ನವದೆಹಲಿ: ಶಿವಸೇನೆ ಶುಕ್ರವಾರ 50-50 ಹಂಚಿಕೆ ಸೂತ್ರದ ಬಗ್ಗೆ ಭಾರತೀಯ ಜನತಾ ಪಕ್ಷದಿಂದ ಲಿಖಿತ ಆಶ್ವಾಸನೆ ಕೋರಿದೆ. ಇದರ ಅನ್ವಯ ಮಹಾರಾಷ್ಟ್ರದಲ್ಲಿ 2.5 ವರ್ಷಗಳ ಕಾಲ ಶಿವಸೇನೆ ಸಿಎಂ ಇರಬೇಕು ಎಂದು ಹೇಳಿದೆ.
ಶಿವಸೇನೆ ಈ ಭರವಸೆಯನ್ನು ಗೃಹ ಸಚಿವ ಅಮಿತ್ ಶಾ ಅಥವಾ ಹಾಲಿ ಸಿಎಂ ದೇವೇಂದ್ರ ಫಡ್ನವೀಸ್ ಅವರಿಂದ ಲಿಖಿತವಾಗಿ ಬಯಸಿದೆ, ಅದರ ನಂತರವೇ ಸರ್ಕಾರ ರಚಿಸುವಲ್ಲಿ ಪಕ್ಷವು ಬಿಜೆಪಿಗೆ ಬೆಂಬಲ ನೀಡುತ್ತದೆ ಎಂದು ಶಿವಸೇನಾ ತಿಳಿಸಿದೆ.
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶನಿವಾರ ಪಕ್ಷದ ಸಭೆ ನಡೆಸಿ ರಾಜ್ಯದಲ್ಲಿ ಸರ್ಕಾರ ರಚನೆಯ ಬಗ್ಗೆ ತೀರ್ಮಾನ ಕೈಗೊಂಡಿದ್ದರು.'ನಮ್ಮ ಸಭೆಯಲ್ಲಿ, ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಅಮಿತ್ ಷಾ 50:50 ಸೂತ್ರದ ಭರವಸೆ ನೀಡಿದ್ದರು, ಅದೇ ರೀತಿ ಎರಡೂ ಮಿತ್ರ ಪಕ್ಷಗಳು 2.5-2.5 ವರ್ಷಗಳ ಕಾಲ ಸರ್ಕಾರವನ್ನು ನಡೆಸಲು ಅವಕಾಶವನ್ನು ಪಡೆಯಬೇಕು. ಆದ್ದರಿಂದ ಶಿವಸೇನೆಗೂ ಸಿಎಂ ಇರಬೇಕು. ಉದ್ಧವ್ ಠಾಕ್ರೆ ಈ ಭರವಸೆಯನ್ನು ಬಿಜೆಪಿಯಿಂದ ಲಿಖಿತವಾಗಿ ಪಡೆಯಲಿ 'ಎಂದು ಓವಲಾ-ಮಜಿವಾಡಾದ ಶಾಸಕ ಶಿವಸೇನೆ ನಾಯಕ ಪ್ರತಾಪ್ ಸರ್ನಾಯಕ್ ಹೇಳಿದ್ದಾರೆ.
ಉಭಯ ಪಕ್ಷಗಳ ನಡುವಿನ ಸ್ಥಾನ ಹಂಚಿಕೆ ಒಪ್ಪಂದವು ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯನ್ನು ವಿಳಂಬಗೊಳಿಸಿದೆ.ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಒಟ್ಟಾಗಿ ಸ್ಪರ್ಧಿಸಿದವು. ಬಿಜೆಪಿ ಪಕ್ಷ 105 ಸ್ಥಾನಗಳನ್ನು ಗೆದ್ದರೆ, ಶಿವಸೇನೆ 56 ಸ್ಥಾನಗಳಲ್ಲಿ ಶಿವಸೇನೆ ಗೆಲುವು ದಾಖಲಿಸಿದೆ. ಒಂದು ವೇಳೆ ಶಿವಸೇನೆ ಬೇಡಿಕೆಯನ್ನು ಬಿಜೆಪಿ ಪರಿಗಣಿಸಿದ್ದಲ್ಲೇ ಆದಲ್ಲಿ ಆಗ ಆದಿತ್ಯ ಠಾಕ್ರೆ ಅವರು ಮಹಾರಾಷ್ಟ್ರದ ಅತ್ಯಂತ ಕಿರಿಯ ಸಿಎಂ ಆಗಲಿದ್ದಾರೆ.
'ಆದಿತ್ಯರನ್ನು ನಮ್ಮ ಸಿಎಂ ಆಗಿ ನಾವು ಬಯಸುತ್ತೇವೆ. ಇದು ನಮ್ಮ ಮೊದಲ ಮತ್ತು ಪ್ರಮುಖ ಬೇಡಿಕೆಯಾಗಿದೆ. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಬಿಜೆಪಿ ಮತ್ತು ನಮ್ಮ ಪಕ್ಷ ಎರಡೂ 50-50 ಅಧಿಕಾರ ಹಂಚಿಕೆ ಸೂತ್ರವನ್ನು ಒಪ್ಪಿಕೊಂಡಿವೆ, ಅದನ್ನು ನಾವು ಪತ್ರದ ಮೂಲಕ ಜಾರಿಗೆ ತರಲು ಬಯಸುತ್ತೇವೆ" ಎಂದು ಶಿವಸೇನೆ ಶಾಸಕ ಪ್ರಕಾಶ್ ಸರ್ವೇ ಈ ಹಿಂದೆ ಹೇಳಿದ್ದರು.ಗುರುವಾರ ಮತ ಎಣಿಕೆ ನಡೆಯುತ್ತಿರುವಾಗ, ಉದ್ಧವ್ ಅವರು "ಮಹಾರಾಷ್ಟ್ರದಲ್ಲಿ 50-50 ಸೂತ್ರವನ್ನು ಜಾರಿಗೆ ತರಲು ಸಮಯ ಬಂದಿದೆ' ಎಂದು ಸ್ಪಷ್ಟವಾಗಿ ಹೇಳಿದ್ದರು.