪಥ್ ಮೇಲೆ ಗಣರಾಜ್ಯೋತ್ಸವ ಸಮಾರಂಭ ಆರಂಭಗೊಂಡಿದೆ. ಮೊದಲು ರಾಷ್ಟ್ರೀಯ ವಾರ್ ಮೆಮೋರಿಯಲ್ ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಡಿಫೆನ್ಸ್ ಸ್ಟಾಫ್ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ ಮೂರು ಸೇನೆಗಳ ಮುಖ್ಯಸ್ಥರು ಪ್ರಧಾನಿ ಮೋದಿಗೆ ಸಾಥ್ ನೀಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ವಾರ್ ಮೆಮೋರಿಯಲ್ ಗೆ ಪುಷ್ಪಚಕ್ರ ಅರ್ಪಿಸಿ ನಮನ ಸಲ್ಲಿಸಿದ್ದಾರೆ. ಪ್ರಧಾನಿ ಬಳಿಕ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿರುವ ಬ್ರೆಜಿಲ್ ರಾಷ್ಟ್ರಪತಿ ಮೆಸಿಯಸ್ ಬೋಲಸೋನಾರೋ ಅವರೊಂದಿಗೆರಾಷ್ಟ್ರಪತಿ ರಾಮನಾಥ್ ಕೊವಿಂದ್  ರಾಜಪಥ್ ತಲುಪಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಹಾಗೂ ಬ್ರೆಜಿಲ್ ರಾಷ್ಟ್ರಪತಿ ಬೋಲಸೋನಾರೋ ಅವರಿಗೆ ಸ್ವಾಗತ ಕೋರಿದ್ದಾರೆ.

ವಿವಿಧ ರಾಜ್ಯಗಳ ಸ್ಥಬ್ಧಚಿತ್ರಗಳಲ್ಲಿ ಎಲ್ಲಕ್ಕಿಂತ ಮೊದಲು ತೆಲಂಗಾಣ, ಚತ್ತೀಸ್ಗಡ್ ಹಾಗೂ ರಾಜಸ್ಥಾನ್ ಸ್ತಬ್ಧಚಿತ್ರಗಳನ್ನು ಮೊದಲು ಪ್ರದರ್ಶಿಸಲಾಗಿದೆ.
 

ಈ ವೇಳೆ ಕ್ಯಾಪ್ಟನ್ ತಾನ್ಯಾ ಶೇರ್ಗಿಲ್ ಅವರು ಸೇನೆಯ ಸಿಗ್ನಲ್ಸ್ ಕಾರ್ಪ್ಸ್ ಮಾರ್ಚ್ ಕಂಟೆಂಜೆಂಟ್ಸ್ ನ ನೇತೃತ್ವ ವಹಿಸಿದ್ದಾರೆ.

ಭಾರತೀಯ ಹೆಲಿಕಾಪ್ಟರ್ ಗಳಾದ ರುದ್ರ ಹಾಗೂ ಧ್ರುವಗಳು ಕೂಡ ತಮ್ಮ ಶಕ್ತಿ ಪ್ರದರ್ಶಿಸಿವೆ.

ಕ್ಯಾಪ್ಟನ್ ಅಭಿನವ್ ಸಾಹೂ ಅವರ ನೇತೃತ್ವದಲ್ಲಿ ಭಾರತೀಯ ಸೇನೆಯ ಬ್ಯಾಟಲ್ ಟ್ಯಾಂಕ್ ಆಗಿರುವ K-9 ವಜ್ರ-T ಪರೇಡ್ ನಲ್ಲಿ ಶಾಮೀಲಾಗಿದೆ.

ವಿವಿಧ ಯುದ್ಧಗಳಲ್ಲಿ ಬಳಕೆಯಾಗುವ ಭಾರತೀಯ ಸೇನೆಯ T-92 ಭೀಷ್ಮ ಟ್ಯಾಂಕ್ ಕೂಡ ಪರೇಡ್ ನಲ್ಲಿ ಶಾಮೀಲಾಗಿದೆ. 86ನೇ ಆರ್ಮ್ದ್ ರೆಜಿಮೆಂಟ್ ನ ಕ್ಯಾ. ಸನ್ನಿ ಚಾಹರ್ ಇದರ ನೇತೃತ್ವ ವಹಿಸಿದ್ದರು.

ಪರಮವೀರ್ ಚಕ್ರ ಹಾಗೂ ಅಶೋಕ್ ಚಕ್ರ ವಿಜೇತ ಜವಾನರು ರಾಷ್ಟ್ರಪತಿ ರಾಮ್ ನಾಥ್ ಕೊವಿಂದ್ ಅವರಿಗೆ ಸಲಾಮಿ ನೀಡುವ ಮೂಲಕ ಪರೇಡ್ ಆರಂಭಗೊಂಡಿದೆ.

ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೊವಿಂದ್ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಬ್ರೆಜಿಲ್ ರಾಷ್ಟ್ರಪತಿ ಮೆಸಿಯಸ್ ಬೋಲಸೋನಾರೋ ಅವರು 21 ತೋಪುಗಳ ಮೂಲಕ ತ್ರಿವರ್ಣ ಧ್ವಜಕ್ಕೆ ನಮನ ಸಲ್ಲಿಸಿದ್ದಾರೆ.

ರಾಷ್ಟ್ರಪತಿಗಳಿಗೂ ಮುನ್ನ ಅವರ ಪತ್ನಿ ರಾಜ್ ಪಥ್ ತಲುಪಿದ್ದಾರೆ
ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿಗಳಿಗೂ ಮುನ್ನ ಅವರ ಪತ್ನಿ ರಾಜ್ ಪಥ್ ಗೆ ತಲುಪಿದ್ದಾರೆ. ಪ್ರಧಾನಿ ಮೋದಿ ಅವರು ರಾಷ್ಟ್ರಪತಿ ಅವರ ಪತ್ನಿಗೆ ಸ್ವಾಗತ ಕೋರಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಸ್ವಾಗತ ಕೋರಿದ್ದಾರೆ. ಬೆಳಗ್ಗೆ ರಾಜ್ ಪಥ್ ತಲುಪಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವಾಗತ ಕೋರಿದ್ದಾರೆ. ಇದಕ್ಕೂ ಮೊದಲು ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಹಾಗೂ ಬ್ರೆಜಿಲ್ ರಾಷ್ಟ್ರಪತಿ ಮೆಸಿಯಸ್ ಬೋಲಸೋನಾರೋ ಅವರಿಗೆ ಗೌರವ ನಮನ ಸಲ್ಲಿಸಲಾಗಿದೆ.

ಬೆಳಗ್ಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಜನವರಿ 26ಕ್ಕೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಪಾತ್ರರಾಗಿದ್ದಾರೆ.

ಇದಕ್ಕೂ ಒಂದು ದಿನ ಮೊದಲು ದೇಶವನ್ನುದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಮಹಾತ್ಮಾ ಗಾಂಧಿ ಅವರ ಸತ್ಯ ಮತ್ತು ಅಹಿಂಸೆಯ ಸಂದೇಶ ಸಾರಿದ್ದಾರೆ. ದೇಶದ ಜನತೆ ಅದರಲ್ಲೂ ವಿಶೇಷವಾಗಿ ಯುವಕರಿಗೆ ಅಹಿಂಸೆಯನ್ನು ಪಾಲಿಸಲು ಕರೆ ನೀಡಿರುವ ಅವರು, ಆರ್ಥಿಕ ಉದ್ದೇಶಗಳನ್ನು ಸಾಧಿಸಲು ಸಂವಿಧಾನಾತ್ಮಕ ಪದ್ಧತಿಗಳನ್ನು ಅನುಕರಿಸಲು ಕೋರಿದ್ದಾರೆ.

Trending News