ಸಲಿಂಗಕಾಮ ಅಪರಾಧೀಕರಿಸುವ ಕಾಯ್ದೆ ಮರುಪರಿಶೀಲನೆಗೆ ಸುಪ್ರೀಂ ನಿರ್ಧಾರ

ಸಲಿಂಗಕಾಮವನ್ನು ಅಪರಾಧೀಕರಿಸುವ ಕಾಯ್ದೆ 377 ರ ಸಂವಿಧಾನಾತ್ಮಕ ಮಾನ್ಯತೆಯನ್ನು ಮರುಪರಿಗಣಿಸಿ ಪರಿಶೀಲನೆ ನಡೆಸುವುದಾಗಿ ಸುಪ್ರೀಂಕೋರ್ಟ್ ಸೋಮವಾರ ತಿಳಿಸಿದೆ.

Last Updated : Jan 8, 2018, 02:05 PM IST
ಸಲಿಂಗಕಾಮ ಅಪರಾಧೀಕರಿಸುವ ಕಾಯ್ದೆ ಮರುಪರಿಶೀಲನೆಗೆ ಸುಪ್ರೀಂ ನಿರ್ಧಾರ title=

ನವದೆಹಲಿ: ಸಲಿಂಗಕಾಮವನ್ನು ಅಪರಾಧೀಕರಿಸುವ ಕಾಯ್ದೆ 377 ರ ಸಂವಿಧಾನಾತ್ಮಕ ಮಾನ್ಯತೆಯನ್ನು ಮರುಪರಿಗಣಿಸಿ ಪರಿಶೀಲನೆ ನಡೆಸುವುದಾಗಿ ಸುಪ್ರೀಂಕೋರ್ಟ್ ಸೋಮವಾರ ತಿಳಿಸಿದೆ.

ವಯಸ್ಕರಿಬ್ಬರು ಒಪ್ಪಿಗೆಯಿಂದ ನಡೆಸುವ ಸಲಿಂಕ ಲೈಂಗಿಕ ಕ್ರಿಯೆಯನ್ನು ಅಪರಾಧ ಎಂದು ಪರಿಗಣಿಸದಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಲಾರ್ಜ್ ಬೆಂಚ್ ಗೆ ಶಿಪಾರಸು ಮಾಡುವುದಾಗಿ     ಸುಪ್ರೀಂ ಕೋರ್ಟ್ ಹೇಳಿದೆ.

ಅಲ್ಲದೆ, ತಮ್ಮ ನೈಸರ್ಗಿಕ ಲೈಂಗಿಕ ಆದ್ಯತೆಗಳಿಂದಾಗಿ ಪೊಲೀಸರ ಭಯದಿಂದ ತಾವು ಜೀವಿಸುತ್ತಿರುವುದಾಗಿ ಹೇಳಿ ಎಲ್ಜಿಬಿಟಿ ಸಮುದಾಯದ ಐದು ಸದಸ್ಯರು ಸಲ್ಲಿಸಿದ್ದ ರಿಟ್ ಅರ್ಜಿಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.

2013 ರಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ಪ್ರಕಾರ, ಸಲಿಂಗಕಾಮವು ಅವರ ವಯಸ್ಸು ಮತ್ತು ಸಮ್ಮತಿಯಿಲ್ಲದೆ ಅಪರಾಧವೆಂದು ಪರಿಗಣಿಸಲಾಗುವುದು ಎಂದು ಸುಪ್ರೀಂಕೋರ್ಟ್ ನ ಇಬ್ಬರು ನ್ಯಾಯಾಧೀಶರ ಪೀಠ ತೀರ್ಪು ನೀಡಿತ್ತು.

Trending News