ಶಿರೋಮಣಿ ಅಕಾಲಿ ದಳ ಬಿಜೆಪಿಯ ಶಾಶ್ವತ ಮಿತ್ರ ಪಕ್ಷ-ಸುಖಬೀರ್ ಸಿಂಗ್ ಬಾದಲ್

    

Updated: Jun 7, 2018 , 07:46 PM IST
ಶಿರೋಮಣಿ ಅಕಾಲಿ ದಳ ಬಿಜೆಪಿಯ ಶಾಶ್ವತ ಮಿತ್ರ ಪಕ್ಷ-ಸುಖಬೀರ್ ಸಿಂಗ್ ಬಾದಲ್

ನವದೆಹಲಿ: ಶಿರೋಮಣಿ ಅಕಾಲಿದಳ ಬಿಜೆಪಿಯಾ ಶಾಶ್ವತ ಮಿತ್ರ ಪಕ್ಷ ಎಂದು ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ತಿಳಿಸಿದರು.  

ಶಿರೋಮಣಿ ಅಕಾಲಿ ದಳ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವಿನ ಭಿನ್ನಾಭಿಪ್ರಾಯದ ವದಂತಿಗಳ ಕುರಿತಾಗಿ ಮಾತನಾಡಿದ ಬಾದಲ್ ತಮ್ಮ ಪಕ್ಷ ಬಿಜೆಪಿಯ ಶಾಶ್ವತ ಮಿತ್ರ ಎಲ್ಲ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮುಂಬರುವ 2019 ರ ಚುನಾವಣೆಗೆ ಸಿದ್ಧವಾಗಬೇಕೆಂದು ಇತರ ಬಿಜೆಪಿ ಮೈತ್ರಿಕೂಟಗಳಿಗೆ ಅವರು ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಾದಲ್ "ನಮ್ಮ ಎಲ್ಲಾ ಮೈತ್ರಿಕೂಟಗಳಿಗೆ ನಾನು ಮನವಿ ಮಾಡಲು ಬಯಸುತ್ತೇನೆ, ಇದು ಹೋರಾಡುವ ಸಮಯ, ಯುದ್ಧಕ್ಕೆ ಇನ್ನು ಆರು ತಿಂಗಳ ಇದೆ ಈ ಸಂದರ್ಭದಲ್ಲಿ ನಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ಬಿಟ್ಟು ನಾವು ಒಟ್ಟಾಗಿ ಹೋಗಬೇಕು"ಎಂದು ತಿಳಿಸಿದರು.