ಸುಭಾಶ್ರೀ ಸಾವು: ಸರ್ಕಾರದ ಮೇಲೆ ನಂಬಿಕೆ ಕಳೆದುಹೋಗಿದೆ- ಮದ್ರಾಸ್ ಹೈಕೋರ್ಟ್

ರಾಜಕೀಯ ಪಕ್ಷಗಳ ಹೋರ್ಡಿಂಗ್‌ಗಳನ್ನು ನಿಷೇಧಿಸುವ ಆದೇಶವನ್ನು ಜಾರಿಗೆ ತರಲು ವಿಫಲವಾದ ಕಾರಣ ಮದ್ರಾಸ್ ಹೈಕೋರ್ಟ್ ಶುಕ್ರವಾರ ತಮಿಳುನಾಡು ಸರ್ಕಾರವನ್ನು ತರಾಟೆಗೆ ತಗೆದುಕೊಂಡಿದೆ.

Last Updated : Sep 13, 2019, 05:23 PM IST
ಸುಭಾಶ್ರೀ ಸಾವು: ಸರ್ಕಾರದ ಮೇಲೆ ನಂಬಿಕೆ ಕಳೆದುಹೋಗಿದೆ- ಮದ್ರಾಸ್ ಹೈಕೋರ್ಟ್   title=
file photo

ನವದೆಹಲಿ: ರಾಜಕೀಯ ಪಕ್ಷಗಳ ಹೋರ್ಡಿಂಗ್‌ಗಳನ್ನು ನಿಷೇಧಿಸುವ ಆದೇಶವನ್ನು ಜಾರಿಗೆ ತರಲು ವಿಫಲವಾದ ಕಾರಣ ಮದ್ರಾಸ್ ಹೈಕೋರ್ಟ್ ಶುಕ್ರವಾರ ತಮಿಳುನಾಡು ಸರ್ಕಾರವನ್ನು ತರಾಟೆಗೆ ತಗೆದುಕೊಂಡಿದೆ.

ಈ ಹಿಂದಿನ ದಿನ ಚೆನ್ನೈನಲ್ಲಿ 23 ವರ್ಷದ ಟೆಕಿಯ ಸಾವಿನ ಬಗ್ಗೆ ಉಲ್ಲೇಖಿಸಿ ಈ ಘಟನೆಯು ಅಧಿಕಾರಶಾಹಿ ನಿರಾಸಕ್ತಿಯ ಪರಿಣಾಮವಾಗಿದೆ ಎಂದು ಕೋರ್ಟ್ ವಾಖ್ಯಾನಿಸಿದೆ. ಡಿವೈಡರ್ ಮೇಲೆ ನಿರ್ಮಿಸಲಾದ ಹೋರ್ಡಿಂಗ್ ಆಕೆಯ ಮೇಲೆ ಬಿದ್ದಿದ್ದರಿಂದ ಸುಭಾಶ್ರಿಯ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಈಗ ಮದ್ರಾಸ್ ಹೈಕೋರ್ಟ್ ನ ಹೇಳಿಕೆ ಬಂದಿದೆ.

'ಈ ದೇಶದಲ್ಲಿ ಜೀವನಕ್ಕೆ ಶೂನ್ಯ ಗೌರವವಿದೆ. ಇದು ಅಧಿಕಾರಶಾಹಿ ನಿರಾಸಕ್ತಿ.  ಕ್ಷಮಿಸಿ, ನಾವು ಸರ್ಕಾರದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದೇವೆ' ಎಂದು ನ್ಯಾಯಮೂರ್ತಿ ಶೇಷಾಸಾಯಿ ಹೇಳಿದ್ದಾರೆಂದು ಎಎನ್ಐ ವರದಿ ಮಾಡಿದೆ.ಕಾನೂನುಬಾಹಿರ ಫ್ಲೆಕ್ಸ್ ಬೋರ್ಡ್‌ಗಳ ವಿರುದ್ಧ ಅನೇಕ ಆದೇಶಗಳನ್ನು ರವಾನಿಸುವುದರಿಂದ ಬೇಸತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಇದೇ ವೇಳೆ  ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಈ ಘಟನೆಯ ಬಗ್ಗೆ ರಾಜ್ಯ ಸರ್ಕಾರವನ್ನು ದೂಷಿಸಿದರು ಮತ್ತು ಮಹಿಳೆಯ ಸಾವಿಗೆ ಕಾರಣರಾಗಿದ್ದಾರೆ ಎಂದು ಕಿಡಿಕಾರಿದರು. “ಸರ್ಕಾರ ಮತ್ತು ಅಸಮರ್ಥ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸುಭಾಸ್ರಿ ಮೃತಪಟ್ಟಿದ್ದಾರೆ. ಅಕ್ರಮ ಬ್ಯಾನರ್‌ಗಳು ಮತ್ತೊಂದು ಜೀವವನ್ನು ತೆಗೆದುಕೊಂಡಿವೆ. ಅಧಿಕಾರ-ಹಸಿದ ಮತ್ತು ಅರಾಜಕತಾವಾದಿ ಆಡಳಿತಕ್ಕೆ ಇನ್ನೂ ಎಷ್ಟು ಜೀವಗಳು ನಷ್ಟವಾಗುತ್ತವೆ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮದ್ರಾಸ್ ಹೈಕೋರ್ಟ್ ರಸ್ತೆ ಮತ್ತು ಪಾದಚಾರಿಗಳ ಉದ್ದಕ್ಕೂ ವ್ಯಕ್ತಿಗಳ ಮತ್ತು ರಾಜಕೀಯ ಪಕ್ಷಗಳ ಹೋರ್ಡಿಂಗ್‌ಗಳನ್ನು ನಿಷೇಧಿಸುವ ಆದೇಶವನ್ನು 2017 ರಲ್ಲಿ ಅಂಗೀಕರಿಸಿತ್ತು. 

Trending News