Perarivalan: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿ ಪೆರಾರಿವಾಲನ್‌ ಬಿಡುಗಡೆ

Rajiv Gandhi assassination case: 30 ವರ್ಷಗಳಗಿಂತಲೂ ಹೆಚ್ಚು ಕಾಲ ಜೈಲುವಾಸದ ನಂತರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕನನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದೆ.

Written by - Chetana Devarmani | Last Updated : May 18, 2022, 12:05 PM IST
  • ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿ ಪೆರಾರಿವಾಲನ್‌ ಬಿಡುಗಡೆ
  • 30 ವರ್ಷಗಳಗಿಂತಲೂ ಹೆಚ್ಚು ಕಾಲ ಜೈಲುವಾಸದ ನಂತರ ಬಿಗ್‌ ರಿಲೀಫ್‌
  • ರಾಜೀವ್ ಗಾಂಧಿ ಹಂತಕ ಪೆರಾರಿವಾಲನ್ ಬಿಡುಗಡೆಗೆ ಸುಪ್ರೀಂ ಆದೇಶ
Perarivalan: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿ ಪೆರಾರಿವಾಲನ್‌ ಬಿಡುಗಡೆ  title=
ಪೆರಾರಿವಾಲನ್

Rajiv Gandhi assassination case: ರಾಜೀವ್ ಗಾಂಧಿ ಹಂತಕ ಎಜಿ ಪೆರಾರಿವಾಲನ್ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿ ಪೆರಾರಿವಾಲನ್ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. 30 ವರ್ಷಗಳಗಿಂತಲೂ ಹೆಚ್ಚು ಕಾಲ ಜೈಲಿನಲ್ಲಿದ್ದ ಪೆರಾರಿವಾಲನ್ ತಮಿಳುನಾಡು ಸರ್ಕಾರದ ಮನವಿ ಮೇರೆಗೆ ಬಿಡುಗಡೆಗೊಂಡಿದ್ದರು.

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಜೀವಾವಧಿ ಅಪರಾಧಿಗಳಲ್ಲಿ ಒಬ್ಬರಾದ ಎಜಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಮಾರ್ಚ್ 9 ರಂದು, ಸುಪ್ರೀಂ ಕೋರ್ಟ್ ಪೆರಾರಿವಾಲನ್ ಅವರಿಗೆ ಜಾಮೀನು ನೀಡಿತು. 30 ವರ್ಷಗಳಿಗೂ ಹೆಚ್ಚು ಕಾಲ ಪೆರಾರಿವಾಲನ್ ಸೆರೆವಾಸ ಅನುಭವಿಸಿದರು. 

ಇದನ್ನೂ ಓದಿ:ಮಾಜಿ ಪ್ರಧಾನಿ H.D Devegowdaರಿಗೆ ಹುಟ್ಟುಹಬ್ಬದ ಸಂಭ್ರಮ: ʼಮಣ್ಣಿನ ಮಗʼನಿಗೆ 90ರ ಹರೆಯ...!

1991 ರಲ್ಲಿ ಗಾಂಧಿ ಹತ್ಯೆಯ ಸಮಯದಲ್ಲಿ 19 ವರ್ಷ ವಯಸ್ಸಿನವರಾಗಿದ್ದ ಪೆರಾರಿವಾಲನ್, ಮಾಜಿ ಪ್ರಧಾನಿಯನ್ನು ಹತ್ಯೆ ಮಾಡಲು ಬಾಂಬ್‌ನಲ್ಲಿ ಬಳಸಲಾದ ಎರಡು 9 ವೋಲ್ಟ್ ಬ್ಯಾಟರಿಗಳನ್ನು ಖರೀದಿಸಿದ ಆರೋಪ ಹೊತ್ತಿದ್ದರು. 1998 ರಲ್ಲಿ ಟಾಡಾ ನ್ಯಾಯಾಲಯವು ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಅದಾದ ಮರು ವರ್ಷ ಸುಪ್ರೀಂ ಕೋರ್ಟ್‌ ಶಿಕ್ಷೆಯನ್ನು ಎತ್ತಿಹಿಡಿಯಿತು. ಆದರೆ 2014 ರಲ್ಲಿ ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು. 

ಈ ವರ್ಷದ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಸ್ವಲ್ಪ ಸಮಯದ ನಂತರ ಪೆರಾರಿವಾಲನ್ ಜೈಲಿನಿಂದ ಶೀಘ್ರ ಬಿಡುಗಡೆ ಕೋರಿ ಮನವಿ ಸಲ್ಲಿಸಿದ್ದರು. ಪೆರಾರಿವಾಲನ್ ಅವರ ಮನವಿಯನ್ನು ವಿರೋಧಿಸಿದ ಕೇಂದ್ರ ಸರ್ಕಾರ, ತಮಿಳುನಾಡು ರಾಜ್ಯಪಾಲರು ಈ ವಿಚಾರವನ್ನು ರಾಷ್ಟ್ರಪತಿ ಅವರಿಗೆ ಉಲ್ಲೇಖಿಸಿದ್ದಾರೆ ಎಂದು ಹೇಳಿತ್ತ. ಅಲ್ಲದೇ ಅವರು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದಿತ್ತು. ಪ್ರಕರಣದ ವಿಳಂಬ ಹಾಗೂ  ರಾಜ್ಯಪಾಲರ ಕ್ರಮವನ್ನು ಸುಪ್ರೀಂ ಪ್ರಶ್ನಿಸಿತ್ತು.

ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ್ಯಾಲಿಯ ವೇಳೆ ಮಹಿಳಾ ಆತ್ಮಾಹುತಿ ಬಾಂಬರ್‌ನಿಂದಾಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ನಿಧನರಾಗಿದ್ದರು. ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಪೆರಾರಿವಾಲನ್ ಕೂಡ ಒಬ್ಬರು.

ಇದನ್ನೂ ಓದಿ:PF ಖಾತೆದಾರರೆ ಗಮನಿಸಿ : ನಿಮ್ಮ PF ಖಾತೆ ಸಂಖ್ಯೆಯಲ್ಲಿ ಅಡಗಿದೆ ಅಪರೂಪದ ಮಾಹಿತಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News