ಸನ್ನಿ ಡಿಯೋಲ್ ಸಿನಿಮಾ ಫೌಜಿ, ನಾನು ನಿಜವಾದ ಫೌಜಿ- ಪಂಜಾಬ್ ಸಿಎಂ ಅಮರಿಂದರ್ ಸಿಂಗ್

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವನ್ನು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಬಿಜೆಪಿ ಅಭ್ಯರ್ಥಿಯಾಗಿ ಗುರುದಾಸ್ಪುರದಿಂದ ಕಣಕ್ಕೆ ಇಳಿದಿರುವ ನಟ ಸನ್ನಿ ಡಿಯೋಲ್ ರನ್ನು ವ್ಯಂಗ್ಯವಾಡಿ ಅವರನ್ನು ಸಿನಿಮಾ ಫೌಜಿ ಎಂದು ಹೇಳಿದರು.  

Last Updated : Apr 26, 2019, 06:55 PM IST
ಸನ್ನಿ ಡಿಯೋಲ್ ಸಿನಿಮಾ ಫೌಜಿ, ನಾನು ನಿಜವಾದ ಫೌಜಿ- ಪಂಜಾಬ್ ಸಿಎಂ ಅಮರಿಂದರ್ ಸಿಂಗ್  title=

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವನ್ನು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಬಿಜೆಪಿ ಅಭ್ಯರ್ಥಿಯಾಗಿ ಗುರುದಾಸ್ಪುರದಿಂದ ಕಣಕ್ಕೆ ಇಳಿದಿರುವ ನಟ ಸನ್ನಿ ಡಿಯೋಲ್ ರನ್ನು ವ್ಯಂಗ್ಯವಾಡಿ ಅವರನ್ನು ಸಿನಿಮಾ ಫೌಜಿ ಎಂದು ಹೇಳಿದರು.  

ಸುದ್ದಿಗಾರರೊಂದಿಗೆ ಮಾತನಾಡಿದ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ " ನಾನು ನಿಜವಾದ ಫೌಜಿ ಆಗಿರುವಾಗ ಒ ಸನ್ನಿ ಡಿಯೋಲ್ ಸಿನಿಮಾದಲ್ಲಿನ ಫೌಜಿ ಆಗಿದ್ದಾರೆ. ಆದ್ದರಿಂದ ನಾವು ಅವರನ್ನು ಸೋಲಿಸುತ್ತೇವೆ. ಅವರು ಸುನಿಲ್ ಜಾಕರ್ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಅಪಾಯವಿಲ್ಲ" ಎಂದು ಹೇಳಿದರು. ಸನ್ನಿ ಡಿಯೋಲ್ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದರು.ಬಿಜೆಪಿ ಅವರನ್ನು ಗುರುದಾಸ್ಪುರ್ ದಿಂದ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿತ್ತು.ಈಗ ಅವರು ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಾಕರ್ ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. 

ಸನ್ನಿ ಡಿಯೋಲ್  997 ರಲ್ಲಿ ಬಂದಂತಹ ಬಾರ್ಡರ್ ಸಿನಿಮಾದಲ್ಲಿ ಸೈನಿಕನ ಪಾತ್ರವನ್ನು ನಿರ್ವಹಿಸಿದ್ದರು.ಇದನ್ನು ಉಲ್ಲೇಖಿಸಿ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ವ್ಯಂಗ್ಯವಾಡಿದ್ದರು.ಅವರು 1965 ರ ಇಂಡೋ-ಪಾಕ್ ಯುದ್ದದಲ್ಲಿ  ಕ್ಯಾಪ್ಟನ್ ರಾಗಿ ಕಾರ್ಯನಿರ್ವಹಿಸಿದ್ದರು. ಈ ಹಿನ್ನಲೆಯಲ್ಲಿ ತಮ್ಮನ್ನು ಅವರು ನಿಜವಾದ ಫೌಜಿ ಎಂದು ಕರೆದುಕೊಂಡಿದ್ದಾರೆ. 
 

Trending News