ಆಗಸದಿಂದ ಭೂಮಿಯ ಮೇಲೆ 'ಬೇಹುಗಾರಿಕಾ ಕಣ್ಣು', ಇಲ್ಲಿದೆ ಸಮಗ್ರ ವರದಿ

ನಿನ್ನೆಯಷ್ಟೇ ಭಾರತ ಬಾಹ್ಯಾಕಾಶದಲ್ಲಿ ತನ್ನ ಬೇಹುಗಾರಿಕಾ ಉಪಗ್ರಹವನ್ನು ಉಡಾವಣೆ ಮಾಡಿದೆ. ಕಳೆದ 15 ದಿನಗಳಲ್ಲಿ ಉಡಾವಣೆ ಮಾಡಲಾದ ಎರಡನೆಯ ಉಪಗ್ರಹ ಇದಾಗಿದೆ.

Written by - Nitin Tabib | Last Updated : Dec 12, 2019, 04:11 PM IST
ಆಗಸದಿಂದ ಭೂಮಿಯ ಮೇಲೆ 'ಬೇಹುಗಾರಿಕಾ ಕಣ್ಣು', ಇಲ್ಲಿದೆ ಸಮಗ್ರ ವರದಿ title=

ನವದೆಹಲಿ: ಡಿಸೆಂಬರ್ 11ರಂದು ಭಾರತ ಬಾಹ್ಯಾಕಾಶದಲ್ಲಿ ತನ್ನ ಬೇಹುಗಾರಿಕಾ ಉಪಗ್ರಹವನ್ನು ಉಡಾವಣೆ ಮಾಡಿದೆ. ಕಳೆದ 15 ದಿನಗಳಲ್ಲಿ ಬಾಹ್ಯಾಕಾಶದಲ್ಲಿ ಉಡಾವಣೆಗೊಂಡ ಎರಡನೇ ಬೇಹುಗಾರಿಕಾ ಉಪಗ್ರಹ ಇದಾಗಿದೆ. ಅಂತರಿಕ್ಷದಲ್ಲಿ ಸುತ್ತುತ್ತಿರುವ ಈ ಉಪಗ್ರಹ ನಮ್ಮ ಶತ್ರು ರಾಷ್ಟ್ರಗಳ ಭಾರತ ವಿರೋಧಿ ಚಟುವಟಿಕೆಗಳ ಮೇಲೆ ನಿಗಾವಹಿಸಲು ಈ ಉಪಗ್ರಹ ಸಹಕಾರಿಯಾಗಲಿದೆ. ನೀವು ಈ ಉಪಗ್ರಹವನ್ನು ಆಗಸದಲ್ಲಿ ಭಾರತದ ಅತ್ಯಂತ ಪ್ರಭಾವಿ ಗುಪ್ತಚರ ಎಂದೂ ಕೂಡ ಹೇಳಬಹುದು. PSLV-C48 ರಾಕೆಟ್ ಸ್ವದೇಶೀ ನಿರ್ಮಿತ ಈ RISAT-2BR 1 ಉಪಗ್ರಹದ ಜೊತೆ ಇತರೆ ನಾಲ್ಕು ದೇಶಗಳ 9 ಉಪಗ್ರಹಗಳನ್ನೂ ಕೂಡ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ತಲುಪಿಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾನಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಮಧ್ಯಾಹ್ನ 3.25ಕ್ಕೆ ಈ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗಿದ್ದು, ಕೇವಲ 21 ನಿಮಿಷಗಳಲ್ಲಿ ಈ ಹತ್ತೂ ಉಪಗ್ರಹಗಳು ಬಾಹ್ಯಾಕಾಶದಲ್ಲಿ ಸುತ್ತಲಾರಂಭಿಸಿವೆ. 

1. PSLV ರಾಕೆಟ್ ಮೂಲಕ ಇದು 50ನೇ ಉಡಾವಣೆ ಇದಾಗಿದ್ದರಿಂದ ISRO ಪಾಲಿಗೆ ಇದು ವಿಶೇಷವಾಗಿತ್ತು.  ಆದರೆ, ದೇಶದ ಶತ್ರುಗಳ ಚಟುವಟಿಕೆಗಳ ಕುರಿತು ತಿಳಿದುಕೊಳ್ಳಲು ಭಾರತಕ್ಕೆ ಸಿಕ್ಕ ಅತಿ ದೊಡ್ಡ ತಾಂತ್ರಿಕ ಅಸ್ತ್ರ ಇದಾಗಿದೆ. RISAT-2BR 1 ಒಂದು ರೇಡಾರ್ ಇಮೇಜಿಂಗ್ ಆರ್ಥ್ ಒಬ್ಸರ್ವೇಶನ್ ಉಪಗ್ರಹವಾಗಿದ್ದು, ಈ ಉಪಗ್ರಹದಲ್ಲಿ ಅಳವಡಿಸಲಾಗಿರುವ ರೇಡಾರ್ ಮೂಲಕ ಭೂಮಿಯ ಫೋಟೋಗಳನ್ನು ಕ್ಲಿಕ್ಕಿಸುವ ಕ್ಷಮತೆ ಇದು ಹೊಂದಿದೆ.

2. ಒಟ್ಟು 628 ಕೆ.ಜಿ ಭಾರ ಹೊಂದಿರುವ ಈ ಸ್ವದೇಶಿ ನಿರ್ಮಿತ ಉಪಗ್ರಹವನ್ನು ಭೂಮಿಯಿಂದ ಸುಮಾರು 576 ಕಿ.ಮೀ ಎತ್ತರದಲ್ಲಿ ಸ್ಥಾಪಿಸಲಾಗಿದೆ. ಮುಂದಿನ 5 ವರ್ಷಗಳ ಕಾಲ ಇದು ಅಲ್ಲಿ ಕಾರ್ಯನಿರ್ವಹಿಸಲಿದೆ. ಈ ಉಪಗ್ರಹದಲ್ಲಿ X-band Synthetic Aperture Radar ಸಿಸ್ಟಂವನ್ನು ಅಳವಡಿಸಲಾಗಿದೆ. ಇದು ರಾತ್ರಿ, ಮೋಡ ಮುಸುಕಿದ ಹಾಗೂ ಬಿರುಗಾಳಿಯಂತಹ ಪರಿಸ್ಥಿತಿಗಳಲ್ಲಿಯೂ ಕೂಡ ಭೂಮಿಯ ನಿಖರ ಫೋಟೋಗಳನ್ನು ಕ್ಲಿಕ್ಕಿಸುವ ಕ್ಷಮತೆ ಹೊಂದಿದೆ. ಇರುಳಿನಲ್ಲಿಯೂ ಕೂಡ ಹಗಲಿನಂತೆ ಕಾರ್ಯನಿರ್ವಹಿಸುವುದು ಈ ಉಪಗ್ರಹದ ವಿಶೇಷತೆ. ಏಕೆಂದರೆ ರಾತ್ರಿಹೊತ್ತು ಹಾಗೂ ಹವಾಮಾನದ ವೈಪರಿತ್ಯ ಅರಿತು ಭಾರತದ ಗಡಿ ನುಸುಳುವುದು ಪಾಕಿಸ್ತಾನದ ಹಳೆ ಚಾಳಿಯಾಗಿದೆ.

3. ಈ ಉಪಗ್ರಹದಲ್ಲಿ ಕ್ಯಾಮರಾ ಬದಲು ಅದರಲ್ಲಿ ಅಳವಡಿಸಲಾಗಿರುವ ರೇಡಾರ್ ಫೋಟೋಗಳನ್ನು ಕ್ಲಿಕ್ಕಿಸುತ್ತದೆ. ರೇಡಾರ್ ನಿಂದ ಹೊರಹೊಮ್ಮುವ ರೇಡಿಯೋ ಅಲೆಗಳು ಭೂಮಿಯ ಮೇಲಿರುವ ವಸ್ತುಗಳಿಗೆ ಬಡಿದು ಹಿಂದಿರುಗುತ್ತವೆ ಹಾಗೂ ಆ ರೇಡಿಯೋ ಅಲೆಗಳ ಸಹಾಯದಿಂದ ಸ್ಪಷ್ಟ ಹಾಗೂ ಹೈರೆಸಲ್ಯೂಶನ್ ಫೋಟೋಗಳು ತಯಾರಾಗುತ್ತವೆ. ಶತ್ರುಗಳ ಪ್ರದೇಶದಲ್ಲಿರುವ ಬಂಕರ್, ಶಸ್ತ್ರಾಸ್ತ್ರ ಇತ್ಯಾದಿಗಳನ್ನು ಸುಲಭವಾಗಿ ಈ ರೇಡಾರ್ ಸಹಾಯದಿಂದ ಪತ್ತೆಹಚ್ಚಬಹುದಾಗಿದೆ.

4. ಭೂಮಿಯ ಮೇಲಿರುವ 1 ಫೂಟ್ ಗಾತ್ರದ ಯಾವುದೇ ವಸ್ತುಗಳ 3-D ಫೋಟೋ ಈ ರೇಡಾರ್ ಕ್ಲಿಕ್ಕಿಸುವ ಕ್ಷಮತೆ ಹೊಂದಿದೆ. ಅಂದರೆ, ಭೂಮಿಯ ಮೇಲಿರುವ ಒಂದು ನೀರಿನ ಬಾಟಲಿಯನ್ನೂ ಸಹ 576 ಕಿ.ಮೀ. ಎತ್ತರದಿಂದ ನಾವು ಪತ್ತೆಹಚ್ಚಬಹುದಾಗಿದೆ. ನಿಮ್ಮ ಮೊಬೈಲ್ ಫೋನ್ ನಲ್ಲಿರುವ ಗೂಗಲ್ ಮ್ಯಾಪ್ ಮಾದರಿಯಲ್ಲೇ ಈ ರೇಡಾರ್ ಫೋಟೋಗಳಿರಲಿವೆ.

5.ಭಾರತದ ಉಪಮಹಾದ್ವೀಪಗಳ ಮೇಲೂ ಕೂಡ ಈ ಉಪಗ್ರಹ ನಿಗಾ ವಹಿಸಲಿದೆ ಎಂಬುದು ಈ ಉಪಗ್ರಹದ ಇನ್ನೊಂದು ವಿಶೇಷತೆ. ಜೊತೆಗೆ ಸಾಗರಗಳ ಬೆಹುಗಾರಿಕೆಗೂ ಸಹ ಈ ಉಪಗ್ರಹ ಸಹಾಯಕಾರಿಯಾಗಲಿದೆ. ಭೂಮಿಯ ಮೇಲಿರುವ 1 ಫೂಟ್ ಗಾತ್ರದ ವಸ್ತುವನ್ನು ಸಹ ಇದು ನಿಖರವಾಗಿ ಕ್ಲಿಕ್ಕಿಸುತ್ತದೆ ಎಂದರೆ, ಸಮುದ್ರದಲ್ಲಿ ಚಲಿಸುತ್ತಿರುವ ಸಾವಿರಾರು ಫೂಟ್ ಉದ್ದದ ಹಡಗುಗಳ ಫೋಟೋ ಕ್ಲಿಕ್ಕಿಸುವುದು ಇದಕ್ಕೆ ಎಷ್ಟೊಂದು ಸುಲಭದ ಕೆಲಸವೆಂಬುದು ನೀವೇ ಊಹಿಸಿ. ಕೇವಲ 90 ನಿಮಿಷಗಳಲ್ಲಿ ಈ ಉಪಗ್ರಹ ಪೃಥ್ವಿಯ ಒಂದು ಪ್ರದಕ್ಷಿಣೆ ಪೂರ್ಣಗೊಳಿಸುತ್ತದೆ. ಅಂದರೆ ಒಂದು ದಿನದಲ್ಲಿ ಹಲವಾರು ಬಾರಿ ಭೂಮಿಯನ್ನು ಸುತ್ತುಹಾಕುವ ಈ ಉಪಗ್ರಹ ಪ್ರಥ್ವಿಯ ಮೇಲಿರುವ ಯಾವುದೇ ಗುರಿಯ ನಿಖರ ಚಿತ್ರಗಳನ್ನು ಇದರ ಸಹಾಯದಿಂದ ಪಡೆದುಕೊಳ್ಳಬಹುದಾಗಿದೆ.

6. ಈ ಉಪಗ್ರಹ ಹಾಗೂ ಇದರಲ್ಲಿ ಅಳವಡಿಸಲಾಗಿರುವ ರೇಡಾರ್ ಗಳನ್ನು ಸ್ವದೇಶದಲ್ಲಿಯೇ ನಿರ್ಮಿಸಲಾಗಿವೆ. ಈ ಉಪಗ್ರಹದ ಹೆಚ್ಚಿನ ಮಾಹಿತಿ ಪಡೆಯಲು ನಾವು ಬಾಹ್ಯಾಕಾಶ ವಿಜ್ಞಾನಿಗಳನ್ನು ಸಂಪರ್ಕಿಸಿದ್ದು, ಅವರು ತುಂಬಾ ಸರಳ ಭಾಷೆಯಲ್ಲಿ ಈ ಉಪಗ್ರಹದ ವಿಶೇಷತೆಯನ್ನು ತಿಳಿಸಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಈ ಮಿಶನ್ ದೇಶದ ಸುರಕ್ಷತೆಯ ಜೋತೆಗೆ ಇತರೆ ದೇಶಗಳ 9 ಉಪಗ್ರಹಗಳನ್ನು ಉಡಾವಣೆ ಮಾಡಿ ಹಣವನ್ನೂ ಗಳಿಕೆ ಕೂಡ ಮಾಡಿದೆ.

7. RISAT-2BR 1 ಸೇರಿದಂತೆ ಅಮೇರಿಕದ 6, ಇಸ್ರೇಲ್, ಇಟಲಿ ಹಾಗೂ ಜಪಾನ್ ನ ತಲಾ ಒಂದು ಉಪಗ್ರಹಗಳನ್ನೂ ಸಹ ಬಾಹ್ಯಾಕಾಶಕ್ಕೆ ರವಾನಿಸಲಾಗಿದೆ. ಉಡಾವಣೆಗೊಂಡ ಇಸ್ರೇಲ್ ಉಪಗ್ರಹವನ್ನು ವಿದ್ಯಾರ್ಥಿಗಳು ತಯಾರಿಸಿದ್ದು, ಇಸ್ರೇಲ್ ನ ಈ ಶೈಕ್ಷಣಿಕ ಉಪಗ್ರಹದ ಕೇವಲ 2 ಕೆ.ಜಿ ತೂಕ ಹೊಂದಿದೆ. ಈ ಉಪಗ್ರಹದಲ್ಲಿ ಅಳವಡಿಸಲಾಗಿರುವ ಕ್ಯಾಮೆರಾ ವಾಯು ಹಾಗೂ ಜಲ ಮಾಲಿನ್ಯದ ಅಧ್ಯಯನಕ್ಕಾಗಿ ಪೃಥ್ವಿಯ ಚಿತ್ರಗಳನ್ನು ಕ್ಲಿಕ್ಕಿಸಲಿ.

8. ಭಾರತ ಹಾಗೂ ಇಸ್ರೇಲ್ ದೇಶಗಳ ನಡುವಿನ ಬಾಂಧವ್ಯ ಇದೀಗ ಭೂಮಿಯಿಂದ ಆಗಸಕ್ಕೆ ತಲುಪಿದೆ. RISAT ಸಿರೀಸ್ ಬೇಹುಗಾರಿಕಾ ಸ್ಯಾಟಲೈಟ್ ಗಳ ನಿರ್ಮಾಣ 2009 ರಲ್ಲೇ ಆರಂಭಗೊಂಡಿದ್ದು, ಇದಕ್ಕೆ ಇಸ್ರೇಲ್ ಸಹಾಯ ನೀಡಿದೆ. 2008 ರಲ್ಲಿ ನಡೆದ ಮುಂಬೈ ಭಯೋತ್ಪಾದಕ ದಾಳಿಯ ನಂತರ ದೇಶಗಳ ಶತ್ರುಗಳ ಮೇಲೆ ನಿಗಾವಹಿಸಲು ಈ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು.

9. ಈ ಸರಣಿಯ ನಾಲ್ಕನೇ ಉಪಗ್ರಹವನ್ನು ಇದೀಗ ಉಡಾವಣೆ ಮಾಡಲಾಗಿದೆ. ಸದ್ಯ ಬಾಹ್ಯಾಕಾಶದಲ್ಲಿ ಇಂತಹ ಎರಡು ಉಪಗ್ರಹಗಳಿವೆ. ಮುಂದಿನ ವರ್ಷ ಈ ಸರಣಿಯ ಮತ್ತೆ 2 ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ. ಈ ಉಪಗ್ರಹಗಳು ಪೃಥ್ವಿಯ ಕೆಳಕಕ್ಷೆಯಲ್ಲಿ ನಿರಂತರವಾಗಿ ಭೂಮಿಯನ್ನು ಸುತ್ತಲಿವೆ. ಬಾಹ್ಯಾಕಾಶದಲ್ಲಿ RISAT ಸಿರೀಸ್ ನ 4 ಉಪಗ್ರಹಗಳಿವೆ ಎಂದರೆ, ನಾವು ನಮ್ಮ ಶತ್ರುಗಳು ಹಾಗೂ ಅವರ ಚಟುವಟಿಕೆಗಳ ಮೇಲೆ 24x7 ನಿಗಾ ಇಡಲಿದ್ದೇವೆ ಎಂದೇ ಅರ್ಥ. ಒಂದು ವೇಳೆ ಗಡಿಭಾಗದ ಯಾವುದೇ ಪ್ರದೇಶದಲ್ಲಿ ಒಳನುಸುಳುವಿಕೆಯ ಯತ್ನ ನಡೆಯುತ್ತಿದೆ ಎಂದರೆ ಈ ನಾಲ್ಕೂ ಉಪಗ್ರಹಗಳು ನಿರಂತರವಾಗಿ ಆ ಲೋಕೇಶನ್ ನ ಕವರೇಜ್ ಮಾಡಲಿವೆ ಹಾಗೂ ದೇಶದ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿವೆ.

10. ಈ ಬೇಹುಗಾರಿಕಾ ಉಪಗ್ರಹಗಳು ಆಧುನಿಕ ಗುಪ್ತಚರರ ಪಾತ್ರ ನಿರ್ವಹಿಸಲಿವೆ. ಇವುಗಳಿಂದ ಯಾವುದೇ ಶತ್ರುಗಳ ದೇಶದ ಗಡಿ ಪ್ರವೇಶಿಸಿ ಪ್ರಾಣ ಪಣಕ್ಕಿಡುವ ಅಗತ್ಯವಿಲ್ಲ. ಈ ಉಪಗ್ರಹಗಳಿಂದ ಸಿಕ್ಕ ಮಾಹಿತಿ ಗೌಪ್ಯವಾಗಿ ಇಡಲಾಗುತ್ತಿದೆ. ಆದರಿಂದ ಬಾಹ್ಯಾಕಾಶದಲ್ಲಿ ಇರುವ ಭಾರತದ ಅತ್ಯಂತ ಸ್ಮಾರ್ಟ್ ಗುಪ್ತಚರರ ಮಾಹಿತಿಗಾಗಿ ನಮ್ಮ ವಿಶೇಷ ರಿಪೋರ್ಟ್ ಇತರರಿಗೂ ಓದಲು ಹೇಳಿ.

Trending News