ಮಹಾರಾಷ್ಟ್ರ: ಸಹೋದರರ ಗೆಲುವಿಗೆ ಬಾಲಿವುಡ್ ನಟ ರಿತೇಶ್ ದೇಶಮುಖ್ ಸಂತಸ

ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಬಾಲಿವುಡ್ ನಟ ರಿತೇಶ್ ದೇಶಮುಖ್ ಸಹೋದರರಾದ ಅಮಿತ್ ದೇಶ್ಮುಖ್ ಮತ್ತು ಧೀರಜ್ ದೇಶ್ಮುಖ್ ಅವರು ಕ್ರಮವಾಗಿ ಲಾತೂರ್ (ನಗರ) ಮತ್ತು ಲಾತೂರ್ (ಗ್ರಾಮೀಣ) ಸ್ಥಾನಗಳಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

Last Updated : Oct 24, 2019, 07:56 PM IST
ಮಹಾರಾಷ್ಟ್ರ: ಸಹೋದರರ ಗೆಲುವಿಗೆ ಬಾಲಿವುಡ್ ನಟ ರಿತೇಶ್ ದೇಶಮುಖ್ ಸಂತಸ  title=
Photo courtesy: Twitter

ನವದೆಹಲಿ: ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಬಾಲಿವುಡ್ ನಟ ರಿತೇಶ್ ದೇಶಮುಖ್ ಸಹೋದರರಾದ ಅಮಿತ್ ದೇಶ್ಮುಖ್ ಮತ್ತು ಧೀರಜ್ ದೇಶ್ಮುಖ್ ಅವರು ಕ್ರಮವಾಗಿ ಲಾತೂರ್ (ನಗರ) ಮತ್ತು ಲಾತೂರ್ (ಗ್ರಾಮೀಣ) ಸ್ಥಾನಗಳಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಈಗ ಈ ಸಂತೋಷವನ್ನು ಟ್ವೀಟರ್ ಮೂಲಕ ಹಂಚಿಕೊಂಡಿರುವ ರೀತೇಶ್ ದೇಶಮುಖ್ 'ಇದನ್ನು ಪಪ್ಪಾಗಾಗಿ ಮಾಡಿದ್ದೇವೆ' ಎಂದು ಸಹೋದರರ ಗೆಲುವಿನ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಅಮಿತ್ ದೇಶಮುಖ್ ಅವರು ಲಾತೂರ್ ನಗರ ಕ್ಷೇತ್ರದಲ್ಲಿ 42 ಸಾವಿರಕ್ಕೂ ಅಧಿಕ ಮತಗಳಿಂದ ವಿಜಯಶಾಲಿಯಾಗಿದ್ದರೆ, ಧೀರಜ್ ದೇಶಮುಖ್ ಅವರು ಲಾತೂರ್ ನಗರ ಕ್ಷೇತ್ರದಿಂದ 1.2 ಲಕ್ಷ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ.

ಚುನಾವಣೆಗೂ ಮುನ್ನ ತಮ್ಮ ಸಹೋದರನ್ನು ಗೆಲ್ಲಿಸಲು ರಿತೇಶ್ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದರು.'ಪ್ರತಿಯೊಬ್ಬರೂ ತಮ್ಮ ಸ್ನೇಹಿತರು ಮತ್ತು ಕುಟುಂಬಗಳೊಂದಿಗೆ ಹೋಗಿ ಮತ ಚಲಾಯಿಸಬೇಕು ಎಂದು ನಾನು ಭಾವಿಸುತ್ತೇನೆ. ನನ್ನ ಇಬ್ಬರು ಸಹೋದರರು ಸ್ಪರ್ಧಿಸುತ್ತಿದ್ದಾರೆ ಮತ್ತು ನಾನು ಇಬ್ಬರಿಗೂ ಪ್ರಚಾರ ಮಾಡಿದ್ದೇನೆ ಆದರೆ ಅವರು ಮಾಡಿದ ಕೆಲಸದ ಆಧಾರದ ಮೇಲೆ ಅವರು ಗೆಲ್ಲುತ್ತಾರೆ ಎಂದು ನಾನು ನಂಬುತ್ತೇನೆ' ಎಂದು ಮನವಿ ಮಾಡಿದ್ದರು.  

Trending News