ನವದೆಹಲಿ: ರಾಜ್ಯದ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಹುದ್ದೆ ನೇಮಕಾತಿ ಮಾನದಂಡಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು ಕನಿಷ್ಠ ಆರು ತಿಂಗಳ ಸೇವಾವಧಿಯಿರುವ ಐಪಿಎಸ್ ಅಧಿಕಾರಿಯ ಹೆಸರನ್ನು ಡಿಜಿಪಿ ಹುದ್ದೆಗೆ ಪರಿಗಣಿಸಿ ಎಂದು ತಿಳಿಸಿದೆ. ಆದರೆ, ಆರು ತಿಂಗಳಿಗಿಂತ ಕಡಿಮೆ ಸೇವಾವಧಿ ಇರುವವರನ್ನು ಈ ಹುದ್ದೆಗೆ ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
Supreme Court orders that states will consider only those IPS officers for the post of DGPs who have a minimum six months residual tenure of service. pic.twitter.com/1m59JSdqHr
— ANI (@ANI) March 13, 2019
ಡಿ.ಜಿ.ಪಿಯ ಹುದ್ದೆಗೆ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಶಿಫಾರಸು ಮಾಡಬೇಕು ಮತ್ತು ಸಂಪೂರ್ಣವಾಗಿ ಐಪಿಎಸ್ ಅಧಿಕಾರಿಯ ಜ್ಯೇಷ್ಠತೆ ಆಧಾರದಲ್ಲಿ ಡಿಜಿಪಿ ನೇಮಕ ಮಾಡಬೇಕು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ತಿಳಿಸಿದೆ.
ಉತ್ತರ ಪ್ರದೇಶ ಡಿಜಿಪಿ ಪ್ರಕಾಶ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ. ಜುಲೈ 3, 2018 ರ ಸೂಚನೆಗಳನ್ನು ರಾಜ್ಯ ಸರ್ಕಾರಗಳು ದುರ್ಬಳಕೆ ಮಾಡುತ್ತಿದೆ ಮತ್ತು ಅವರು ಡಿಜಿಪಿ ಹುದ್ದೆಗೆ ಹಿರಿಯ ಅಧಿಕಾರಿಗಳ ಹೆಸರನ್ನು ಕಡೆಗಣಿಸುತ್ತಿದ್ದಾರೆ ಎಂದು ಸಿಂಗ್ ಆರೋಪಿಸಿದ್ದರು.