ನವದೆಹಲಿ: ಚೀನಾದೊಂದಿಗೆ ಎಲ್ಎಸಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಉಪಗ್ರಹ ಚಿತ್ರಗಳು ಚೀನಾ ದೇಶವು ಭಾರತ ಭೂಪ್ರದೇಶಕ್ಕೆ ನುಸುಳಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ' ಯಾರೂ ಒಳನುಗ್ಗಿಲ್ಲ ಮತ್ತು ನಮ್ಮ ಭೂಪ್ರದೇಶವನ್ನು ಯಾರೂ ಆಕ್ರಮಿಸಿಕೊಂಡಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ, ಆದರೆ ಪಂಗೊಂಗ್ ಸರೋವರದ ಬಳಿಯ ಚೀನಾ ಭಾರತ್ ಮಾತಾ ಪವಿತ್ರ ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂದು ಉಪಗ್ರಹ ಚಿತ್ರಗಳು ಸ್ಪಷ್ಟವಾಗಿ ತೋರಿಸುತ್ತವೆ' ಎಂದು ಕಿಡಿ ಕಾರಿದ್ದಾರೆ.
प्रधानमंत्री ने कहा- ना कोई देश में घुसा, ना ही हमारी ज़मीन पर किसी ने कब्ज़ा किया।
लेकिन सैटेलाइट फ़ोटो साफ़ दिखाती हैं कि चीन ने पैंगोंग झील के पास भारत माता की पावन धरती पर कब्ज़ा कर लिया है।pic.twitter.com/BniFenomBb
— Rahul Gandhi (@RahulGandhi) June 21, 2020
ಇಂದು ಮುಂಚೆಯೇ, ರಾಹುಲ್ ಗಾಂಧಿ ಪಿಎಂ ಮೋದಿಯವರನ್ನು 'ಸುರೇಂದರ್ ಮೋದಿ' ಎಂದು ವ್ಯಂಗ್ಯವಾಡಿ "ಪ್ರಧಾನಿ ಭಾರತದ ಭೂಪ್ರದೇಶವನ್ನು ಚೀನಾದ ಆಕ್ರಮಣಕ್ಕೆ ಒಪ್ಪಿಸಿದ್ದಾರೆ ಎಂದು ಅವರು ಆರೋಪಿಸಿದ್ದರು. ಸರ್ವ ಪಕ್ಷದ ಸಭೆಯಲ್ಲಿ ಚೀನಾದ ಪಡೆಗಳು ಭಾರತದ ಭೂಪ್ರದೇಶಕ್ಕೆ ನುಸುಳಿಲ್ಲ ಎಂದು ಪ್ರಧಾನಿ ಪ್ರತಿಪಾದಿಸಿದ ಒಂದು ದಿನದ ನಂತರ ಅವರ ಈ ಹೇಳಿಕೆ ಬಂದಿದೆ.
ಇದನ್ನೂ ಓದಿ: ಪ್ರಧಾನಿ Narendra Modi ಅವರನ್ನು 'Surender' Modi ಎಂದು ಕರೆದು ಪೇಚಿಗೆ ಸಿಲುಕಿದ Rahul Gandhi
ಜೂನ್ 15 ರಂದು ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಪಿಎಲ್ಎ ಪಡೆಗಳೊಂದಿಗೆ ಅಭೂತಪೂರ್ವ ಹಿಂಸಾತ್ಮಕ ಘರ್ಷಣೆಯಲ್ಲಿ ಅಧಿಕಾರಿ ಸೇರಿದಂತೆ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದರು.