Sonia Gandhi Dance video: ಜುಲೈ 8 ರಂದು ರಾಹುಲ್ ಗಾಂಧಿ ಹರಿಯಾಣಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಗ್ರಾಮಗಳಲ್ಲಿ ರೈತರು, ಮಹಿಳಾ ಸಂಘಗಳ ಜತೆ ಹಲವು ಜನರನ್ನು ರಾಹುಲ್ ಗಾಂಧಿ ಭೇಟಿ ಮಾಡಿದರು. ಈ ವೇಳೆ ಕೆಲವು ರೈತರು ದೆಹಲಿಯಲ್ಲಿರುವ ನಿಮ್ಮ ಮನೆಯನ್ನು ನೋಡಬೇಕು ಎಂದು ರಾಹುಲ್ ಗಾಂಧಿ ಅವರನ್ನು ಕೇಳಿದರು.
ಆಗ, ದೆಹಲಿಯಲ್ಲಿ ತನಗೆ ಮನೆ ಇಲ್ಲ. ತನ್ನ ಮನೆಯನ್ನು ಸರ್ಕಾರ ವಶಪಡಿಸಿಕೊಂಡಿದೆ. ಆದರೆ ತಾಯಿ ಸೋನಿಯಾ ಗಾಂಧಿಗೆ ಮನೆ ಇದೆ. ನಿಮ್ಮನ್ನು ಆ ಮನೆಗೆ ಆಹ್ವಾನಿಸುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದರು. ರಾಹುಲ್ ಗಾಂಧಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ಹರಿಯಾಣ ಮಹಿಳಾ ರೈತರ ಕೆಲವು ಮಕ್ಕಳಿಗಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಿ, ಸೋನಿಯಾ ಗಾಂಧಿ ಅವರ ಮನೆಗೆ ಕರೆದೊಯ್ದರು.
ಇದನ್ನೂ ಓದಿ: ಅತೀ ಹೆಚ್ಚು ಪ್ಲಾಟ್’ಫಾರ್ಮ್ಗಳನ್ನು ಹೊಂದಿರುವ ಭಾರತದ ರೈಲ್ವೆ ನಿಲ್ದಾಣ ಯಾವುದು ಗೊತ್ತಾ?
ಸೋನಿಯಾ ಗಾಂಧಿ ಅವರು ತಮ್ಮ ಪುತ್ರಿ ಪ್ರಿಯಾಂಕಾ ಗಾಂಧಿ ಮತ್ತು ಪುತ್ರ ರಾಹುಲ್ ಗಾಂಧಿ ಅವರೊಂದಿಗೆ ಹರಿಯಾಣದ ಮಹಿಳಾ ರೈತರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬಹಳ ಹೊತ್ತು ಮಾತನಾಡಿದ್ದು ಮಾತ್ರವಲ್ಲದೆ ಅವರ ಜೊತೆ ಡಿನ್ನರ್ ಕೂಡ ಮಾಡಿದ್ದಾರೆ. ನಂತರ ಡ್ಯಾನ್ಸ್ ಮಾಡಿದ್ದಾರೆ. ಮಹಿಳಾ ರೈತರೊಂದಿಗೆ ಸೋನಿಯಾ ಗಾಂಧಿ ಅವರ ಡ್ಯಾನ್ಸ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Women farmers from Haryana had expressed their desire to @RahulGandhi to see Delhi and his house. He told them that the Govt has taken away his house.
But just see what happened next.
This video is pure joy! ❤️ pic.twitter.com/1cqAeSW5xg
— Ruchira Chaturvedi (@RuchiraC) July 16, 2023
ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಸೋನಿಯಾ ಗಾಂಧಿ ಅವರು ಮಾಧ್ಯಮಗಳಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಸೋಷಿಯಲ್ ಮೀಡಿಯಾ ವಿಂಗ್ ರೈತರೊಂದಿಗೆ ಕುಣಿದು ಕುಪ್ಪಳಿಸುವ ಮಧುರ ಕ್ಷಣಗಳನ್ನು ಹಂಚಿಕೊಂಡಿತ್ತು. ಈ ವಿಡಿಯೋವನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶೇರ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ವಾರದ ಹಿಂದಷ್ಟೇ ಪೋಸ್ಟಿಂಗ್, ಮೊದಲ ದಿನವೇ ಲಂಚಕ್ಕೆ ಕೈಯೊಡ್ಡಿದ್ದ ಸಹಾಯಕ ರಿಜಿಸ್ಟ್ರಾರ್ ಎಸಿಬಿ ಬಲೆಗೆ!
ಈ ವಯಸ್ಸಿನಲ್ಲೂ ಸೋನಿಯಾ ಗಾಂಧಿ ಅತ್ಯಂತ ಕ್ರಿಯಾಶೀಲರಾಗಿದ್ದಾರೆ. ಮಹಿಳಾ ರೈತರೊಂದಿಗೆ ಮೋಜು ಮಾಡಿದರು. ಅವರೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ನೋಡಿ ಖುಷಿಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಕಾಂಗ್ರೆಸ್ ನಾಯಕರು ಡೌನ್ ಟು ಅರ್ಥ್ ಎಂಬುದನ್ನು ತೋರಿಸುತ್ತದೆ ಎಂದು ಪಕ್ಷದ ಕೆಲ ಮುಖಂಡರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ರಾಹುಲ್ ಗಾಂಧಿ ಅವರು ಕೊಟ್ಟ ಮಾತನ್ನು ಉಳಿಸಿಕೊಂಡು ರೈತ ಮಹಿಳೆಯರ ಆಸೆ ಈಡೇರಿಸಿದ್ದಾರೆ, ಮಾತ್ರವಲ್ಲದೆ ಹಲವು ನಾಯಕರಿಗೆ ಮಾದರಿಯಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಚರ್ಚಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.