ಹಾವಿನ ಈ ಒಂದು ಭಾಗವನ್ನು ತಂದು ರಹಸ್ಯವಾಗಿ ಮನೆಯಲ್ಲಿಟ್ಟರೆ ಹಣದ ಹೊಳೆ ಹರಿಯುತ್ತದೆ.!

Snake skin luck : ಪ್ರತಿಯೊಬ್ಬರೂ ಹಾವುಗಳನ್ನು ಕಂಡರೆ ಭಯಪಡುತ್ತಾರೆ. ಅಪ್ಪಿತಪ್ಪಿಯೂ ಇವುಗಳನ್ನು ನೋಡಲು ಯಾರೂ ಇಷ್ಟಪಡುವುದಿಲ್ಲ. ಎಲ್ಲಿಯಾದರೂ ಕಂಡರೆ ಹೆದರಿ ಓಡಿ ಹೋಗುತ್ತಾರೆ. ಕೆಲವೊಮ್ಮೆ ಮಾನವ ವಾಸಸ್ಥಾನಗಳಿಗೆ ಬರುವ ಹಾವುಗಳ ಪ್ರಾಣ ಹಾನಿ ಮಾಡುತ್ತವೆ.. ಆದರೆ ಹಾವುಗಳನ್ನು ದೇವರಂತೆ ಪೂಜಿಸುತ್ತೇವೆ.. ಈ ಪೈಕಿ ನಾಗರಹಾವಿಗೆ ವಿಶೇಷ ಗೌರವಿದೆ..  

Written by - Krishna N K | Last Updated : Mar 27, 2024, 07:54 PM IST
    • ಹಾವು ಕಂಡರೆ ಹೆದರಿ ಓಡಿ ಹೋಗುತ್ತಾರೆ.
    • ನಾಗರಹಾವಿಗೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಗೌರವ ಇದೆ..
    • ಹಾವಿನ ಪೊರೆ ನಿಮ್ಮ ಕಷ್ಟವನ್ನು ನಿವಾರಿಸುತ್ತದೆ
ಹಾವಿನ ಈ ಒಂದು ಭಾಗವನ್ನು ತಂದು ರಹಸ್ಯವಾಗಿ ಮನೆಯಲ್ಲಿಟ್ಟರೆ ಹಣದ ಹೊಳೆ ಹರಿಯುತ್ತದೆ.! title=

Snake skin benefits : ಸಾಮಾನ್ಯವಾಗಿ, ಹಾವುಗಳು ಬೆಚ್ಚಗಿನ ಮತ್ತು ಗಾಢವಾದ ಸ್ಥಳಗಳಲ್ಲಿ ವಾಸಿಸುತ್ತವೆ. ಇಲಿಗಳನ್ನು ಬೇಟೆಯಾಡಲು ಹಾವುಗಳು ತಮ್ಮ ಬಿಲಗಳಿಂದ ಹೊರಬರುತ್ತವೆ. ನೂರಾರು ಜಾತಿಯ ಹಾವುಗಳಿವೆ. ಇವುಗಳಲ್ಲಿ ಕೆಲವು ವಿಷಕಾರಿ ಮತ್ತು ಕೆಲವು ವಿಷಕಾರಿಯಲ್ಲ. ಅವುಗಳಲ್ಲಿ ನಾಗರಹಾವಿಗೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಗೌರವ ಇದೆ..

ಹಾವುಗಳು ಸುಮಾರು ಆರು ತಿಂಗಳಿಗೊಮ್ಮೆ ತಮ್ಮ ಚರ್ಮವನ್ನು ಬದಲಿಸುತ್ತವೆ.. ಅದನ್ನು ಪರಿ ಬಿಡುವುದು ಅಂತ ಹೇಳಲಾಗುತ್ತದೆ. ದಟ್ಟವಾದ ಗದ್ದೆಗಳ ಬಳಿ, ದಟ್ಟಕಾಡುಗಳಲ್ಲಿ ಹಾವುಗಳ ಪರಿಯನ್ನು ನಾವು ಆಗಾಗ್ಗೆ ಕಂಡಿರುತ್ತೇವೆ. ಈ ಹಾವಿನ ಪೊರೆ ನಿಮ್ಮ ಕಷ್ಟವನ್ನು ನಿವಾರಿಸುತ್ತದೆ ಅಂತ ನಿಮ್ಗೆ ಗೊತ್ತೆ..? ಬನ್ನಿ ತಿಳಿಯೋಣ..

ಇದನ್ನೂ ಓದಿ:ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ಡಿಕ್ಕಿ

ಕೆಲವೊಂದಿಷ್ಟು ಜನ ಹಾವಿನ ಪೊರೆಯನ್ನು ನೋಡಿ, ಹೆದರುತ್ತಾರೆ. ಆದರೆ ಇದಕ್ಕೆ ಕೆಲವು ದೈವಿಕ ಶಕ್ತಿಗಳಿವೆ. ಕೆಲವರು ಇವುಗಳನ್ನು ಮನೆಗೆ ತಂದು ವಿಶೇಷ ಮರದ ಪೆಟ್ಟಿಗೆಯಲ್ಲಿ ಇಡುತ್ತಾರೆ. ಈ ರೀತಿ ಮಾಡುವುದು ತುಂಬಾ ಒಳ್ಳೆಯದು ಅಂತ ಹೇಳ್ತಾರೆ.

ಈ ಪೈಕಿ ಬಿಳಿ ಹಾವಿನ ಪೊರೆ ನಿಮ್ಮ ಮನೆಯಲ್ಲಿರುವ ಅನೇಕ ದೋಷಗಳನ್ನು ನಿವಾರಿಸುತ್ತದೆ. ಅಲ್ಲದೆ, ಇದು ನಿಮ್ಮ ಮನೆಯಲ್ಲಿರುವ ದೃಷ್ಟ ಶಕ್ತಿಯನ್ನು ದೂರ ಮಾಡುತ್ತವೆ.. ಅದಕ್ಕೇ ಕೆಲವರು ಹಾವು ಬಿಟ್ಟ ಪರಿಯನ್ನು ಹುಡುಕಿ ತರಲು ಕಾಡಿಗೆ ಹೋಗುತ್ತಾರೆ. ಅಲ್ಲದೆ, ಈ ಪೊರೆಯನ್ನು ತಂದು ವಾರಕ್ಕೊಮ್ಮೆ ಪೂಜೆ ಮಾಡಿದರೆ ಮನೆಯಲ್ಲಿ ಕಾಳಸರ್ಪದೋಷಗಳಿದ್ದರೆ ಅದರಿಂದ ನಮ್ಮನ್ನು ರಕ್ಷಿಸುತ್ತದೆ. 

ಇದನ್ನೂ ಓದಿ:ಕೋಚಿಂಗ್ ಇಲ್ಲದೆ ಕೇವಲ 22ನೇ ವಯಸ್ಸಿನಲ್ಲಿ IAS ಆದ ಚಂದ್ರಜ್ಯೋತಿ ಸಿಂಗ್!

ಹಾವಿನ ಪೊರೆಯನ್ನು ಪೂಜಿಸುವುದರಿಂದ ನಾಗದೋಷ, ಕಾಲಸರ್ಪ ದೋಷ ನಿವಾರಣೆಯಾಗುತ್ತದೆ. ಅಲ್ಲದೆ, ಕಷ್ಟಗಳು ನಾಶವಾಗಿ ನಿಮ್ಮ ಮನೆಯಲ್ಲಿ ಹಣದ ಹೊಳೆ ಹರಿಯುತ್ತದೆ ಅಂತಹೇಳಲಾಗುತ್ತದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News