'ಹೋಳಿ' ಬಳಿಕ ಎಸ್​ಪಿ-ಬಿಎಸ್​ಪಿ-RLD ಯಿಂದ ಜಂಟಿ ಚುನಾವಣಾ ರ‍್ಯಾಲಿ

ಸಹರಾನ್ಪುರದ ದೇವಬಂದ್‌ನಲ್ಲಿ ನಡೆಯಲಿರುವ ಮೈತ್ರಿ ಪಕ್ಷಗಳ ಮೊದಲ ರ‍್ಯಾಲಿಯಲ್ಲಿ ಬಿಎಸ್​ಪಿ ನಾಯಕಿ ಮಾಯಾವತಿ, ಎಸ್​ಪಿ ನಾಯಕ ಅಖಿಲೇಶ್ ಯಾದವ್ ಮತ್ತು ಆರ್ ಎಲ್ ಡಿ ನಾಯಕ ಅಜಿತ್ ಸಿಂಗ್ ರ‍್ಯಾಲಿಯ ನೇತೃತ್ವ ವಹಿಸಲಿದ್ದಾರೆ. 

Last Updated : Mar 15, 2019, 10:42 AM IST
'ಹೋಳಿ' ಬಳಿಕ ಎಸ್​ಪಿ-ಬಿಎಸ್​ಪಿ-RLD ಯಿಂದ ಜಂಟಿ ಚುನಾವಣಾ ರ‍್ಯಾಲಿ title=

ಲಕ್ನೋ: 2019ರ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೆರುತ್ತಿದ್ದು, ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ, ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕದಳ ಪಕ್ಷಗಳು 'ಹೋಳಿ' ಬಳಿಕ ಜಂಟಿ ಚುನಾವಣಾ ರ‍್ಯಾಲಿ ಆಯೋಜಿಸುತ್ತಿವೆ.

ಲೋಕಸಭಾ ಚುನಾವಣೆಗೂ ಮೊದಲೇ ಮೈತ್ರಿ ಮಾಡಿಕೊಂಡಿರುವ ಈ ಪಕ್ಷಗಳು ಪಶ್ಚಿಮ ಉತ್ತರ ಪ್ರದೇಶದಿಂದ ನವರಾತ್ರಿ ಪವಿತ್ರ ದಿನಗಳಲ್ಲಿ(ಹೋಳಿ ಸಂದರ್ಭದಲ್ಲಿ) ಏಪ್ರಿಲ್ 7ರಂದು ಮುಸ್ಲಿಂ ಸಮುದಾಯದ ಪ್ರಧಾನವಾಗಿರುವ ಸಹರಾನ್ಪುರದ ದೇವಬಂದ್‌ನಲ್ಲಿ ತಮ್ಮ ಮೊದಲ ಜಂಟಿ ರ‍್ಯಾಲಿಯನ್ನು ಆಯೋಜಿಸಿದ್ದು, ಬಿಎಸ್​ಪಿ ನಾಯಕಿ ಮಾಯಾವತಿ, ಎಸ್​ಪಿ ನಾಯಕ ಅಖಿಲೇಶ್ ಯಾದವ್ ಮತ್ತು ಆರ್ ಎಲ್ ಡಿ ನಾಯಕ ಅಜಿತ್ ಸಿಂಗ್ ರ‍್ಯಾಲಿಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಚುನಾವಣಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂತಹ ಹಲವು ರ‍್ಯಾಲಿಗಳು ನಡೆಯಲಿದ್ದು, ಮೈತ್ರಿ ಮುಖಂಡರು ಒಟ್ಟಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು 
ಎಸ್​ಪಿ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಚೌಧರಿ ಗುರುವಾರ ತಿಳಿಸಿದ್ದಾರೆ.

ಎಸ್​ಪಿ-ಬಿಎಸ್​ಪಿ-RLD ಮೈತ್ರಿ ರಾಜಕೀಯ ರಂಗದಲ್ಲಿ ಹೊಸ ತರಂಗ ಸೃಷ್ಟಿಸಿದೆ. ಸಿದ್ಧಾಂತ ಆಧಾರದ ಮೇಲೆ ಮಾಡಿಕೊಳ್ಳಲಾಗಿರುವ ಈ ಮೈತ್ರಿ ವಿರೋಧ ಪಕ್ಷದಲ್ಲಿ ಭೀತಿ, ಹತಾಶೆಯನ್ನು ಉಂಟುಮಾಡಿದೆ ಎಂದು ರಾಜೇಂದ್ರ ಚೌಧರಿ ಹೇಳಿದ್ದಾರೆ.

Trending News