ನವದೆಹಲಿ: ಲಾಕ್‌ಡೌನ್ (Lockdown) ತೆರೆಯುವ ಪ್ರಕ್ರಿಯೆಯ ನಡುವೆಯೇ ದೇಶದಲ್ಲಿ ಸಣ್ಣ ಕಾರುಗಳ ಖರೀದಿಯಲ್ಲಿ ಭಾರಿ ಏರಿಕೆಯಾಗಿದೆ. ಕರೋನಾ ವೈರಸ್ ಸಾಂಕ್ರಾಮಿಕ ರೋಗ ಮತ್ತು ಸಾರ್ವಜನಿಕ ಸಾರಿಗೆ ಬಂದ್ ಭೀತಿಯಿಂದ ಕಾರು ಮಾರಾಟ ಹೆಚ್ಚಾಗಿದೆ. ಜುಲೈ ತಿಂಗಳು ಕಾರು ಕಂಪನಿಗಳಿಗೆ ಭಾರಿ ಪರಿಹಾರವನ್ನೇ ನೀಡಿದೆ. ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಕಾರುಗಳ ಖರೀದಿಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಜುಲೈನಲ್ಲಿ, ಈ ವಿಭಾಗ ಶೇ.40% ಹೆಚ್ಚಿನ ಖರೀದಿಯನ್ನು ಕಂಡಿದೆ. ಈ ಜುಲೈನಲ್ಲಿ 20,865 ಜನರು ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಕಾರುಗಳನ್ನು ಖರೀದಿಸಿದ್ದಾರೆ. ಕಳೆದ ವರ್ಷ ಜುಲೈನಲ್ಲಿ 14,910 ಹ್ಯಾಚ್‌ಬ್ಯಾಕ್ ಕಾರುಗಳು ಮಾರಾಟವಾಗಿದ್ದವು. ಅಂದರೆ, ಈ ಜುಲೈ ಎಂಟ್ರಿ ಹ್ಯಾಚ್‌ಬ್ಯಾಕ್ ವಿಭಾಗವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 12 ರಷ್ಟುಹೆಚ್ಚು ಮಾರಾಟವಾಗಿವೆ. ಇದರಲ್ಲಿ ಕೂಡ ಮಾರುತಿ ಸುಜುಕಿಯ ಆಲ್ಟೊ ಮೇಲುಗೈ ಸಾಧಿಸುತ್ತಿದೆ, ಆಲ್ಟೊ ಮತ್ತೊಮ್ಮೆ ದೇಶದಲ್ಲಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾದರೆ ಬನ್ನಿ ಜುಲೈ ನಲ್ಲಿ ಅತಿ ಹೆಚ್ಚು ಮಾರಾಟವಾದ ಇತರೆ ಕಾರುಗಳನ್ನೊಮ್ಮೆ ನೋಡೋಣ.
Maruti Suzuki Alto
ಮಾರುತಿಯ ಆಲ್ಟೊ ಜುಲೈನಲ್ಲಿ ದೇಶದ ಅತಿ ಹೆಚ್ಚು ಮಾರಾಟವಾದ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಕಾರ್ ಆಗಿದೆ. ಜುಲೈ 2020 ರಲ್ಲಿ ಮಾರುತಿ ಆಲ್ಟೊ 13,654 ಯುನಿಟ್ ಮಾರಾಟವಾಗಿವೆ . ಕಳೆದ ವರ್ಷ ಜುಲೈನಲ್ಲಿ 11,600 ಯುನಿಟ್ ಮಾರಾಟವಾಗಿದ್ದವು. ಅಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಜುಲೈನಲ್ಲಿ ಆಲ್ಟೊ ಕಾರ್ ನ ಮಾರಾಟ ಶೇ.18ರಷ್ಟು ಹೆಚ್ಚಾಗಿದೆ. ಜೂನ್‌ನಲ್ಲಿ ಸಹ, ಮಾರುತಿ ಆಲ್ಟೊ ದೇಶದಲ್ಲಿ ಹೆಚ್ಚು ಮಾರಾಟವಾದ ಕಾರ್ ಆಗಿ ಹೊರಹೊಮ್ಮಿದೆ. ಆದರೆ ಹ್ಯುಂಡೈ ಕ್ರೆಟಾ ಮೇ ತಿಂಗಳಿನಲ್ಲಿ ಮೇಲುಗೈ ಸಾಧಿಸಿತ್ತು.
Maruti Suzuki S-Presso
ಆಲ್ಟೊ ಬಳಿಕ ಭಾರತದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರ್ ಎಂಬ ಹೆಗ್ಗಳಿಕೆಗೆ ಎಸ್-ಪ್ರೆಸೋ ಪಾತ್ರವಾಗಿದೆ. ಜುಲೈ 2020 ರಲ್ಲಿ ಒಟ್ಟು 3,604 ಎಸ್-ಪ್ರೆಸ್ಸೊ ಯುನಿಟ್ ಗಳು ಮಾರಾಟವಾಗಿವೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಿದ್ದ ಈ ಕಾರ್ ಗೆ ಅಷ್ಟೊಂದು ಉತ್ತಮ ಓಪನಿಂಗ್ ಲಭಿಸಿರಲಿಲ್ಲ. ಸೆಪ್ಟೆಂಬರ್ ನಲ್ಲಿ ಕೇವಲ 5006 ಯುನಿಟ್ ಗಳು ಮಾರಾಟವಾಗಿದ್ದವು. ಆದರೆ, ಅಕ್ಟೋಬರ್ ಹಾಗೂ ನವೆಂಬರ್ ನಲ್ಲಿ ಈ ಕಾರುಗಳ ಮಾರಾಟ ವೇಗ ಪಡೆದುಕೊಂಡಿತ್ತು.
Renault Kwid
ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಸೆಗ್ಮೆಂಟ್ ನಲ್ಲಿ ಮಾರುತಿಗೆ ಫ್ರಾನ್ಸ್ ಮೊಲದ ಆಟೋ ಕಂಪನಿ ರೆನಾಲ್ಟ್ ಭಾರಿ ಪೈಪೋಟಿ ನೀಡಿದೆ. ಈ ವರ್ಷದ ಜುಲೈನಲ್ಲಿ Renault Kwid ನ ಒಟ್ಟು 3007 ಯುನಿಟ್ ಗಳು ಮಾರಾಟವಾಗಿವೆ. ಕಳೆದ ವರ್ಷ ಜುಲೈ ನಲ್ಲಿ ಒಟ್ಟು 2,684 ಯುನಿಟ್ ಗಳು ಮಾರಾಟವಾಗಿದ್ದವು. ಅಂದರೆ, ಕಳೆದ ವರ್ಷದ ಹೋಲಿಕೆಯಲ್ಲಿ ಈ ವರ್ಷ ಜುಲೈನಲ್ಲಿ Kwid ಕಾರುಗಳ ಮಾರಾಟದಲ್ಲಿ ಶೇ.12ರಷ್ಟು ಏರಿಕೆ ಗಮನಿಸಲಾಗಿದೆ.