ನವದೆಹಲಿ: ಕಳೆದ ವರ್ಷ ಸರ್ಕಾರ ಸಿಂಗಲ್ ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಿತ್ತು. ಸರ್ಕಾರದ ಈ ಕ್ರಮವು ಬಿದಿರಿನ ಉದ್ಯಮದಲ್ಲಿ ಭರಾಟೆ ಸೃಷ್ಟಿಸಿದೆ. ಇಂದು, ಮಾರುಕಟ್ಟೆಯಲ್ಲಿ ತಯಾರಿಸಲಾಗಿರುವ ಕ್ರಾಕರಿ ಐಟಂಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಬಿದಿರಿನ ನೀರಿನ ಬಾಟಲ್, ಬಿದಿರಿನ ಕಪ್-ಪ್ಲೇಟ್, ಚಮಚ, ಫೋರ್ಕ್, ಪ್ಲೇಟ್, ಒಣಹುಲ್ಲಿನ ಉತ್ಪನ್ನಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ.
ಇದರಿಂದ ಜನರಿಗೆ ಗಳಿಕೆಯ ಹೊಸ ಆಯಾಮ ಕೂಡ ತೆರೆದುಕೊಂದಂತಾಗಿದೆ. ಇಲ್ಲಿ ನಾವು ಬಿದಿರಿಗೆ ಸಂಬಂಧಿಸಿದ ಕೆಲವು ಚಟುವಟಿಕೆಗಳನ್ನು ಚರ್ಚಿಸುತ್ತಿದ್ದು, ರೈತನಿಂದ ಹಿಡಿದು ಉದ್ಯಮಿಗಳ ವರೆಗೆ ಉತ್ತಮ ಆದಾಯವನ್ನು ಗಳಿಸಬಹುದಾಗಿದೆ.
ಬಿದಿರಿನ ನೀರಿನ ಬಾಟಲಿ ಹಾಗೂ ಪಾತ್ರೆಗಳನ್ನು ತಯಾರಿಸುವುದು
ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಸರ್ಕಾರ ನಿಷೇಧಿಸಿದಾಗ, ಆ ಸಮಯದಲ್ಲಿ ಬಿದಿರಿನಿಂದ ತಯಾರಿಸಿದ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿವೆ. ಖಾದಿ ಗ್ರಾಮೋದ್ಯೋಗ ಆಯೋಗವು ಬಿದಿರಿನ ಬಾಟಲಿಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.
ಖಾದಿ ಗ್ರಾಮೋದ್ಯೋಗ ಆಯೋಗ, ಖಾದಿ, ಜೇನುತುಪ್ಪಗಳಂತಹ ಕುಟಿರ್ ಉದ್ಯೋಗಗಳ ಜೊತೆಗೆ ಬಿದಿರಿನ ಉದ್ಯಮವನ್ನು ವಿಸ್ತರಣೆಯತ್ತ ಇದೀಗ ಗಮನ ಹರಿಸಿದೆ. ಖಾದಿ ಗ್ರಾಮೋದ್ಯೋಗ ಆಯೋಗ ಬಿದಿರು ಮಿಶನ್ ಅಡಿ ಜನರಿಗೆ ಬಿದಿರಿನಿಂದ ಸಾಮಾನು ತಯಾರಿಸುವ ತರಬೇತಿ ನೀಡುವುದರ ಜೊತೆಗೆ ಉದ್ಯಮ ಆರಂಭಿಸಲು ಸಾಲ ಸೌಲಭ್ಯ ಕೂಡ ಒದಗಿಸುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ನೀವು ಖಾದಿ ಗ್ರಾಮೊದ್ಯೋಗದ ಅಧಿಕೃತ ವೆಬ್ಸೈಟ್ ಆಗಿರುವ www.kvic.gov.in/kvicres/index.php ಗೆ ಭೇಟಿ ನೀಡಬಹುದು.
ಇಲ್ಲಿಂದ ತರಬೇತಿ ಪಡೆಯಿರಿ
ಖಾದಿ ಗ್ರಾಮೋದ್ಯೋಗ ಆಯೋಗದ ಪ್ರಕಾರ, 750ml ಬಿದಿರಿನ ನೀರಿನ ಬಾಟಲಿಯ ಮಾರುಕಟ್ಟೆಯ ಬೆಲೆ ರೂ.300 ಆಗಿದೆ. ಇಂದು ಭಾರತದಲ್ಲಿ ಇದಕ್ಕೆ ಭಾರಿ ಬೇಡಿಕೆ ಇದೆ. ನೀರಿನ ಬಾಟಲಿ ತಯಾರಿಸುವ ಹಾಗೂ ಇತರ ವಸ್ತುಗಳನ್ನು ತಯಾರಿಸುವ ತರಬೇತಿಯನ್ನು ನೀವು ರಾಷ್ಟ್ರೀಯ ಬಿದಿರು ಮಿಷನ್ ವೆಬ್ಸೈಟ್ ಆಗಿರುವ nbm.nic.in ನಿಂದ ಪಡೆಯಬಹುದು. ಇದರಲ್ಲಿ ಬಿದಿರಿನಿಂದ ಸಾಮಾನು ತಯಾರಿಸುವ ತರಬೇತಿ ನೀಡುವ ಸಂಸ್ಥೆಗಳ ಕುರಿತು ಮಾಹಿತಿ ನೀಡಲಾಗಿದೆ. nbm.nic.in/Hcssc.aspx ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಈ ಸಂಸ್ಥೆಗಳ ಬಗ್ಗೆ ಮಾಹಿತಿ ಪಡೆಯಬಹುದು.
ಬಿದಿರಿನ ಉದ್ಯೋಗ ಆರಂಭಿಸಲು ಎಷ್ಟು ವೆಚ್ಚ ತಗುಲಲಿದೆ
ಬಿದಿರಿನ ಉದ್ಯೋಗದಲ್ಲಿ ಹಲವು ಕೆಲಸಗಳು ಬರುತ್ತವೆ. ಪ್ರತಿಯೊಂದು ಕೆಲಸ ಆರಂಭಿಸಲು ವಿವಿಧ ರೀತಿಯ ಹೂಡಿಕೆ ಅಗತ್ಯವಿದೆ. ಮಧ್ಯ ಪ್ರದೇಶ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಬಿದಿರಿನಿಂದ ಆಭರಣ ತಯಾರಿಸುವ ಯುನಿಟ್ ಪ್ರಾರಂಭಿಸಲು 15 ಲಕ್ಷ ರೂ. ಹೂಡಿಕೆ ಮಾಡಬೇಕು, ಅಗರಬತ್ತಿ ಯುನಿಟ್ ಆರಂಭಿಸಲು 20 ಲಕ್ಷ ರೂ. ಹೂಡಿಕೆ ಮಾಡಬೇಕು. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಮಧ್ಯ ಪ್ರದೇಶದ ಬ್ಯಾಂಬೂ ಮಿಷನ್ ನ ಲಿಂಕ್ ಆಗಿರುವ apps.mpforest.gov.in/MPSBM/ ಗೆ ಭೇಟಿ ನೀಡಬೇಕು.