close

News WrapGet Handpicked Stories from our editors directly to your mailbox

ಅಮಿತ್ ಷಾ ಔತಣಕೂಟದ ಮೆನು ಹೇಗಿದೆ ಗೊತ್ತಾ...!

ಭಾರತೀಯ ಜನತಾ ಪಕ್ಷದ(ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಎನ್​ಡಿಎ ನಾಯಕರಿಗೆ ಏರ್ಪಡಿಸಿರುವ ಔತಣಕೂಟದಲ್ಲಿ ವಿವಿಧ ರಾಜ್ಯಗಳ ನಾಯಕರು ಭಾಗಿಯಾಗಲಿದ್ದಾರೆ.

Updated: May 21, 2019 , 11:56 AM IST
ಅಮಿತ್ ಷಾ ಔತಣಕೂಟದ ಮೆನು ಹೇಗಿದೆ ಗೊತ್ತಾ...!

ನವದೆಹಲಿ: ಭಾರತೀಯ ಜನತಾ ಪಕ್ಷದ(ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಎನ್​ಡಿಎ ನಾಯಕರಿಗೆ ಏರ್ಪಡಿಸಿರುವ ಔತಣಕೂಟದಲ್ಲಿ ಭೋಜನದ ಮೆನು ಏನೆಂದು ತಿಳಿದುಬಂದಿದೆ. ದೆಹಲಿಯ ಅಶೋಕ ಹೋಟೆಲ್ ನಲ್ಲಿ ಆಯೋಜಿಸಲಾಗಿರುವ ಈ ಔತಣಕೂಟದಲ್ಲಿ 35 ವಿಧದ ಭಕ್ಷ್ಯಗಳಿರಲಿವೆ ಎನ್ನಲಾಗಿದೆ. ಎನ್​ಡಿಎ ನಾಯಕರಿಗೆ ಏರ್ಪಡಿಸಿರುವ ಔತಣಕೂಟದಲ್ಲಿ ವಿವಿಧ ರಾಜ್ಯಗಳ ನಾಯಕರು ಭಾಗಿಯಾಗಲಿದ್ದಾರೆ. ಅಂತಹ ಸಂದರ್ಭದಲ್ಲಿ ಅವರ ರಾಜ್ಯಗಳ ಭಕ್ಷ್ಯಗಳನ್ನು ಕೂಡ ಈ ಮೆನುವಿನಲ್ಲಿ ಸೇರಿಸಲಾಗಿದೆ. 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ಕೂಡ ಈ ಔತಣಕೂಟದಲ್ಲಿ ಭಾಗಿಯಗಲಿದ್ದು ಅವರಿಗಾಗಿ ಗುಜರಾತಿನ ಹಲವು ಭಕ್ಷ್ಯಗಳನ್ನೂ ಮೆನು ಒಳಗೊಂಡಿದೆ. 

ನಿತೀಶ್ ಮತ್ತು ಶಿವಸೇನೆ ನಾಯಕರಿಗಾಗಿ ವಿಶೇಷ ಭಕ್ಷ್ಯಗಳು:
ಅಮಿತ್ ಶಾ ಡಿನ್ನರ್ ಪಾರ್ಟಿಯಲ್ಲಿ ನಿತೀಶ್ ಮತ್ತು ಶಿವಸೇನೆ ನಾಯಕರು ಪಾಲ್ಗೊಳ್ಳಲಿದ್ದು ಅವರಿಗಾಗಿ ಬಿಹಾರ್ ಮತ್ತು ಮಹಾರಾಷ್ಟ್ರದ ವಿಶೇಷ  ಭಕ್ಷ್ಯಗಳು ತಯಾರಾಗಲಿವೆ ಎಂದು ಮೂಲಗಳು ತಿಳಿಸಿವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಪಕ್ಷದ ಹಲವು ನಾಯಕರು ಪಾರ್ಟಿಗೆ ಬರುವ ನಿರೀಕ್ಷೆಯಿದ್ದು ಈ ಹಿನ್ನೆಲೆಯಲ್ಲಿ ಬಿಹಾರದ ಎರಡು-ಮೂರು ಭಕ್ಷ್ಯಗಳನ್ನೂ ಮೆನು ಒಳಗೊಂಡಿದೆ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಸಹ ಔತಣಕೂಟದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ(ಈವರೆಗೂ ಅಧಿಕೃತವಾಗಿ ಖಚಿತಪಡಿಸಿಲ್ಲ) ಅವರಿಗಾಗಿ ಮಹಾರಾಷ್ಟ್ರದ ಅತ್ಯಂತ ರುಚಿಕರ ತಿನಿಸು ಪುರನ್ ಪೊಲಿಯನ್ನು ಮೆನುನಲ್ಲಿ ಸೇರಿಸಲಾಗಿದೆ ಎನ್ನಲಾಗಿದೆ. 

ಈಶಾನ್ಯ ಮತ್ತು ಪಂಜಾಬಿ ತಿನಿಸುಗಳು:
ಅಮಿತ್ ಷಾ ಅವರ ಔತಣಕೂಟದಲ್ಲಿ ಈಶಾನ್ಯದ ನಾಯಕರ ಬಗ್ಗೆಯೂ ಗಮನಹರಿಸಲಾಗಿದ್ದು, ವಿಶೇಷವಾಗಿ ತಯಾರಿಸಿದ ಈಶಾನ್ಯ ರಾಜ್ಯಗಳ ತಿನಿಸುಗಳನ್ನು ವ್ಯವಸ್ಥೆಗೊಳಿಸಲಾಗುವುದು. ಅಲ್ಲದೆ, ಪಂಜಾಬ್ನ ಅಕಾಲಿ ದಳದ ನಾಯಕರು ಭೋಜನಕೂಟದಲ್ಲಿ ಭಾಗಿಯಾಗುವ ಕಾರಣ ಅವರಿಗಾಗಿ ಪಂಜಾಬಿ ಸ್ಪೆಷಲ್ ಭಕ್ಷ್ಯಗಳ ವ್ಯವಸ್ಥೆ ಕಲ್ಪಿಸಲಾಗಿದೆಯಂತೆ.
 
ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ, ಅಮಿತ್ ಶಾರ ಔತಣಕೂಟದಲ್ಲಿ ಸುಮಾರು 35 ವಿಶಿಷ್ಟ್ಯ ಭಕ್ಷ್ಯದ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಮಹಾರಾಷ್ಟ್ರದ ಅತ್ಯಂತ ರುಚಿಕರ ತಿನಿಸು ಪುರನ್ ಪೊಲಿ, ಗುಜರಾತಿನ ಸ್ಪೆಷಲ್ ಥಾಲಿ, ಬಿಹಾರ ಮತ್ತು ಈಶಾನ್ಯ ರಾಜ್ಯಗಳ ರುಚಿಕರ ತಿನಿಸುಗಳು ಸೇರಿವೆ ಎಂದು ಹೇಳಲಾಗುತ್ತಿದೆ.

ಎನ್​ಡಿಎ ವಿವಿಧ ರಾಜ್ಯಗಳ ನಾಯಕರಿಂದ ಕೂಡಿದ್ದು, ಅವರೆಲ್ಲಾ ಒಂದೇ ಕುಟುಂಬದ ಸದಸ್ಯರಂತಿದ್ದಾರೆ ಎಂಬ ಸಂದೇಶವನ್ನು ಈ ಭೋಜನ ಮೆನು ಬಿಂಬಿಸಲಿದೆ ಎಂದು ಬಿಜೆಪಿ ಕಚೇರಿಯ ಮೂಲಗಳು ತಿಳಿಸಿವೆ.

ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಎನ್​ಡಿಎ ಮುಖಂಡರು ಭಾಗಿಯಾಗಿ ಏಕತೆ ಪ್ರದರ್ಶಿಸಿದ್ದರು. ವಾರಾಣಾಸಿನಲ್ಲಿ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ ಅವರ ಪಾದಕ್ಕೆ ಪ್ರಧಾನಿ ಮೋದಿ ನಮಸ್ಕರಿಸಿದ್ದರು.