ಪ್ರಿಯಾಂಕಾ ,ರಾಹುಲ್ ಗಾಂಧಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿವಸೇನಾ

 ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಮೈತ್ರಿಪಕ್ಷ ಶಿವಸೇನಾ ಹೇಳಿದೆ. ಇದೇ ವೇಳೆ ಅದು ಕಾಂಗ್ರೆಸ್ ಪಕ್ಷದ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದೆ. 

Updated: May 21, 2019 , 05:31 PM IST
ಪ್ರಿಯಾಂಕಾ ,ರಾಹುಲ್ ಗಾಂಧಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿವಸೇನಾ

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಮೈತ್ರಿಪಕ್ಷ ಶಿವಸೇನಾ ಹೇಳಿದೆ. ಇದೇ ವೇಳೆ ಅದು ಕಾಂಗ್ರೆಸ್ ಪಕ್ಷದ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದೆ. 

ಶಿವಸೇನಾ ಪಕ್ಷದ ಮುಖವಾಣಿ ಸಾಮ್ನಾ ತನ್ನ ಸಂಪಾದಕೀಯದಲ್ಲಿ ರಾಹುಲ್ ಹಾಗೂ ಪ್ರಿಯಾಂಕಾ ಬಗ್ಗೆ ಮೆಚ್ಚುಗೆ ಸೂಚಿಸುತ್ತಾ "ಅವರು ತಂಬಾ ಪರಿಶ್ರಮವಹಿಸಿದ್ದಾರೆ.ಕಾಂಗ್ರೆಸ್ ಈ ಬಾರಿ ಯಶಸ್ವಿ ಪ್ರತಿಪಕ್ಷವಾಗಲಿದೆ" ಎಂದು ಹೇಳಿದೆ."2014 ರಲ್ಲಿ ರಾಹುಲ್ ಗಾಂಧಿ ಪ್ರತಿಪಕ್ಷದ ಸ್ಥಾನವನ್ನು ಪಡೆಯಲು ಸಾಕಷ್ಟು ಸ್ಥಾನಗಳನ್ನು ಹೊಂದಿರಲಿಲ್ಲ.ಆದರೆ ಈ ಬಾರಿ ಕಾಂಗ್ರೆಸ್ ಪಕ್ಷವು ಈ ಬಾರಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನು ಹೊಂದಿರಲಿದೆ. ಇದು ನಿಜಕ್ಕೂ ರಾಹುಲ್ ಗಾಂಧಿಯವರ ಸಾಧನೆ "ಎಂದು ತಿಳಿಸಿದೆ. 

ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವುದಕ್ಕೆ ಯಾವುದೇ ಚುನಾವಣಾ ತಜ್ಞರ ಅಗತ್ಯವಿಲ್ಲ. ತಳಮಟ್ಟದಲ್ಲಿ ಜನರು ಮೋದಿಯನ್ನು ಮತ್ತೆ ಅಧಿಕಾರಕ್ಕೆ ತರಲು ಮನಸ್ಸು ಮಾಡಿದ್ದಾರೆ.ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಅಧಿಕಾರಕ್ಕೆ ಬರುವಲ್ಲಿ ವಿಫಲವಾಗಲಿವೆ. ಆದರೆ ಮೇ 23 ರ ಫಲಿತಾಂಶದ ವರೆಗೆ ಕಾಯುವುದು ಒಳ್ಳೆಯದು ಎಂದು ಶಿವಸೇನಾ ಹೇಳಿದೆ.

ಮಹಾರಾಷ್ಟ್ರದಲ್ಲಿ ಶಿವಸೇನಾ ಹಾಗೂ ಬಿಜೆಪಿ ಐತಿಹಾಸಿಕ ಗೆಲುವನ್ನು ಸಾಧಿಸಲಿದೆ ಎಂದು ಸಾಮ್ನಾ ಸಂಪಾದಕೀಯ ತಿಳಿಸಿದೆ.