ಮಕ್ಕಳ ನರ್ಸರಿ ಕವಿತೆ ಮೂಲಕ ಮೋದಿಯನ್ನು ವ್ಯಂಗ್ಯವಾಡಿದ ಆರ್ಜೆಡಿ

 ಲಾಲೂ ಪ್ರಸಾದ ಯಾದವ್  ನೇತೃತ್ವದ ಆರ್ ಜೆಡಿ ಪಕ್ಷ ಈಗ ಪ್ರಧಾನಿ ಮೋದಿಯನ್ನು ಮಕ್ಕಳ ನರ್ಸರಿ ಕವಿತೆ ಮೂಲಕ ವ್ಯಂಗ್ಯವಾಡಿದೆ.

Last Updated : May 8, 2019, 04:52 PM IST
ಮಕ್ಕಳ ನರ್ಸರಿ ಕವಿತೆ ಮೂಲಕ ಮೋದಿಯನ್ನು ವ್ಯಂಗ್ಯವಾಡಿದ ಆರ್ಜೆಡಿ  title=

ನವದೆಹಲಿ:  ಲಾಲೂ ಪ್ರಸಾದ ಯಾದವ್  ನೇತೃತ್ವದ ಆರ್ ಜೆಡಿ ಪಕ್ಷ ಈಗ ಪ್ರಧಾನಿ ಮೋದಿಯನ್ನು ಮಕ್ಕಳ ನರ್ಸರಿ ಕವಿತೆ ಮೂಲಕ ವ್ಯಂಗ್ಯವಾಡಿದೆ.

"ಭವಿಷ್ಯದಲ್ಲಿ, ಮೋದಿ ಭಕ್ತರ ಮಕ್ಕಳು ಈ ಕವಿತೆಯನ್ನು ಕಲಿಯುವರು -  Modi modi
yes papa

Any development?
No papa

Farmer happy?
No papa

Women safe? 
No papa

10 crore job?
No papa

15 lakhs??
No papa

Only jumla?
Ha😂 ha😂 ha 😂😂😂😂😂😂😂😂😂😂" ಎಂದು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಟ್ವೀಟ್ ಮಾಡಿದೆ.

ತೇಜಸ್ವಿ ಯಾದವ್ ದೇಶದಲ್ಲಿ ನಿರುದ್ಯೋಗಕ್ಕೆ  ಪ್ರಮುಖ ಕಾರಣ ಪ್ರಧಾನಿ ಮೋದಿ, ಅವರ ಒಡೆದು ಆಳುವ ನೀತಿಗೆ ಬಿಹಾರದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

"ಕಳೆದ ಐದು ವರ್ಷಗಳಲ್ಲಿ ನೀವು ಏನು ಕೆಲಸ ಮಾಡಿದ್ದೀರಿ? ಬಿಹಾರಕ್ಕೆ ಭರವಸೆ ನೀಡಿದ ವಿಶೇಷ ಪ್ಯಾಕೇಜ್ ಸಿಕ್ಕಿದೆಯೇ? ರೈತರ ಆದಾಯವನ್ನು ದ್ವಿಗುಣಗೊಳಿಸಿದ್ದಿರಾ? ಯುವಜನರಿಗೆ ಉದ್ಯೋಗ ದೊರೆತಿದೆಯೇ? ಹಣದುಬ್ಬರ ದರ ಕಡಿಮೆಯಾಗಿದೆಯೇ? ಇದು ಮೋದಿ ವಿಭಜನೆಯ ರಾಜಕೀಯವಾಗಿದೆ. ಬಿಹಾರದವರು ಅವರಿಗೆ  ಸರಿಯಾದ ಉತ್ತರ ನೀಡುತ್ತಾರೆ ಎಂದು ತೇಜಸ್ವಿ ಯಾದವ್ ಹೇಳಿದ್ದರು.

ಬಿಹಾರದಲ್ಲಿ ಆರ್ಜೆಡಿ ಕಾಂಗ್ರೆಸ್, ರಾಷ್ಟ್ರೀಯ ಲೋಕಸಮಾತಾ ಪಕ್ಷ (ಆರ್ಎಲ್ಎಸ್ಪಿ), ಹಿಂದೂಸ್ಥಾನಿ ಆವಾಮ್ ಮೋರ್ಚಾ (ಎಚ್ಎಎಂ), ಲೋಕ ಜನತಾಂತ್ರಿಕ  ದಳ (ಎಲ್ಜೆಡಿ) ಮತ್ತು ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಮೈತ್ರಿಕೂಟವನ್ನು  ಹೊಂದಿದೆ.40 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಬಿಹಾರದಲ್ಲಿ ಎಲ್ಲಾ ಏಳು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಂತಿಮ ಫಲಿತಾಂಶಗಳು ಮೇ 23 ರಂದು ಘೋಷಿಸಲ್ಪಡುತ್ತವೆ.

 

 

Trending News